For Quick Alerts
  ALLOW NOTIFICATIONS  
  For Daily Alerts

  ನಟ ಅರ್ಜುನ್ ರಾಂಪಲ್ ಪ್ರೇಯಸಿಯ ಸಹೋದರನ ಬಂಧನ

  |

  ಬಾಲಿವುಡ್ ನಟ ಅರ್ಜುನ್ ರಾಂಪಲ್ ಪ್ರೇಯಸಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಸಹೋದರನನ್ನು ಎನ್ ಸಿ ಬಿ ಅಧಿಕಾರಿಗಳು ಲೋನವಾಲಾ ರೆಸಾರ್ಟ್ ನಲ್ಲಿ ಬಂಧಿಸಿದ್ದಾರೆ. ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್, ನಟ ಅರ್ಜುನ್ ರಾಂಪಲ್ ಜೊತೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ.

  ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಾಕಷ್ಟು ಮಂದಿಯನ್ನು ಬಂಧಿಸಲಾಗಿದ್ದು, ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಟಿ ದೀಪಿಕಾ ಪಡುಕೋಣೆ, ರಕುಲ್ ಪ್ರೀತ್ ಸಿಂಗ್, ಸಾರ್ ಅಲಿ ಖಾನ್, ಶ್ರದ್ಧಾ ಸೇರಿದಂತೆ ಇನ್ನೂ ಹಲವರು ಎನ್ ಸಿ ಬಿ ಅಧಿಕಾರಿಗಳ ವಿಚಾರಣೆಗೆ ಒಳಗಾಗಿದ್ದಾರೆ.

  ತನಿಖೆ ಮುಂದುವರೆಸಿರುವ ಅಧಿಕಾರಿಗಳು ಮಾದಕ ವಸ್ತು ದಂಧೆಯಲ್ಲಿ ತೊಡಗಿರುವರನ್ನು ಬೆನ್ನಟ್ಟಿದ್ದಾರೆ. ಇದೀಗ ಗೇಬ್ರಿಯೆಲಾ ಸಹೋದರ, ಅಗಿಸಿಲಾಸ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆತನ ಜೊತೆ 30 ವರ್ಷದ ದಕ್ಷಿಣ ಆಫ್ರಿಕಾದ ಯುವಕನನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ನಿಷೇಧಿತ ಗಾಂಜಾ ಮತ್ತು ಆಲ್ ಪ್ರಜೋಲಮ್ ಅನ್ನು ವಶಕ್ಕೆ ಪಡೆಯಲಾಗಿದೆ.

  ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಪತ್ನಿಗೆ ಸಿಸಿಬಿಯಿಂದ ನೋಟಿಸ್ಡ್ರಗ್ಸ್ ಪ್ರಕರಣ: ವಿವೇಕ್ ಒಬೆರಾಯ್ ಪತ್ನಿಗೆ ಸಿಸಿಬಿಯಿಂದ ನೋಟಿಸ್

  ಎನ್ ಸಿ ಬಿ ಅಧಿಕಾರಿಗಳು ಬಂಧಿತ ಅಗಿಸಿಲಾಸ್ ನಿವಾಸ ಮತ್ತು ರೆಸಾರ್ಟ್ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಅಗಿಸಿಲಾಸ್ ಬಾಲಿವುಡ್ ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಈತ ಅನೇಕ ಡ್ರಗ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿರುವ ಬಗ್ಗೆ ವಿಚಾರಣೆ ವೇಳೆ ಬಹಿರಂಗವಾಗಿದೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada

  ಸದ್ಯ ಅಗಿಸಿಲಾಸ್ ನನ್ನು 3 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಬಗ್ಗೆ ಅರ್ಜುನ್ ರಾಂಪಲ್ ಅಥವಾ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸುಶಾಂತ್ ಸಿಂಗ್ ಸಾವಿನ ತನಿಖೆ ವೇಳೆ ಡ್ರಗ್ಸ್ ಜಾಲ ಬೆಳಕಿಗೆ ಬಂದಿದ್ದು, ಚಿತ್ರರಂಗದ ಸಾಕಷ್ಟು ಕಲಾವಿದರಿಗೆ ಮುಳುವಾಗಿದೆ. ಇತ್ತೀಚಿಗಷ್ಟೆ ನಟಿ ಮತ್ತು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಜಾಮೀನಿನ ಮೇಲೆ ಹೊರಬಂದಿದ್ದಾರೆ.

  English summary
  Actor Arjun Rampal's Partner Gabriella's Brother Arrested by NCB For Possessing Drugs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X