For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ 'ಅರ್ಜುನ್ ರೆಡ್ಡಿ' ನಟಿ ಶಾಲಿನಿ

  |

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ಸಿನಿಮಾ 'ಅರ್ಜುನ್ ರೆಡ್ಡಿ'. ಈ ಚಿತ್ರದ ಮೂಲಕ ಪರಿಚಯವಾದ ನಟ ವಿಜಯ್ ದೇವರಕೊಂಡ ಇಂದು ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ದೇವರಕೊಂಡ ಹೆಸರು ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದೆ.

  'ಅರ್ಜುನ್ ರೆಡ್ಡಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಶಾಲಿನಿ ಪಾಂಡೆ ಅರ್ಜುನ್ ರೆಡ್ಡಿ ನಂತರ ಹೇಳಿಕೊಳ್ಳುವಷ್ಟು ಖ್ಯಾತಿಗಳಿಸಿಲ್ಲ. ಚಿತ್ರದಲ್ಲಿ ಶಾಲಿನಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಶಾಲಿನಿ ಮುಗ್ಧತೆಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿತ್ತು. ಅರ್ಜುನ್ ರೆಡ್ಡಿ ನಂತರ ಸಾಕಷ್ಟು ಸಿನಿಮಾಗಳಲ್ಲಿಯೂ ಮಿಂಚಿದ್ದರು ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

  ರಣ್ವೀರ್ ಸಿಂಗ್ ವಿಚಿತ್ರ ಕಾಸ್ಟೂಮ್ ಗಳ ಡಿಸೈನರ್ ಈಕೆಯೇ ರಣ್ವೀರ್ ಸಿಂಗ್ ವಿಚಿತ್ರ ಕಾಸ್ಟೂಮ್ ಗಳ ಡಿಸೈನರ್ ಈಕೆಯೇ

  ಈಗ ಶಾಲಿಗೆ ಪಾಂಡೆಗೆ ದೊಡ್ಡ ಅವಕಾಶ ಹುಡುಕಿಕೊಂಡು ಬಂದಿದೆ. ದಕ್ಷಿಣ ಭಾರತೀಯ ಚಿತ್ರರಂಗದಿಂದ ಶಾಲಿನಿ ಬಾಲಿವುಡ್ ಗೆ ಹಾರಿದ್ದಾರೆ. ವಿಶೇಷ ಅಂದರೆ ಬಾಲಿವುಡ್ ನ ಸ್ಟಾರ್ ನಟನ ಸಿನಿಮಾದಲ್ಲಿ ಶಾಲಿನಿ ಮಿಂಚುತ್ತಿದ್ದಾರೆ. ಬಾಲಿವುಡ್ ನ ಬಹುಬೇಡಿಕೆಯ ನಟ ರಣವೀರ್ ಸಿಂಗ್ ಅಭಿನಯದ 'ಜಯೇಶ್ ಭಾಯ್ ಜೋರ್ದಾರ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

  'ಜಯೇಶ್ ಭಾಯ್ ಜೋರ್ದಾರ್' ಚಿತ್ರದಲ್ಲಿ ರಣ್ವೀರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ರಣವೀರ್ ಸಾಕಷ್ಟು ತೂಕ ಇಳಿಸಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಮೊದಲ ಲುಕ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿದ್ದಾರೆ. ಬಾಲಿವುಡ್ ನ ಬಹುನಿರೀಕ್ಷೆಯ ಚಿತ್ರಕ್ಕೆ ಈಗ ಶಾಲಿನಿ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

  English summary
  Arjun Reddy Fame actress Shalini Panday make her Bollywood debut with Ranveer Singh. She is playing the lead role in Ranveer Singh Jayeshbhai Jordaar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X