»   » ಶ್ರೀದೇವಿ ಪುತ್ರಿಯ ಡ್ರೆಸ್ ಬಗ್ಗೆ ವರದಿ: ವೆಬ್ ಸೈಟ್ ವಿರುದ್ಧ 'F' ಪದ ಬಳಸಿದ ಅರ್ಜುನ್!

ಶ್ರೀದೇವಿ ಪುತ್ರಿಯ ಡ್ರೆಸ್ ಬಗ್ಗೆ ವರದಿ: ವೆಬ್ ಸೈಟ್ ವಿರುದ್ಧ 'F' ಪದ ಬಳಸಿದ ಅರ್ಜುನ್!

Posted By:
Subscribe to Filmibeat Kannada

ಕೌಟುಂಬಿಕ ಕಲಹ ಏನೇ ಇದ್ದರೂ, ಅದನ್ನೆಲ್ಲ ಬದಿಗಿಟ್ಟು.. ಮನಸ್ತಾಪ ಮರೆತು.. ಮಲತಾಯಿ ನಟಿ ಶ್ರೀದೇವಿ ಇಹಲೋಕ ತ್ಯಜಿಸಿದಾಗ, ತಂದೆ ಬೋನಿ ಕಪೂರ್ ಗೆ ಬೆನ್ನೆಲುಬಾಗಿ ನಿಂತಿದ್ದು ಪುತ್ರ ಅರ್ಜುನ್ ಕಪೂರ್.

ಶ್ರೀದೇವಿ ಮೃತಪಟ್ಟ ನಂತರ ಬೋನಿ ಕಪೂರ್ ಮಕ್ಕಳೆಲ್ಲರೂ ಒಂದಾಗಿ, ಒಗ್ಗಟ್ಟಿನಿಂದ ಇದ್ದಾರೆ. ಜಾಹ್ನವಿ ಹುಟ್ಟುಹಬ್ಬಕ್ಕೆ ಬೋನಿ ಕಪೂರ್ ಮೊದಲ ಪತ್ನಿಯ ಮಕ್ಕಳಾದ ಅರ್ಜುನ್ ಹಾಗೂ ಅನ್ಷುಲಾ ಸಾಕ್ಷಿ ಆಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಜಾಹ್ನವಿ ಬಗ್ಗೆ ಯಾರೋ ಒಬ್ಬ ಕಿಡಿಗೇಡಿ ಕೆಟ್ಟದಾಗಿ ಕಾಮೆಂಟ್ ಮಾಡಿದಾಗ, ಜಾಹ್ನವಿ ಪರ ಅನ್ಷುಲಾ ಕಪೂರ್ ಬ್ಯಾಟಿಂಗ್ ಮಾಡಿದ್ದರು. ಈಗ ಅದೇ ಜಾಹ್ನವಿ ಪರ ದನಿ ಎತ್ತಿದ್ದಾರೆ ಬೋನಿ ಕಪೂರ್ ಮೊದಲ ಪತ್ನಿಯ ಪುತ್ರ ಅರ್ಜುನ್ ಕಪೂರ್.

ಜಾಹ್ನವಿ ಪರ ವಹಿಸಲು ಹೋಗಿ ವೆಬ್ ಸೈಟ್ ಒಂದಕ್ಕೆ 'F' ಪದ ಬಳಸಿದ್ದಾರೆ ಅರ್ಜುನ್ ಕಪೂರ್. ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಅರ್ಜುನ್ ಕಪೂರ್ ಮನೆಗೆ ಬಂದ ಜಾಹ್ನವಿ ಕಪೂರ್

ತಂದೆ ಬೋನಿ ಕಪೂರ್, ಸಹೋದರಿ ಖುಷಿ ಕಪೂರ್ ಜೊತೆಗೆ ಜಾಹ್ನವಿ ಕಪೂರ್ ನಿನ್ನೆ (ಏಪ್ರಿಲ್ 12) ರಾತ್ರಿ ಅರ್ಜುನ್ ಕಪೂರ್ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಅರ್ಜುನ್ ಕಪೂರ್ ಮನೆಯಲ್ಲಿ ಶ್ರೀದೇವಿ ಪುತ್ರಿಯರಿಗಾಗಿ ಸ್ಪೆಷಲ್ ಡಿನ್ನರ್ ರೆಡಿ ಮಾಡಲಾಗಿತ್ತು.

ಜಾಹ್ನವಿ-ಖುಷಿ ಕಪೂರ್ ಬಗ್ಗೆ ಕೆಟ್ಟ ಬೈಗುಳ: ನೆಟ್ಟಿಗರಿಗೆ ಪಾಠ ಕಲಿಸಿದ ಅನ್ಷುಲಾ!

ಜಾಹ್ನವಿ ಕಪೂರ್ ತೊಟ್ಟಿದ್ದ 'ಡ್ರೆಸ್'

ಅರ್ಜುನ್ ಕಪೂರ್ ಮನೆ ಮುಂದೆ ಕಾರ್ ನಿಂದ ಜಾಹ್ನವಿ, ಖುಷಿ ಹಾಗೂ ಬೋನಿ ಕಪೂರ್ ಇಳಿದಾಗ ಕ್ಯಾಮರಾಗಳು ಫೋಟೋ ಕ್ಲಿಕ್ಕಿಸುವಲ್ಲಿ ಬಿಜಿಯಾಗಿದ್ದವು.

ಒಡೆದ ಕಪೂರ್ ಕುಟುಂಬ ಒಂದಾಗಿಸಿದ ಶ್ರೀದೇವಿ ಸಾವು!

ಜಾಹ್ನವಿ 'ಡ್ರೆಸ್' ಬಗ್ಗೆ ವೆಬ್ ಸೈಟ್ ಕಾಮೆಂಟ್

ಜಾಹ್ನವಿ ಕಪೂರ್ ತೊಟ್ಟಿದ್ದ ಡ್ರೆಸ್ ನೋಡಿ ವೆಬ್ ಸೈಟ್ ಒಂದು ''ಜಾಹ್ನವಿ ಕಪೂರ್ ಎಷ್ಟೊಂದು ಸೆಕ್ಸಿ ಡ್ರೆಸ್ ತೊಟ್ಟಿದ್ದಾರೆ ಅಂದ್ರೆ ಎಲ್ಲವೂ ಕಾಣುತ್ತಿದೆ. ಬೇಕಾದ್ರೆ, ಫೋಟೋಗಳನ್ನ ನೋಡಿ'' ಎಂದು ಹಿಂದಿ ಭಾಷೆಯಲ್ಲಿ ಜಾಹ್ನವಿ ಫೋಟೋಗಳ ಸಮೇತ ಟ್ವೀಟ್ ಮಾಡಿತ್ತು.

ನೋವಿನಲ್ಲಿರುವ ಜಾಹ್ನವಿಗೆ ಸಂತಸ ತಂದ ಕಪೂರ್ ಸಹೋದರಿಯರು

ವೆಬ್ ಸೈಟ್ ಮಾಡಿದ್ದ ಟ್ವೀಟ್ ನೋಡಿ ಅರ್ಜುನ್ ಗೆ ಕೋಪ

ವೆಬ್ ಸೈಟ್ ಮಾಡಿದ್ದ ಈ ಟ್ವೀಟ್ ನೋಡಿ ಅರ್ಜುನ್ ಕಪೂರ್ ಉರಿದು ಬಿದ್ದರು. ವೆಬ್ ಸೈಟ್ ನ ಈ ನಡವಳಿಕೆಯನ್ನ ಅರ್ಜುನ್ ಕಪೂರ್ ತಮ್ಮ ಟ್ವೀಟ್ ನಲ್ಲಿ ತೀವ್ರವಾಗಿ ಖಂಡಿಸಿದ್ದಾರೆ. ಹಾಗೇ, ಸಿಟ್ಟಲ್ಲಿ 'F' ಪದ ಕೂಡ ಬಳಸಿದ್ದಾರೆ.

ತಾಯಿಯನ್ನ ಕಳೆದುಕೊಂಡ ಬೋನಿ ಮೊದಲ ಪತ್ನಿಯ ಪುತ್ರ ಅಂದು ಆಡಿದ್ದ ಮಾತೇನು.?

English summary
Bollywood Actor Arjun Kapoor lashes out at website for making comments on Janhvi Kapoor's dress. Check out Arjun Kapoor's tweet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X