For Quick Alerts
  ALLOW NOTIFICATIONS  
  For Daily Alerts

  ವಿರಾಟ್ ಕೊಹ್ಲಿ 'ದಿ ಬೆಸ್ಟ್ ಚೇಸರ್' ಎಂದ ನೆಟ್ಟಿಗರು!

  |

  ಬಾಲಿವುಡ್ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗುರುವಾರ ಬೆಳಗ್ಗೆ ಅನುಷ್ಕಾ ಮತ್ತು ಕೊಹ್ಲಿ ಇಬ್ಬರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟ ಮಾಡಿದ್ದಾರೆ.

  ವಿರುಷ್ಕಾ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗ್ತಿದೆ. ಕ್ರಿಕೆಟ್ ಆಟಗಾರರು ಹಾಗೂ ಸಿನಿ ತಾರೆಯರು ವಿರುಷ್ಕಾ ದಂಪತಿಗೆ ಶುಭಕೋರಿದ್ದರೆ, ಮತ್ತೊಂದೆಡೆ ಹಾಸ್ಯಾಸ್ಪದ ಚರ್ಚೆಗಳು ಸಹ ವೈರಲ್ ಆಗ್ತಿದೆ. ಹಾಗಾದ್ರೆ, ಕೊಹ್ಲಿ-ಅನುಷ್ಕಾ ಕುರಿತು ಏನೆಲ್ಲಾ ಚರ್ಚೆ ಆಗ್ತಿದೆ ಎಂದು ನೋಡೋಣ. ಮುಂದೆ ಓದಿ...

  ಹಬ್ಬ ಮಾಡ್ಕೊಳ್ಳೋಣ....

  ಹಬ್ಬ ಮಾಡ್ಕೊಳ್ಳೋಣ....

  ಬಾಹುಬಲಿ ಚಿತ್ರದಲ್ಲೊಂದು ದೃಶ್ಯ ಇದೆ. ಅರಮನೆಯಿಂದ ಬಾಹಬಲಿಯನ್ನು (ಪ್ರಭಾಸ್) ಹೊರಗೆ ಕಳುಹಿಸಲಾಗುತ್ತದೆ. ರಾಜಮಾತೆಯ ಆದೇಶದಂತೆ ಅರಮೆನಯಿಂದ ಹೊರಗೆ ಬಂದ ಬಾಹುಬಲಿಯನ್ನು ಸ್ವಾಗತಿಸುವ ಜನರು ''ದೇವರೇ ನಮ್ಮ ಬಳಿ ಬರ್ತಿದೆ, ಹಬ್ಬ ಮಾಡ್ಕೊಳ್ಳೋಣ ಅಂತಾರೆ''. ಆ ದೃಶ್ಯವನ್ನು ವಿರುಷ್ಕಾ ದಂಪತಿಯ ಈ ಸಂದರ್ಭಕ್ಕೆ ಲಿಂಕ್ ಮಾಡಲಾಗಿದೆ.

  ಗುಡ್ ನ್ಯೂಸ್: ತಂದೆ-ತಾಯಿ ಆಗ್ತಿದ್ದಾರೆ ಅನುಷ್ಕಾ-ವಿರಾಟ್ ಕೊಹ್ಲಿ

  ಈ ಸಲ ಚೈಲ್ಡ್ ನಮ್ದೆ....

  ಈ ಸಲ ಚೈಲ್ಡ್ ನಮ್ದೆ....

  ಅನುಷ್ಕಾ ಶರ್ಮಾ ಗರ್ಭಿಣಿ ಎಂಬ ಸುದ್ದಿ ಪ್ರಕಟಗೊಂಡ ಬಳಿಕ ವಿರಾಟ್ ದಂಪತಿಗೆ ಶುಭಕೋರಿರುವ ನಟ ಡ್ಯಾನಿಶ್ ಸೇಠ್ ''ಈ ಸಲ ಚೈಲ್ಡ್ ನಮ್ದೆ....'' ಎಂದಿದ್ದಾರೆ. ಈ ಸುದ್ದಿ ಕೇಳಿ ಭಾರತೀಯ ಮಾಧ್ಯಮಗಳು ಹೇಗೆ ಸುದ್ದಿ ಮಾಡುತ್ತೆ ಎನ್ನುವುದು ಅವರದ್ದೇ ಆದ ಸ್ಟೈಲ್‌ನಲ್ಲಿ ವಿಡಿಯೋ ಮಾಡಿ ತೋರಿಸಿದ್ದಾರೆ.

  ತೈಮೂರ್ ಅಳುತ್ತಿದ್ದಾನೆ

  ತೈಮೂರ್ ಅಳುತ್ತಿದ್ದಾನೆ

  ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಚೊಚ್ಚಲ ಮಗು ನಿರೀಕ್ಷೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಕರೀನಾ ಕಪೂರ್ ಮತ್ತು ಸೈಪ್ ಪುತ್ರ ತೈಮೂರ್ ಅಳುತ್ತಿದ್ದಾನೆ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

  ಬೆಸ್ಟ್ ಚೇಸರ್ ಕೊಹ್ಲಿ

  ಬೆಸ್ಟ್ ಚೇಸರ್ ಕೊಹ್ಲಿ

  ಹಾರ್ದಿಕ್ ಪಾಂಡ್ಯ ಮತ್ತು ನತಾಶ ಜೋಡಿ ಇತ್ತೀಚಿಗಷ್ಟೆ ಮಗುವಿಗೆ ಜನ್ಮ ನೀಡಿದ್ದರು. ಈಗ ವಿರಾಟ್‌ಗೆ ಹೋಲಿಸಿ 'ಕೊಹ್ಲಿ ದಿ ಬೆಸ್ಟ್ ಚೇಸರ್' ಎಂದು ಹೇಳುತ್ತಿದ್ದಾರೆ.

  English summary
  Indian cricketer Virat kohli announced his wife Anushka Sharma pregnancy. here is the twitter reactions.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X