For Quick Alerts
  ALLOW NOTIFICATIONS  
  For Daily Alerts

  ವಿಮರ್ಶೆ: ನೋಡುಗರ ಹೃದಯವನ್ನು ಅರ್ಧಮಾಡುವ 'ಹಾಫ್ ಗರ್ಲ್ ಫ್ರೆಂಡ್'

  By Suneel
  |

  ಬಹುಸಂಖ್ಯಾತರು, ಪ್ರಪಂಚದಾದ್ಯಂತ ಓದುಗ ಅಭಿಮಾನಿಗಳನ್ನು ಹೊಂದಿರುವ ಲೇಖಕ, ಕಾದಂಬರಿಕಾರ ಚೇತನ್ ಭಗತ್ ರವರ 2014 ಅಕ್ಟೋಬರ್ 1 ರಂದು ಬಿಡುಗಡೆ ಆದ 'ಹಾಫ್ ಗರ್ಲ್ ಫ್ರೆಂಡ್' ಪುಸ್ತಕವನ್ನು ಓದಿರುತ್ತೀರಿ. ಇಂದು(ಮೇ 19) ಅದೇ ಪುಸ್ತಕ ಆಧಾರಿತವಾಗಿ ನಿರ್ಮಿಸಲಾದ 'ಹಾಫ್ ಗರ್ಲ್ ಫ್ರೆಂಡ್' ಚಿತ್ರ ದೇಶದಾದ್ಯಂತ ತೆರೆಕಂಡಿದೆ.

  ಚೇತನ್ ಭಗತ್ ರವರು ಬರೆದ 'ಹಾಫ್ ಗರ್ಲ್ ಫ್ರೆಂಡ್' ಪುಸ್ತಕ ಅತೀ ಉತ್ತಮ ಎಂದು ಹೇಳಲು ಸಾಧ್ಯವಿಲ್ಲ. ಅದೇ ಟೈಟಲ್ ಇರುವ ಚಿತ್ರವನ್ನು ಉತ್ತಮವಾಗಿ ಒಂದಷ್ಟು ಹಾಸ್ಯವಾಗಿಯೂ, ರೋಮಾಂಚನಕಾರಿಯಾಗಿಯೂ ನಿರ್ದೇಶಕ ಮೋಹಿತ್ ಸೂರಿ ತೆರೆಮೇಲೆ ತಂದಿದ್ದಾರೆ. ಪ್ರಪ್ರಥಮ ಬಾರಿಗೆ ಅರ್ಜುನ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಹಾಫ್ ಗರ್ಲ್ ಫ್ರೆಂಡ್' ಚಿತ್ರದ ವಿಮರ್ಶೆಗಾಗಿ ಮುಂದೆ ಓದಿ..

  ಚಿತ್ರಕಥೆ: ತುಷಾರ್ ಹಿರನಂದನಿ

  ಸಂಭಾಷಣೆ: ಇಶಿತಾ ಮೊಯಿತ್ರ ಉಧ್ವಾನಿ

  ನಿರ್ದೇಶನ: ಮೋಹಿತ್ ಸೂರಿ

  ನಿರ್ಮಾಣ: ಶೋಭಾ ಕಪೂರ್, ಏಕ್ತಾ ಕಪೂರ್, ಮೋಹಿತ್ ಸೂರಿ ಮತ್ತು ಚೇತನ್ ಭಗತ್

  ತಾರಾಬಳಗ: ಅರ್ಜುನ್ ಕಪೂರ್, ಶ್ರದ್ಧಾ ಕಪೂರ್, ರಿಯಾ ಚಕ್ರಬೋರ್ಟಿ ಮತ್ತು ಇತರರು

  ಛಾಯಾಗ್ರಹಣ: ವಿಷ್ಣು ರಾವ್

  ಬಿಡುಗಡೆ: ಮೇ 19, 2017

  ಭಗ್ನ ಪ್ರೇಮಿಯಿಂದ ಸಿನಿಮಾ ಆರಂಭ

  ಭಗ್ನ ಪ್ರೇಮಿಯಿಂದ ಸಿನಿಮಾ ಆರಂಭ

  ಭಗ್ನಪ್ರೇಮಿ ಮಾಧವ್(ಅರ್ಜುನ್ ಕಪೂರ್)ರನ್ನು ರಿಯಾ ಸೊಮಾನಿ(ಶ್ರದ್ಧಾ ಕಪೂರ್) ಬಿಟ್ಟುಹೋದ ಘಳಿಗೆಯಿಂದ ಚಿತ್ರ ಆರಂಭವಾಗುತ್ತದೆ. ನಂತರ ಸಿನಿಮಾ ಅವರಿಬ್ಬರು ಮೊದಲು ಭೇಟಿಯಾದ ದೆಹಲಿಯ ಸೆಂಟ್. ಸ್ಟೀಫನ್ಸ್ ಕಾಲೇಜಿನಿಂದ ಶುರುವಾಗುತ್ತದೆ.

  ಚಿತ್ರಕಥೆ

  ಚಿತ್ರಕಥೆ

  ಮಾಧವ್(ಅರ್ಜುನ್ ಕಪೂರ್) ಬಿಹಾರದ ಹಳ್ಳಿಗಾಡಿನ ಹುಡುಗ, ದೆಹಲಿಗೆ ಓದಲು ಬಂದ ಕಾಲೇಜಿನಲ್ಲಿ ಅತೀ ಸೊಗಸಾಗಿ ಇಂಗ್ಲಿಷ್ ಮಾತನಾಡುವ ಶ್ರೀಮಂತ ಹುಡುಗಿ ರಿಯಾ ಸೊಮಾನಿ(ಶ್ರದ್ಧಾ ಕಪೂರ್) ಎಂಬ ಗೆಳತಿಯನ್ನು ಪ್ರೀತಿಸಲು ಶುರುಮಾಡುತ್ತಾನೆ. ರಿಯಾ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಮಾಧವ್ ಇವಳ ಗುಂಗಿನಲ್ಲೇ ಮುಂದುವರೆಯತ್ತಾನೆ. ಈ ಬಿಹಾರದ ಹುಡುಗ ಮತ್ತು ದೆಹಲಿ ಹುಡುಗಿ ಇಬ್ಬರು ಮತ್ತೆ ಒಂದಾಗುತ್ತಾರಾ? ಎಂಬುದು ಕೊನೆವರೆಗೂ ಕಾಡುವ ಪ್ರಶ್ನೆ. ಇದಕ್ಕೆ ಉತ್ತರವನ್ನು ಮತ್ತು ಇಬ್ಬರ ಕಥೆಯಲ್ಲಿ ಏನೆಲ್ಲಾ ನಡೆಯಲಿದೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಿರಿ.

  ನಿರ್ದೇಶನ ಹೇಗಿದೆ?

  ನಿರ್ದೇಶನ ಹೇಗಿದೆ?

  ನಿರ್ದೇಶಕ ಮೋಹಿತ್ ಸೂರಿ 'ಹಮಾರಿ ಅಧೂರಿ ಕಹಾನಿ' ಚಿತ್ರದಲ್ಲಿ ವಿದ್ಯಾ ಬಾಲನ್ ರಂತ ಸೂಪರ್ ಟ್ಯಾಲೆಂಟ್ ಅನ್ನು ವಿಭಿನ್ನ ಪಾತ್ರದ ಮೂಲಕ ತೋರಿಸಿ ಅವರ ಇಮೇಜ್ ಅನ್ನು ಕೊಂಚ ಕಡಿಮೆ ಮಾಡಿದ್ದರು. ಎರಡು ವರ್ಷಗಳ ನಂತರ 'ಹಾಫ್ ಗರ್ಲ್ ಫ್ರೆಂಡ್' ಚಿತ್ರದ ಮೂಲಕ ಹಿಂದಿರುಗಿದ್ದಾರೆ. ಚೇತನ್ ಭಗತ್ ರವರ ಕಾದಂಬರಿ ಅಷ್ಟೊಂದು ಉತ್ತಮವಾದ ಸಾಹಿತ್ಯ ಮತ್ತು ಸ್ಟೋರಿ ಲೈನ್ ಹೊಂದಿರಲಿಲ್ಲ. ಅಂತೆಯೇ ನಿರ್ದೇಶಕರು ಸಹ ಕಾದಂಬರಿಯನ್ನು ತಮ್ಮ ಸೃಜನಶೀಲತೆಯಿಂದ ಅತೀ ಉತ್ತಮವಾಗಿ ಚಿತ್ರ ಮೂಡಿಸುವಲ್ಲಿ ಎಡವಿದ್ದಾರೆ. ಪಾತ್ರಗಳು ಸೂಪರ್ ಆಗಿದ್ದರು, ಚಿತ್ರಕಥೆ ಪ್ರೇಕ್ಷಕರ ಗಮನಸೆಳೆಯುವಲ್ಲಿ ವಿಫಲವಾಗಿದೆ. ಪಾತ್ರಗಳು ಸಹ ಭಾವನೆಯಲ್ಲಿ ಮುಳುಗಿಸಿಕೊಳ್ಳದೇ ಹೊರಗೆ ಮತ್ತು ಒಳಗೆ ಕಾಣಸಿಕೊಳ್ಳುತ್ತವೆ.

  ಅರ್ಜುನ್ ಕಪೂರ್

  ಅರ್ಜುನ್ ಕಪೂರ್

  ಮೊದಲಿಗೆ ಹೇಳಬೇಕೆಂದರೆ ಮಾಧವ್ ಝಾ ಪಾತ್ರಕ್ಕೆ ಅರ್ಜುನ್ ಕಪೂರ್ ಅಷ್ಟೊಂದು ಒಗ್ಗಿಕೊಳ್ಳುವುದಿಲ್ಲ. ಆದರೆ ಅರ್ಜುನ್ ಕಪೂರ್ ಬಿಹಾರಿ ಭಾಷಾ ಶೈಲಿಗೆ ಒಗ್ಗಿಕೊಳ್ಳಲು ನಡೆಸಿರುವ ಪ್ರಯತ್ನಕ್ಕೆ ಭೇಷ್ ಎನ್ನಲೇಬೇಕು. ಒಂದು ಅಥವಾ ಎರಡು ದೃಶ್ಯಗಳನ್ನು ಹೊರತುಪಡಿಸಿ ಅವರ ಪಾತ್ರ ನೆನಪಿನಲ್ಲಿ ಉಳಿಯಲು ವಿಫಲವಾಗಿದೆ.

  ಶ್ರದ್ಧಾ ಕಪೂರ್

  ಶ್ರದ್ಧಾ ಕಪೂರ್

  ಶ್ರದ್ಧಾ ಕಪೂರ್ ತಮ್ಮ ಈ ಹಿಂದಿನ ಎಲ್ಲಾ ಚಿತ್ರಗಳಂತೆ ಅಭಿನಯವನ್ನು ಮುಂದುವರೆಸಿದ್ದಾರೆ. ಅವರು ಕಣ್ರೆಪ್ಪೆಗಳನ್ನು ಬೀಸುವುದು, ಗಿಟಾರ್ ಭಾರಿಸುವುದು ಮತ್ತು ಇಂಗ್ಲಿಷ್ ಹಾಡಿಗೆ ಲಿಪ್ ಸಿಂಕ್ ಮಾಡುವುದು ಭಯಾನಕವಾಗಿ ಮೂಡಿಬಂದಿದೆ.

  ಉಳಿದವರು

  ಉಳಿದವರು

  ವಿಕ್ರಾಂಟ್ ಮ್ಯಾಸ್ಸೆ ರವರು ಚಿತ್ರದಲ್ಲಿ ಹೆಚ್ಚು ಭರವಸೆಯ ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ. ಸೀಮಾ ಬಿಸ್ಟಾಸ್ ರಂತ ಅದ್ಭುತ ಟ್ಯಾಲೆಂಟ್ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು ಪಾತ್ರಕ್ಕೆ ಜೀವತುಂಬಿದ್ದಾರೆ. ಆದರೆ ರಿಯಾ ಚಕ್ರಬೋರ್ಟಿ ಗೆಸ್ಟ್ ರೋಲ್ ನಲ್ಲಿ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಅನುಪಯುಕ್ತ ಎನಿಸುತ್ತದೆ.

  ತಾಂತ್ರಿಕವಾಗಿ ಚಿತ್ರ

  ತಾಂತ್ರಿಕವಾಗಿ ಚಿತ್ರ

  ಚಿತ್ರಕಥೆ ಗಮನ ಸೆಳೆಯುವುದಿಲ್ಲ. ಅಲ್ಲದೇ ಕೆಲವು ಸಾಮಾನ್ಯವಾದ ಡೈಲಾಗ್ ಗಳು ಪದ್ಯ ಕೇಳಿದಂತೆ ಫೀಲ್ ಆಗುತ್ತದೆ. ವಿಷ್ಣು ರಾವ್ ಅವರ ಛಾಯಾಗ್ರಹಣ ಉತ್ತಮವಾಗಿದೆಯಾದರೂ, ಚಿತ್ರದ ಎಡಿಟಿಂಗ್ ನಲ್ಲಿ ಕೊಂಚ ಎಡವಿರುವುದು ಕಂಡುಬಂದಿದೆ.

  ಸಂಗೀತ

  ಸಂಗೀತ

  'ಫಿ ಭಿ ತುಮ್ಕೋ ಛಹುಂಗ', 'ಬಾರಿಶ್', ಮತ್ತು 'ತು ಹಿ ಹೈನ್' ಹಾಡುಗಳು ಎಲ್ಲರ ಕಿವಿಯಲ್ಲಿ ಗುನುಗುತ್ತವೆ. ಆದರೆ ಚಿತ್ರದಲ್ಲಿನ ಇಂಗ್ಲಿಷ್ ಟ್ರ್ಯಾಕ್ ಸಂಪೂರ್ಣವಾಗಿ ಬೇಸರ ತರಿಸುತ್ತದೆ.

  ಫೈನಲ್ ಸ್ಟೇಟ್ ಮೆಂಟ್

  ಫೈನಲ್ ಸ್ಟೇಟ್ ಮೆಂಟ್

  ನಿರ್ದೇಶಕ ಮೋಹಿತ್ ಸೂರಿ ಟೈಟಲ್ ಪ್ರೇರಣೆಯಿಂದ ಅರ್ಧದಷ್ಟು ಮಾತ್ರ ಗಂಭೀರವಾಗಿ ಚಿತ್ರವನ್ನು ತೆರೆ ಮೇಲೆ ತಂದಿದ್ದಾರೆ ಎನಿಸುತ್ತದೆ. ಸಾಧಾರಣ ಅಭಿನಯ ಮತ್ತು ನಿಧಾನಗತಿಯ ನಿರೂಪಣೆ ಸಿನಿಮಾದ ಬಗ್ಗೆ ಕೊಂಚ ಬೇಸರ ಮೂಡಿಸುತ್ತದೆ. ಆದರೆ ಶ್ರದ್ಧಾ ಅವರ ಕೆಲವು ಭಾವನಾತ್ಮಕ ದೃಶ್ಯಗಳು ಚಿತ್ರಮಂದಿರದಲ್ಲಿ ದೀರ್ಘಕಾಲ ಕುಳಿತುಕೊಳ್ಳುವಂತೆ ಮಾಡುತ್ತವೆ.

  English summary
  Bollywood Actor Arjun Kapoor and Actress Shraddha Kapoor Starrer 'Half Girlfriend' Hindi Movie has hit the screens today(May 19). Here is 'Half Girlfriend' Hindi Movie Review

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X