For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಶರ್ಮಾ ಮುಖ ನೋಡಿ ಭಯಗೊಂಡ ಬಾಲಿವುಡ್

  By Bharath Kumar
  |

  ಅನುಷ್ಕಾ ಶರ್ಮಾ ಬಾಲಿವುಡ್ ನ ಹಾಟೇಸ್ಟ್ ಹಾಗೂ ಗ್ಲಾಮರೆಸ್ ನಟಿ. ಆದ್ರೀಗ, ಈ ನಟಿಯನ್ನ ನೋಡಲು ಭಯ ಉಂಟಾಗುತ್ತಿದೆ. ಅದಕ್ಕೆ ಕಾರಣ ಬಾಲಿವುಡ್ ನ ಹೊಸ ಚಿತ್ರ 'ಪರಿ'.

  ಹೌದು, 'ಪರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಅನುಷ್ಕಾ ಶರ್ಮಾ ಅವರ ಲುಕ್ ಮತ್ತು ಗೆಟಪ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿದೆ. ನೀಲಿ ಕಣ್ಣುಗಳು, ಕೆದರಿದ ಕೂದಲು, ನಿಗೂಢ ಮುಖಭಾವ ಹೀಗೆ ಏನೋ ಸಂಕಷ್ಟದಲ್ಲಿ ಸಿಲುಕಿಕೊಂಡಿರುವಂತಹ ಯುವತಿಯ ರೀತಿಯಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನೋಡಿದ ನಂತರ ಚಿತ್ರದ ಬಗ್ಗೆ ಇದ್ದ ಕುತೂಹಲ ಈಗ ಮತ್ತಷ್ಟು ಹೆಚ್ಚಾಗುತ್ತಿದೆ.

  ಅನುಷ್ಕಾ ಶರ್ಮಾ 'ಫಿಲೌರಿ' ಚಿತ್ರಕ್ಕೆ ವಿರಾಟ್ ಕೊಹ್ಲಿ ಪ್ರೊಡ್ಯೂಸರ್?

  ಅಂದ್ಹಾಗೆ, 'ಪರಿ' ಅನುಷ್ಕಾ ಶರ್ಮಾ ಮತ್ತು ಪರಂಬ್ರತ ಚಟರ್ಜಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಥ್ರಿಲ್ಲಿಂಗ್ ಸಿನಿಮಾ. ಪ್ರೊಸಿತ್ ರಾಯ್ ಎಂಬ ನವ ನಿರ್ದೇಶಕ ಮೊಟ್ಟಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಈ ಚಿತ್ರಕ್ಕೆ ಅನುಷ್ಕಾ ಶರ್ಮಾ ಸಹ ನಿರ್ಮಾಪಕಿಯಾಗಿ ಬಂಡವಾಳ ಹಾಕುತ್ತಿದ್ದಾರೆ. ಇದಕ್ಕು ಮುಂಚೆ 'NH10' ಮತ್ತು 'ಫಿಲೌರಿ' ಚಿತ್ರಗಳನ್ನ ಅನುಷ್ಕಾ ಶರ್ಮಾ ನಿರ್ಮಾಣ ಮಾಡಿದ್ದರು.

  ಅನುಷ್ಕಾ ಶರ್ಮಾ ನಿರ್ಮಾಣದ 'ಫಿಲೌರಿ' ರಿಲೀಸ್ ಗೆ ರೆಡಿ

  ಸದ್ಯ, ಶಾರುಖ್ ಖಾನ್ ಅಭಿನಯದ 'ಜಬ್ ಹ್ಯಾರಿ ಮೆಟ್ ಸೇಜಲ್' ಚಿತ್ರದಲ್ಲಿ ಅನುಷ್ಕಾ ಶರ್ಮಾ ನಾಯಕಿಯಾಗಿ ಅಭಿನಯಿಸುತ್ತಿದ್ದಾಳೆ. ಇದರ ಜೊತೆಗೆ ಈಗ 'ಪರಿ' ಚಿತ್ರದ ಶೂಟಿಂಗ್ ಶುರು ಮಾಡಿದ್ದಾರೆ. ಎಲ್ಲಾ ಪ್ಲಾನ್ ಪ್ರಕಾರ ನಡೆದರೇ, ಮುಂದಿನ ವರ್ಷದಲ್ಲಿ 'ಪರಿ' ಸಿನಿಮಾ ತೆರೆಗೆ ಬರಲಿದೆ.

  English summary
  Anushka Sharma recently shared the first look of her upcoming film Pari. The actress looks unrecognisable in the haunting poster. The Movie Story Directed By Prosit Roy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X