For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಎರಡನೇ ಅಲೆ: ಅರ್ಜುನ್, ಅಥರ್ವ, ಸಮೀರಾಗೆ ಕೋವಿಡ್

  |

  ಕೊರೊನಾ ವೈರಸ್ ಎರಡನೇ ಅಲೆ ಜನರಲ್ಲಿ ಆತಂಕ ಹೆಚ್ಚಿಸಿದೆ. ಚಿತ್ರರಂಗದಲ್ಲಿ ಅನೇಕರು ಸೋಂಕಿಗೆ ಒಳಗಾಗುತ್ತಿದ್ದಾರೆ. ಆಲಿಯಾ ಭಟ್, ಅಕ್ಷಯ್ ಕುಮಾರ್, ಕತ್ರಿನಾ ಕೈಫ್, ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್, ಕಾರ್ತಿಕ್ ಆರ್ಯನ್, ಗೋವಿಂದ, ಫಾತಿಮಾ ಸೇರಿದಂತೆ ಹಲವರಿಗೆ ಎರಡನೇ ಅಲೆ ವೇಳೆ ಸೋಂಕು ತಗುಲಿದೆ.

  ಸೌತ್ ಇಂಡಸ್ಟ್ರಿಯಲ್ಲೂ ಹಲವರು ಕೊರೊನಾಗೆ ತುತ್ತಾಗಿದ್ದರು. ಪ್ರಜ್ವಲ್ ದೇವರಾಜ್ ದಂಪತಿ, ನಿಖಿಲ್ ಕುಮಾರ್, ಡಾರ್ಲಿಂಗ್ ಕೃಷ್ಣ ದಂಪತಿ ಸೇರಿದಂತೆ ತೆಲುಗು ತಮಿಳು ಕಲಾವಿದರು ಕೋವಿಡ್‌ಗೆ ಸಿಲುಕಿದ್ದರು. ಈಗ ಮತ್ತಷ್ಟು ಸೆಲೆಬ್ರಿಟಿಗಳು ಈ ಪಟ್ಟಿ ಸೇರಿದ್ದಾರೆ. ಮುಂದೆ ಓದಿ...

  ಅರ್ಜುನ್ ರಾಂಪಾಲ್‌ಗೆ ಕೊರೊನಾ

  ಅರ್ಜುನ್ ರಾಂಪಾಲ್‌ಗೆ ಕೊರೊನಾ

  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರಿಗೆ ಕೊರೊನಾ ವೈರಸ್ ತಗುಲಿದೆ. ಸೋಂಕು ತಗುಲಿರುವ ಹಿನ್ನೆಲೆ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ, ಪುಸ್ತಕಗಳನ್ನು ಓದುತ್ತಿದ್ದೇನೆ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಅರ್ಜುನ್ ವಿಚಾರಣೆ ಎದುರಿಸುವ ಮೂಲಕ ಹೆಚ್ಚು ಸುದ್ದಿಯಲ್ಲಿದ್ದರು.

  ಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾಬಾಲಿವುಡ್ ಬೆನ್ನು ಬಿದ್ದ ಕೊರೊನಾ: ಭೂಮಿ ಪಡ್ನೆಕರ್, ವಿಕ್ಕಿ ಕೌಶಲ್‌ಗೆ ಕೊರೊನಾ

  ಸಮೀರಾ ರೆಡ್ಡಿಗೆ ಕೋವಿಡ್

  ಸಮೀರಾ ರೆಡ್ಡಿಗೆ ಕೋವಿಡ್

  ಹಿಂದಿ ಚಿತ್ರರಂಗದ ಖ್ಯಾತ ನಟಿ ಸಮೀರಾ ರೆಡ್ಡಿ ಅವರಿಗೂ ಕೋವಿಡ್ ತಗುಲಿದೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ನಟಿ ಖಚಿತಪಡಿಸಿದ್ದಾರೆ. ಕುಟುಂಬದ ಸದಸ್ಯರು ಸಹ ಸೋಂಕಿಗೆ ತುತ್ತಾಗಿರುವುದಾಗಿ ನಟಿ ಮಾಹಿತಿ ಹಂಚಿಕೊಂಡಿದ್ದಾರೆ. 2013ರಲ್ಲಿ ತೆರೆಕಂಡಿದ್ದ 'ವರದನಾಯಕ' ಚಿತ್ರದಲ್ಲಿ ಸುದೀಪ್‌ಗೆ ನಾಯಕಿಯಾಗಿ ಸಮೀರಾ ರೆಡ್ಡಿ ನಟಿಸಿದ್ದರು. ಈ ಚಿತ್ರದ ಬಳಿಕ ಸಮೀರಾ ನಟನೆಯಿಂದ ದೂರ ಉಳಿದಿದ್ದಾರೆ.

  ಅಥರ್ವ ಮುರಳಿಗೆ ಕೊರೊನಾ

  ಅಥರ್ವ ಮುರಳಿಗೆ ಕೊರೊನಾ

  ತಮಿಳಿನ ಖ್ಯಾತ ಯುವ ನಟ ಅಥರ್ವ ಮುರಳಿಗೆ ಕೋವಿಡ್ ಸೋಂಕಯ ತಗುಲಿದೆ. ಇತ್ತೀಚಿಗಷ್ಟೆ ಶೂಟಿಂಗ್ ಮುಗಿಸಿ ಹೈದರಾಬಾದ್‌ನಿಂದ ಚೆನ್ನೈಗೆ ಹಿಂತಿರುಗಿದ್ದ ನಟನಿಗೆ ಪರೀಕ್ಷೆ ವೇಳೆ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಥರ್ವ ಮಾಹಿತಿ ನೀಡಿದ್ದಾರೆ.

  ನೀಲ್ ನಿತಿನ್ ಮುಖೇಶ್‌ಗೆ ಕೊರೊನಾ

  ನೀಲ್ ನಿತಿನ್ ಮುಖೇಶ್‌ಗೆ ಕೊರೊನಾ

  ಬಾಲಿವುಡ್ ನಟ ನೀಲ್ ನಿತೀನ್ ಮುಖೇಶ್ ಮತ್ತು ಕುಟುಂಬ ಸದಸ್ಯರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಚಾರ ಹೊರಬಿದ್ದಿದೆ. ಈ ಕುರಿತು ಖುದ್ದು ನಟ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಸಾಹೋ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು.

  Recommended Video

  ಇವತ್ತಿನ ಮುಖ್ಯಮಂತ್ರಿ ಯಡಿಯೂರಪ್ಪನಾ ವಿಜಯೇಂದ್ರನಾ?? | Filmibeat Kannada
  ಸಚಿನ್ ಶರ್ಮಾಗೆ ಕೋವಿಡ್

  ಸಚಿನ್ ಶರ್ಮಾಗೆ ಕೋವಿಡ್

  ಹಿಂದಿಯ ಕಿರುತೆರೆ ಕಲಾವಿದ ಸಚಿನ್ ಶರ್ಮಾ ಅವರ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ ಎಂದು ತಿಳಿದು ಬಂದಿದೆ. ಪ್ರಸ್ತುತ, ಎಲ್ಲರೂ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ.

  English summary
  Bollywood Actor Arjun Rampal, Neil Nithin Mukesh, Actress Sameera Reddy, Atharvaa Murali test positive for Covid 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X