For Quick Alerts
  ALLOW NOTIFICATIONS  
  For Daily Alerts

  'ಹೊಸ ಫ್ರೆಂಡ್' ಜೊತೆ ಕೊಹ್ಲಿ ಪ್ರೇಯಸಿ ಅನುಷ್ಕಾ ಡ್ಯುಯೆಟ್!

  By Bharath Kumar
  |

  ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ವಿರಾಟ್ ಪ್ರೇಯಸಿ ಅನುಷ್ಕಾ ಶರ್ಮಾ ಮತ್ತೊಬ್ಬರ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

  ನಾಳೆ (ಅಕ್ಟೋಬರ್-28) ಅನುಷ್ಕಾ ಶರ್ಮಾ ಅಭಿನಯದ 'ಎ ದಿಲ್ ಹೈ ಮುಷ್ಕಿಲ್' ಚಿತ್ರ ಬಿಡುಗಡೆಯಾಗುತ್ತಿದೆ. ಹೀಗಾಗಿ ಸ್ವಲ್ಪ ರಿಲೆಕ್ಸ್ ಮೂಡ್ ನಲ್ಲಿರುವ ಅನುಷ್ಕಾ ತನ್ನ ಕ್ಲೋಸ್ ಪ್ರೆಂಡ್ ಜೊತೆ ಟೈಮ್ ಪಾಸ್ ಮಾಡುತ್ತಿದ್ದಾರೆ.['ಏ ದಿಲ್ ಮುಷ್ಕಿಲ್' ಟಿಕೆಟ್ ಬೆಲೆ ಕೇಳಿದ್ರೆ ತಲೆ ಗಿರ್ರ್ ಅನ್ನೋದು ಪಕ್ಕಾ]

  ಅಂದ್ಹಾಗೆ, ಅನುಷ್ಕಾ ಶರ್ಮಾಗೆ ಕ್ಲೋಸ್ ಫ್ರೆಂಡ್, ಬೆಸ್ಟ್ ಫ್ರೆಂಡ್ ಅಂದ್ರೆ, ಯಾರೋ ವ್ಯಕ್ತಿಯಲ್ಲ. ಅದು ಅನುಷ್ಕಾಳ ಅಚ್ಚು ಮೆಚ್ಚಿನ 'ಲಾಬ್ರಡೋರ್ ನಾಯಿ'. ಅನುಷ್ಕಾಳ ಈ ನಾಯಿಯ ಹೆಸರು 'ಡ್ಯುಡ್ ಶರ್ಮಾ' ಅಂತ. ಅನುಷ್ಕಾಳ 'ಡ್ಯುಡ್' ಈಗಾಗಲೇ ಸೋಶಿಯಲ್ ಮಿಡಿಯಾದಲ್ಲಿ ಹೆಚ್ಚು ಫೇಮಸ್ ಆಗಿದೆ. ಸದ್ಯ, 'ಎ ದಿಲ್ ಹೈ ಮುಷ್ಕಿಲ್' ಚಿತ್ರದ ಹಾಡನ್ನ ಅನುಷ್ಕಾ ಹಾಡಿ, ಅದಕ್ಕೆ ಡ್ಯುಡ್ ಕೊಟ್ಟಿರುವ ರಿಯಾಕ್ಷನ್ ವಿಡಿಯೋ ಈಗ ವೈರಲ್ ಆಗಿದೆ.

  ಇದಕ್ಕೂ ಮುಂಚೆ ಕೂಡ 'ಎ ದಿಲ್ ಹೈ ಮುಷ್ಕಿಲ್' ಚಿತ್ರದ 'ಬುಲೆಯಾ' ಹಾಡನ್ನ ಡ್ಯುಡ್ ಜೊತೆ ಅನುಷ್ಕಾ ಹಾಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಹಾಡಿಗೆ ಕೂಡ ಡ್ಯುಡ್ ಜೊತೆ ಅನುಷ್ಕಾ ಕಾಣಿಸಿಕೊಂಡಿದ್ದು, ಅನುಷ್ಕಾ ಶರ್ಮಾನೇ ಇನ್ಸ್ ಟಾಗ್ರಾಮ್ ನಲ್ಲಿ ಈ ವಿಡಿಯೋ ಅಪ್‌ಲೋಡ್‌ ಮಾಡಿದ್ದಾರೆ.

  Anushka Sharma's Dog Reaction to Bulleya Song

  ಅನುಷ್ಕಾ ಹಾಗೂ ಡ್ಯುಡ್ ಜೊತೆಯಾಗಿರುವ ಈ ವಿಡಿಯೋ ಅಭಿಮಾನಿಗಳನ್ನ ರಂಜಿಸುತ್ತಿದ್ದು, ಸುಮಾರು 3.8 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನ ನೋಡಿ ಎಂಜಾಯ್ ಮಾಡಿದ್ದಾರೆ. ಕರಣ್ ಜೋಹರ್ ನಿರ್ದೇಶನದ 'ಎ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ರಣ್ಬೀರ್ ಕಪೂರ್, ಐಶ್ವರ್ಯ ರೈ ಬಚ್ಚನ್ ಹಾಗೂ ಅನುಷ್ಕಾ ಶರ್ಮಾ ಅಭಿನಯಿಸಿದ್ದಾರೆ.[18 ವರ್ಷದ ಹಿಂದಿನ ಹಳೇ ಫೋಟೋ ರಹಸ್ಯ ಬಯಲು ಮಾಡಿದ ಐಶ್ವರ್ಯ]

  ಅನುಷ್ಕಾ ಹಾಗೂ 'ಡ್ಯುಡ್' ಡ್ಯುಯೆಟ್ ಸಾಂಗ್ ನೀವು ನೋಡಿ ಮಜಾ ಮಾಡಿ....[ಇಲ್ಲಿದೆ ಲಿಂಕ್ ನೋಡಿ ]

  English summary
  Video of Anushka Sharma with her pet 'Dude'is making rounds in social media. Anushka Sharma starrer 'Ae Dil Hai Mushkil' also features Ranbir Kapoor, and Aishwarya Rai Bachchan in lead, directed by Karan Johar. The Movie is releasing tomorrow (October 28)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X