For Quick Alerts
  ALLOW NOTIFICATIONS  
  For Daily Alerts

  'ಹಾಫ್ ಗರ್ಲ್‌ ಫ್ರೆಂಡ್' 10 ದಿನಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?

  By Suneel
  |

  ನಟ ಅರ್ಜುನ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ 'ಹಾಫ್ ಗರ್ಲ್ ಫ್ರೆಂಡ್' ಚಿತ್ರ ವಿಮರ್ಶಕರಿಂದ ಅಷ್ಟೇನು ಉತ್ತಮ ಪ್ರತಿಕ್ರಿಯೆ ಪಡೆದಿರಲಿಲ್ಲ. ಅಲ್ಲದೇ ಮೇ 19 ರಂದು ಬಿಡುಗಡೆ ಆದ ಚಿತ್ರ ಮೊದಲ ವಾರದಲ್ಲಿ ಬಾಕ್ಸ್ ಆಫೀಸ್ ಗಳಿಕೆಯಲ್ಲಿಯೂ ಚಿತ್ರತಂಡ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಆದರೆ ಎರಡನೇ ವಾರದ ಅಂತ್ಯದಲ್ಲಿ ಭಾನುವಾರ ಒಂದೇ ದಿನ 2 ಕೋಟಿ ಗಳಿಸಿ ನಿರ್ಮಾಪಕರಿಗೆ ಸಂತಸ ತಂದುಕೊಟ್ಟಿದೆ.[ವಿಮರ್ಶೆ: ನೋಡುಗರ ಹೃದಯವನ್ನು ಅರ್ಧಮಾಡುವ 'ಹಾಫ್ ಗರ್ಲ್ ಫ್ರೆಂಡ್']

  ಹೌದು, 'ಹಾಫ್ ಗರ್ಲ್ ಫ್ರೆಂಡ್' ಚಿತ್ರ ಎರಡನೇ ವಾರದ ಅಂತ್ಯದಲ್ಲಿ ಸುಮಾರು 4.75 ಕೋಟಿ ರೂ ಗಳಿಸಿದ್ದು, ಒಟ್ಟಾರೆ 10 ದಿನಗಳ ವೇಳೆಗೆ 50.75 ಕೋಟಿ ರೂ ಹಣ ಗಳಿಸಿದೆ ಎಂದು ಬಾಕ್ಸ್ ಆಫೀಸ್.ಕಾಂ ವರದಿ ಪ್ರಕಾರ ತಿಳಿದಿದೆ. ಅಲ್ಲದೇ ಚಿತ್ರಕ್ಕೆ 48 ಕೋಟಿ ರೂ ಬಂಡವಾಳ ಹೂಡಿದ್ದ ನಿರ್ಮಾಪಕರುಗಳು, ಆ ಹಣವನ್ನು ಗಳಿಸಿದ ಹಿನ್ನೆಲೆಯಲ್ಲಿ ಸಂತೋಷಗೊಂಡಿದ್ದಾರೆ.

  ಖ್ಯಾತ ಇಂಗ್ಲಿಷ್ ಲೇಖಕ ಚೇತನ್ ಭಗತ್ ರವರ 'ಹಾಫ್ ಗರ್ಲ್ ಫ್ರೆಂಡ್' ಕಾದಂಬರಿ ಆಧಾರಿತ ಚಿತ್ರವನ್ನು ಅದೇ ಹೆಸರಲ್ಲಿ ನಿರ್ದೇಶಕ ಮೋಹಿತ್ ಸೂರಿ ಸಿನಿಮಾ ಮಾಡಿದ್ದರು. ಇದು ಹಳ್ಳಿಗಾಡಿನ ಹುಡುಗ ಮತ್ತು ಶ್ರೀಮಂತ ಕುಟುಂಬದ ಹುಡುಗಿ ಇಬ್ಬರ ನಡುವೆ ಕಾಲೇಜಿನಲ್ಲಿ ಶುರುವಾಗುವ ಪ್ರೇಮಕಥೆ ಹೇಗೆ ಕೊನೆಗೊಳ್ಳುತ್ತದೆ ಎಂಬ ಕಥೆಯನ್ನು ಒಳಗೊಂಡಿದೆ.

  'ಹಾಫ್ ಗರ್ಲ್ ಫ್ರೆಂಡ್' ಸಿನಿಮಾದ ಯಶಸ್ಸನ್ನು ಚಿತ್ರತಂಡ ಮೊನ್ನೆಯಷ್ಟೇ ವಿಜೃಂಭಣೆಯಿಂದ ಸೆಲೆಬ್ರೇಟ್ ಮಾಡಿತ್ತು. ಈ ಸಕ್ಸಸ್ ಪಾರ್ಟಿಯಲ್ಲಿ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಕರಣ್ ಜೋಹರ್, ರಾಜ್ ಕುಮಾರ್ ರಾವ್ ಮತ್ತು ಇತರೆ ಹಲವು ಬಾಲಿವುಡ್ ತಾರೆಯರು ಪಾಲ್ಗೊಂಡಿದ್ದರು.

  English summary
  Arjun Kapoor and Shraddha Kapoor Starrer ‘Half Girlfriend' movie crosses the 50-crore mark on box office at day 10. This movie is directed by Mohit Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X