For Quick Alerts
  ALLOW NOTIFICATIONS  
  For Daily Alerts

  'ಟೀಂ ಇಂಡಿಯಾ ಆಯ್ಕೆ ಸಮಿತಿ ಅನುಷ್ಕಾಗೆ ಟೀ ಸಪ್ಲೈ ಮಾಡುತ್ತಿದ್ದರು' ಆರೋಪಕ್ಕೆ ಅನುಷ್ಕಾ ಖಡಕ್ ಪ್ರತಿಕ್ರಿಯೆ

  |

  ಟೀಂ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ವಿಶೇಷ ಆತಿಥ್ಯ ನೀಡುತ್ತಿದೆ ಎಂಬ ಆರೋಪಕ್ಕೆ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಫಾರೂಖ್ ಇಂಜಿನಿಯರ್ ಮಾಡಿರುವ ಗಂಭೀರ ಆರೋಪಕ್ಕೆ ಅನುಷ್ಕಾ ಅಸಮಾಧಾನಾ ಹೊರಹಾಕಿದ್ದಾರೆ.

  ತನ್ನ ಮೇಲೆ ಬಂದಿರುವ ಆರೋಪಕ್ಕೆ ಅನುಷ್ಕಾ ಶರ್ಮಾ ದೀರ್ಘಾವಾದ ಟ್ವೀಟ್ ಮಾಡುವ ಮೂಲಕ ಆರೋಪ ತಳ್ಳಿಹಾಕಿದ್ದಾರೆ. "ಕಳೆದ ಕೆಲ ದಿನಗಳಿಂದ ನನ್ನ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತಿದ್ದಾರೆ. ಇಂತಹ ಸುಳ್ಳು ಸುದ್ದಿಗಳ ವಿರುದ್ಧ ಪ್ರತಿಕ್ರಿಯಿಸದಿದ್ದರೆ, ಇದು ಮತ್ತಷ್ಟು ಹರಡುತ್ತದೆ. ಹೀಗಾಗಿ ಇದರ ವಿರುದ್ಧ ಮಾತನಾಡಲು ನಿರ್ಧರಿಸಿದ್ದೇನೆ. ತಾವೇ ಸೃಷ್ಟಿಸಿದ ಮತ್ತು ಸುಳ್ಳು ಸುದ್ದಿಗಳಿಗೆ ತಲೆ ಕೊಡದೆ ಯಾವಾಗಲೂ ಮೌನವಾಗಿರುವುದನ್ನು ನಾನು ನನ್ನ ವೃತ್ತಿ ಜೀವನದಲ್ಲಿ ಕಳೆದ 11 ವರ್ಷಗಳಿಂದಲೂ ಪಾಲಿಸಿಕೊಂಡು ಬಂದಿದ್ದೇನೆ" ಎಂದು ಹೇಳಿದ್ದಾರೆ.

  ಅನುಷ್ಕಾ ಮತ್ತು ವಿರಾಟ್ ಮನೆಯ ತಿಂಗಳ ಬಾಡಿಗೆ ಕೇಳಿದ್ರೆ ಅಚ್ಚರಿ ಪಡ್ತೀರಿಅನುಷ್ಕಾ ಮತ್ತು ವಿರಾಟ್ ಮನೆಯ ತಿಂಗಳ ಬಾಡಿಗೆ ಕೇಳಿದ್ರೆ ಅಚ್ಚರಿ ಪಡ್ತೀರಿ

  ಯಾವಾಗಲು ನನ್ನನ್ನು ದೂಷಿಸಲಾಗುತ್ತೆ

  ಯಾವಾಗಲು ನನ್ನನ್ನು ದೂಷಿಸಲಾಗುತ್ತೆ

  "ಪ್ರತಿಬಾರಿಯೂ ನನ್ನನ್ನು ದೂಷಿಸಿದಾಗ ನಾನು ಸೈಲೆಂಟ್ ಆಗಿಯೆ ಇರುತ್ತಿದ್ದೆ. ಆದರೀಗ ಆಯ್ಕೆ ಸಮಿತಿ ಮೇಲೆ ಪ್ರಭಾವ ಬೀರುತ್ತಿದ್ದೇನೆ ಎನ್ನುವ ಅನೇಕ ಸುಳ್ಳು ಸುದ್ದಿಗಳಲ್ಲಿ ನನ್ನ ಹೆಸರನ್ನು ಬಳಸಿ ಸುಳ್ಳು ಹಬ್ಬಿಸಲಾಗುತ್ತಿದೆ. ನಾನು ಯಾವಾಗಲು ಸುಮ್ಮನಿರುತ್ತೇನೆ ಎಂದು ಸುಳ್ಳು ಕಥೆಗಳಲ್ಲಿ ನನ್ನ ಹೆಸರುಗಳನ್ನು ಬಳಸಿಕೊಳ್ಳಲಾಗುತ್ತಿದೆ" ಎಂದು ಅಸಮಾಧಾನ ಹೊರಹಾಕಿದ್ದಾರೆ.

  ಗ್ರೂಪ್ ಫೋಟೋ ವಿವಾದ

  ಗ್ರೂಪ್ ಫೋಟೋ ವಿವಾದ

  "ಈ ಹಿಂದೆ ನಾನು ಟೀಂ ಇಂಡಿಯಾದ ಗ್ರೂಪ್ ಫೋಟೋದಲ್ಲಿ ಕಾಣಿಸಿಕೊಂಡಿದ್ದಾಗ ವಿವಾದವಾಗಿತ್ತು. ನಾನ್ಯಾವತ್ತೂ ತಂಡದೊಂದಿಗೆ ಕಾಣಿಸಿಕೊಳ್ಳಲು ಬಯಸಿರಲಿಲ್ಲ. ಆದರೆ ಹೈ ಕಮೀಷನರ್ ಅವರ ಪತ್ನಿ ನನ್ನನ್ನು ನಿಲ್ಲುವಂತೆ ಕೇಳಿಕೊಂಡರು. ಹಾಗಾಗಿ ನಾನು ಫೋಟೊ ಪೋಸ್​ಗೆ ನಿಂತಿರುವುದಾಗಿ" ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.

  ದೀಪಾವಳಿ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿದೀಪಾವಳಿ ಸಂಭ್ರಮದಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ

  ನನ್ನ ಹೆಸರನ್ನು ಎಳೆದು ತರುವುದು ಸರಿಯಲ್ಲ

  ನನ್ನ ಹೆಸರನ್ನು ಎಳೆದು ತರುವುದು ಸರಿಯಲ್ಲ

  "ವಿಶ್ವಕಪ್ ಸಮಯದಲ್ಲಿ ಆಯ್ಕೆ ಸಮಿತಿಯವರು ನನಗೆ ಟೀ ಕೊಡುತ್ತಿದ್ದರು ಎನ್ನುವುದು ಹೊಸ ಸುಳ್ಳಾಗಿದೆ. ನಾನು ವಿಶ್ವಕಪ್ ಸಮಯದಲ್ಲಿ ಒಂದು ಆಟಕ್ಕೆ ಮಾತ್ರ ಬಂದಿದ್ದೇನೆ. ಅದೂ ಫ್ಯಾಮಿಲಿ ಬಾಕ್ಸ್ ನಲ್ಲಿ ಕುಳಿತುಕೊಂಡು ಆಟ ವೀಕ್ಷಿಸಿದ್ದೇನೆ. ಆಯ್ಕೆ ಸಮಿತಿ ಬಾಕ್ಸ್ ನಲ್ಲಿ ಕುಳಿತು ವೀಕ್ಷಿಸಿಲ್ಲ. ಆಯ್ಕೆ ಸಮಿತಿಯ ಆರ್ಹತೆಯನ್ನು ದೂಷಿಸಬೇಕಾದರೆ ಅವರ ವಿರುದ್ದ ಕಮೆಂಟ್ ಮಾಡಿ, ಅದೂ ನಿಮ್ಮ ಅಭಿಪ್ರಾಯ. ಆದರೆ ನನ್ನ ಹೆಸರನ್ನು ಅನಾವಶ್ಯವಾಗಿ ಎಳೆದು ತರಬೇಡಿ. ಈ ರೀತಿಯ ವಿಚಾಗಳಲ್ಲಿ ನನ್ನ ಹೆಸರನ್ನು ಎಳೆದು ತರುವುದು ಸರಿಯಲ್ಲ" ಎಂದು ಕಾರವಾಗಿ ಪ್ರತಿಕ್ರಿಯೆ ನೀಡುತ್ತ ದೀರ್ಘವಾಗಿ ಬರೆದುಕೊಂಡಿದ್ದಾರೆ. ಅನುಷ್ಕಾ ಮಾತಿಗೆ ಅನೇಕರು ಬೆಂಬಲ ಸೂಚಿಸಿದ್ದಾರೆ. ನಟಿ ಸೋನಂ ಕಪೂರ್ ಕೂಡ ಬೆಂಬಲ ಸೂಚಿಸಿ ರಿ ಟ್ವೀಟ್ ಮಾಡಿದ್ದಾರೆ.

  ಅನುಷ್ಕಾಗೆ ಇಂತಹ ಸ್ಥಿತಿ ಬರಬಾರದಿತ್ತು: ಕೊಹ್ಲಿ ಪತ್ನಿಯನ್ನ ಕಿಚಾಯಿಸಿದ ಚಹಾಲ್.!ಅನುಷ್ಕಾಗೆ ಇಂತಹ ಸ್ಥಿತಿ ಬರಬಾರದಿತ್ತು: ಕೊಹ್ಲಿ ಪತ್ನಿಯನ್ನ ಕಿಚಾಯಿಸಿದ ಚಹಾಲ್.!

  ಆಯ್ಕೆ ಸಮಿತಿ ಅನುಷ್ಕಾಗೆ ಟೀ ಕೊಡುತ್ತಿದ್ದರು

  ಆಯ್ಕೆ ಸಮಿತಿ ಅನುಷ್ಕಾಗೆ ಟೀ ಕೊಡುತ್ತಿದ್ದರು

  ತಂಡದ ಮಾಜಿ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಫಾರೂಖ್ ಇಂಜಿನಿಯರ್, ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧಿಕಾರಿಗಳು ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಈ ಬಾರಿ ನಡೆದಿದ್ದ ವಿಶ್ವಕಪ್ ವೇಳೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾಗೆ ಟೀ ಕೊಟ್ಟಿದ್ದನ್ನು ನೋಡಿದ್ದಾಗಿ ಹೇಳುವ ಮೂಲಕ. 'ಅವರೆಲ್ಲರೂ ಅನುಷ್ಕಾಗೆ ಚಹಾದ ಕಪ್ ತೆಗೆದುಕೊಂಡು ಹೋಗುತ್ತಿದ್ದರು,' ಎಂದು ಅಣಕವಾಡಿದ್ದರು.

  English summary
  Bollywood actress, team India captain Virat Kohli wife Anushka Sharma reaction about Saw Selectors Getting Tea.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X