For Quick Alerts
  ALLOW NOTIFICATIONS  
  For Daily Alerts

  ಪ್ರಣಯ ಪಕ್ಷಿಗಳ ಜೊತೆ ಅನುಷ್ಕಾ-ವಿರಾಟ್ ದಂಪತಿಯ ಸುತ್ತಾಟ

  |

  ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ಸದ್ಯ ಪತಿ ವಿರಾಟ್ ಕೊಹ್ಲಿ ಜೊತೆ ಇಂಗ್ಲೆಂಡ್‌ನಲ್ಲಿದ್ದಾರೆ. ತಿಂಗಳ ಹಿಂದೆಯೇ ಇಂಗ್ಲೆಂಡ್‌ಗೆ ತೆರಳಿರುವ ಕೊಹ್ಲಿ ದಂಪತಿ ಮಸ್ತ್ ಮಜಾ ಮಾಡುತ್ತಿದ್ದಾರೆ. ಲವ್ ಬರ್ಡ್ಸ್ ಜೊತೆ ಓಡಾಡುತ್ತಿರುವ ವಿರಾಟ್- ಅನುಷ್ಕಾ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ಅಂದಹಾಗೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ನಟಿ ಅಥಿಯಾ ಶೆಟ್ಟಿ, ಇಶಾಂತ್ ಶರ್ಮಾ ಸೇರಿದಂತೆ ಅನೇಕರ ಜೊತೆ ಸುತ್ತಾಡುತ್ತಿದ್ದಾರೆ. ರಾಹುಲ್ ಮತ್ತು ಅಥಿಯಾ ಪ್ರಣಯ ಪಕ್ಷಿಗಳ ಜೊತೆ ವಿರಾಟ್ ಕೊಹ್ಲಿ ದಂಪತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂಗ್ಲೆಂಡ್‌ನಲ್ಲಿ ಓಡಾಡುತ್ತಿರುವ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ.

  ನಟಿ ಅನುಷ್ಕಾ ಶರ್ಮಾ ಫೋಟೋಗಳನ್ನು ಶೇರ್ ಮಾಡಿ, "ಹಮ್ ಸಾಥ್ ಸಾಥ್ ಹೈ" ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಮತ್ತು ಚಿತ್ರರಂಗದ ಗಣ್ಯರಿಂದ ಮೆಚ್ಚುಗೆಯ ಕಾಮೆಂಟ್ ಹರಿದುಬರುತ್ತಿದೆ. ವಿಶೇಷ ಎಂದರೆ ಅನುಷ್ಕಾ ದಂಪತಿ ಪುಟ್ಟ ಮಗಳು ವಮಿಕಾಗಳನ್ನು ಜೊತೆಯಲ್ಲೇ ಕರೆದುಕೊಂಡು ಸುತ್ತಾಡುತ್ತಿದ್ದಾರೆ. ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಅನುಷ್ಕಾ ಇದುವರೆಗೂ ಮಗುವಿನ ಮುಖವನ್ನು ತೋರಿಸಿಲ್ಲ. ವಿರಾಟ್-ಅನುಷ್ಕಾ ಮಗಳನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅನುಷ್ಕಾ ದಂಪತಿ ತಮ್ಮ ಮಗಳು ಅವಳೇ ಸ್ವಂತ ನಿರ್ಧಾರ ತೆಗೆದುಕೊಳ್ಳುವ ವಯಸ್ಸಾಗುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವುದಿಲ್ಲ, ಅಲ್ಲಿವರೆಗೂ ಕಾಯುತ್ತೇನೆ ಎಂದು ಹೇಳಿದ್ದರು.

  ಇನ್ನು ಲವ್ ಬರ್ಡ್ಸ್ ವಿಚಾರಕ್ಕೆ ಬರುವುದಾದರೆ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಪ್ರೀತಿ, ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರೂ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅಥಿಯಾ ಶೆಟ್ಟಿ ಮತ್ತು ಬಾಯ್ ಫ್ರೆಂಡ್ ಕೆ.ಎಲ್ ರಾಹುಲ್ ಇಬ್ಬರು ಮುಕ್ತವಾಗಿ ಇಂಗ್ಲೆಂಡ್ ಸುತ್ತಾಡುವ ಮೂಲಕ ಶೀಘ್ರದಲ್ಲೇ ಮದುವೆಯಾಗುವ ಸೂಚನೆ ನೀಡಿದ್ದಾರೆ.

  Anushka Sharma, Virat Kohli pose with Rumoured Lovers KL Rahul and Athiya Shetty

  ಅಂದಹಾಗೆ ಅಥಿಯಾ ಅಥವಾ ರಾಹುಲ್ ಎಲ್ಲಿಯೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗ ಪಡಿಸಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಇಬ್ಬರೂ ಸ್ನೇಹಿತರಷ್ಟೆ ಎಂದು ಜಾರಿಕೊಳ್ಳುತ್ತಾರೆ. ಇನ್ನು ಅಥಿಯಾ ಶೆಟ್ಟಿ ತಂದೆ ಖ್ಯಾತ ನಟ ಸುನಿಲ್ ಶೆಟ್ಟಿ ಕೂಡ ಮಗಳ ಪ್ರೀತಿಯ ಬಗ್ಗೆ ಬಹಿರಂಗ ಪಡಿಸಿಲ್ಲ. ಇತ್ತೀಚಿಗೆ ರಾಹುಲ್ ಮತ್ತು ಅಥಿಯಾ ಜೋಡಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುನಿಲ್, "ಹೌದು, ಅವಳು ಇಂಗ್ಲೆಂಡಿನಲ್ಲಿ ಇದ್ದಾಳೆ. ಸಹೋದರ-ಸಹೋದರಿ ಜೋಡಿ ಸಮಯ ಕಳೆಯಲು ಅಲ್ಲಿಗೆ ಹೋಗಿದ್ದಾರೆ" ಎಂದು ಸುನಿಲ್ ಶೆಟ್ಟಿ ಹೇಳಿದ್ದರು.

  ಇನ್ನು ಅಥಿಯಾ ಮತ್ತು ರಾಹುಲ್ ಇಬ್ಬರೂ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಮಾತನಾಡಿದ ಸುನಿಲ್, "ನನ್ನ ಪ್ರಕಾರ ಇಬ್ಬರೂ ಅದ್ಭುತವಾಗಿ ಕಾಣಿಸುತ್ತಾರೆ. ಇವರದ್ದು ಸುಂದರ ಜೋಡಿ" ಎಂದು ಹೇಳಿದ್ದರು.

  ಜಾಹೀರಾತು ಬಗ್ಗೆ ಮಾತನಾಡುತ್ತಲೇ ಇಬ್ಬರದು ಅದ್ಭುತ ಜೋಡಿ ಎಂದು ಸುನಿಲ್ ಶೆಟ್ಟಿ ಒಪ್ಪಿಕೊಳ್ಳುವ ಮೂಲಕ ರಾಹುಲ್ ಮತ್ತು ಅಥಿಯಾ ನಡುವಿನ ಪ್ರೀತಿ-ಪ್ರೇಮದ ಬಗ್ಗೆ ಸುಳಿವು ನೀಡಿದ್ದರು. ಈ ಹಿಂದೆ ಮಗಳು ಅಥಿಯಾ ಮತ್ತು ರಾಹುಲ್ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸುನಿಲ್ ಶೆಟ್ಟಿ, "ಅವರ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅಥಿಯಾ ಏನಾದರು ನಿಮಗೆ ಹೇಳಿದ್ರೆ ಅಮೇಲೆ ಬಂದು ನನಗೆ ಹೇಳಿ" ಎಂದು ಮಾಧ್ಯಮದವರಿಗೆ ಉತ್ತರಿಸಿದ್ರು.

  2015ರಲ್ಲಿ ಹೀರೋ ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನಟಿ ಅಥಿಯಾ ಶೆಟ್ಟಿ, ನಟ ಸೂರಜ್ ಪಾಂಚೋಲಿ ಜೊತೆ ನಟಿಸಿದ್ದರು. ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಅಥಿಯಾ ಸಿನಿಮಾಗಿಂತ ಹೆಚ್ಚಾಗಿ ರಾಹುಲ್ ಜೊತೆಗಿನ ಪ್ರೀತಿ, ಡೇಟಿಂಗ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ.

  English summary
  Bollywood Actress Anushka Sharma, Virat Kohli pose with Rumoured Lovers KL Rahul and Athiya Shetty.
  Friday, July 30, 2021, 16:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X