Just In
- 10 hrs ago
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- 11 hrs ago
'ಮತ್ತೆ ಮನ್ವಂತರ' ತರುತ್ತಿದ್ದಾರೆ ಟಿ.ಎನ್.ಸೀತಾರಾಮ್
- 11 hrs ago
ಚೈತ್ರಾ ಕೊಟೂರು ಪತಿ ಹಾಗೂ ಕುಟುಂಬದವರು ನಾಪತ್ತೆ
- 11 hrs ago
ಪವನ್ ಕಲ್ಯಾಣ್ ಮಗಳ ಕುರಿತು ಸಹನಟಿ ಅನನ್ಯಾ ಮಾತು
Don't Miss!
- Lifestyle
ಸೋಮವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- News
ಕರ್ಫ್ಯೂ ನಡುವೆಯೂ ಮೋಜು ಮಸ್ತಿ! ಪಾರ್ಟಿ ಮಾಡುತ್ತಿದ್ದ ಗ್ಯಾಂಗ್ ಕಂಬಿ ಹಿಂದೆ..!
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Automobiles
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದುವೆಗೆ ಮುನ್ನ ಅನುಷ್ಕಾ ಹೇಳಿದ್ದ ಮಾತು ಈಗ ವೈರಲ್, ಆ ವಿಡಿಯೋದಲ್ಲಿ ಏನಿದೆ?
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಕೆಲಸಕ್ಕೆ ಹಾಜರ್ ಆಗಿದ್ದಾರೆ. ಗರ್ಭಿಣಿ ಆದ್ಮೇಲೆ ಸಿನಿಮಾದಿಂದ ಅಂತರ ಕಾಯ್ದುಕೊಂಡಿದ್ದ ವಿರಾಟ್ ಕೊಹ್ಲಿ ಪತ್ನಿ ಮಗುವಿಗೆ ಜನ್ಮ ನೀಡಿದ ಎರಡು ತಿಂಗಳ ನಂತರ ಮತ್ತೆ ಶೂಟಿಂಗ್ ಆರಂಭಿಸಿದ್ದಾರೆ. ಜನವರಿ 11 ರಂದು ಅನುಷ್ಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಹುಶಃ ಇನ್ನೊಂದಷ್ಟು ದಿನ ವಿರಾಟ್ ಪತ್ನಿ ವಿಶ್ರಾಂತಿ ಪಡೆಯಬಹುದು. ಈ ವರ್ಷ ಸಿನಿಮಾ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿತ್ತು.
ಆದರೆ, ಸರ್ಪ್ರೈಸ್ ಎಂಬಂತೆ ಅನುಷ್ಕಾ ಶರ್ಮಾ ಮತ್ತೆ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗಷ್ಟೆ ಅನುಷ್ಕಾ ಶೂಟಿಂಗ್ ಆರಂಭಿಸಿದ್ದರು. ಜಾಹೀರಾತಿನಲ್ಲಿ ನಟಿಸುವ ಮೂಲಕ ಕಂಬ್ಯಾಕ್ ಮಾಡಿದ್ದಾರೆ. ಇಂತಹ ಸಮಯದಲ್ಲಿ ಅನುಷ್ಕಾ ಅವರ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ಹಿಂದೆ ಅನುಷ್ಕಾ ಶರ್ಮಾ ಮದುವೆ ಬಳಿಕ ನಾನು ಮತ್ತೆ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡಿರುವ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಂದೆ ಓದಿ....
ಮಗುವಿಗೆ ಜನ್ಮ ನೀಡಿದ ಬಳಿಕ ಮತ್ತೆ ಕೆಲಸಕ್ಕೆ ಮರಳಿದ ನಟಿ ಅನುಷ್ಕಾ ಶರ್ಮಾ

ಹಳೆ ವಿಡಿಯೋದಲ್ಲಿ ಏನಿದೆ?
ಮದುವೆಗೂ ಮುಂಚೆ ನಟಿ ಸಿಮಿ ಗರೇವಾಲ್ ನಿರೂಪಣೆ ಮಾಡ್ತಿದ್ದ ಟಾಕ್ ಶೋನಲ್ಲಿ ಭಾಗವಹಿಸಿದ್ದ ನಟಿ ಅನುಷ್ಕಾ ಶರ್ಮಾ 'ಮದುವೆ ಆದ್ಮೇಲೆ ನಾನು ಸಿನಿಮಾ ಮಾಡಲ್ಲ' ಎಂದು ಹೇಳಿದ್ದರು. ಮದುವೆ ನಿಮಗೆ ಎಷ್ಟು ಪ್ರಾಮುಖ್ಯತೆ ಎಂದು ನಿರೂಪಕಿ ಕೇಳಿದ್ದಕ್ಕೆ ಉತ್ತರಿಸಿರುವ ಅನುಷ್ಕಾ ''ನಾನು ಮದುವೆ ಆಗ್ತೇನೆ, ಮಕ್ಕಳನ್ನು ಪಡೆಯುತ್ತೇನೆ, ಮದುವೆ ಆದ್ಮೇಲೆ ಮತ್ತೆ ಕೆಲಸ ಮಾಡಲ್ಲ'' ಎಂದು ಈ ಸಂದರ್ಶನದಲ್ಲಿ ಹೇಳಿದ್ದಾರೆ. ಈ ವಿಡಿಯೋ ಕ್ಲಿಪ್ ಈಗ ವೈರಲ್ ಆಗಿದೆ.

ದಶಕದ ಹಿಂದೆ ಹೇಳಿರುವ ಹೇಳಿಕೆ
ಅಂದ್ಹಾಗೆ, ಅನುಷ್ಕಾ ಶರ್ಮಾ ಮಾತನಾಡಿರುವ ಈ ಸಂದರ್ಶನ ದಶಕ ಹಿಂದಿನದ್ದು. ಈಗ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಮದುವೆ ಆಗಿ, ಒಂದು ಮಗುವಿಗೆ ತಾಯಿ ಆಗಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮದುವೆ ಆದ್ಮೇಲೆಯೂ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂದುವರಿಯುತ್ತಿರುವ ಅನುಷ್ಕಾ ಬಗ್ಗೆ ಬಾಲಿವುಡ್‌ನಲ್ಲಿ ಮೆಚ್ಚುಗೆ ಇದೆ.

ಅನುಷ್ಕಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ನೆಟ್ಟಿಗರು
ಹಳೆ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಅನುಷ್ಕಾ ಕುರಿತು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ''ಅನುಷ್ಕಾ ಕೆಲಸಕ್ಕೆ ಮರಳಿದ್ದಕ್ಕೆ ತುಂಬಾ ಹೆಮ್ಮೆಪಡುತ್ತಾರೆ. ಬುಲ್ ಬುಲ್ ಅಂತಹ ಹೆಚ್ಚು ಮಹಿಳಾ ಕೇಂದ್ರಿತ ಚಿತ್ರಗಳನ್ನು ನಿರ್ಮಿಸಲು ನಿರ್ಧರಿಸಬಹುದು'' ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ. ಇಂತಹ ನೂರಾರು ಕಾಮೆಂಟ್‌ಗಳು ಆ ವಿಡಿಯೋಗೆ ಬಂದಿದೆ.

ಶಾರೂಖ್ ಜೊತೆ ಕೊನೆಯ ಚಿತ್ರ ಮಾಡಿದ್ದ ಅನುಷ್ಕಾ
2018ರಲ್ಲಿ ಬಿಡುಗಡೆಯಾಗಿದ್ದ ಜೀರೋ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಕೊನೆಯದಾಗಿ ನಟಿಸಿದ್ದರು. ಅದಾದ ಬಳಿಕ 'ಆಂಗ್ರೇಜಿ ಮೀಡಿಯಂ' ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ನಂತರ 'ಪಾತಾಳ್ ಲೋಕ್' ಎಂಬ ವೆಬ್ ಸಿರೀಸ್ ನಿರ್ಮಾಣ ಮಾಡಿದರು. 'ಬುಲ್ ಬುಲ್' ಎಂಬ ಸಿನಿಮಾ ಸಹ ಅನುಷ್ಕಾ ನಿರ್ಮಿಸಿದ್ದರು. ಇದೀಗ, ಮಗುವಿಗೆ ಜನ್ಮ ನೀಡಿದ ಬಳಿಕ ಅನುಷ್ಕಾ ಮೊದಲ ಪ್ರಾಜೆಕ್ಟ್ ಯಾವುದು ಎಂದು ಕುತೂಹಲ ಮೂಡಿಸಿದೆ.