For Quick Alerts
  ALLOW NOTIFICATIONS  
  For Daily Alerts

  ಡ್ಯಾನ್ಸ್ ವಿಡಿಯೋ ಚಿತ್ರೀಕರಿಸಿದ್ದಕ್ಕೆ ನಟಿ ಸಬಾ ಖಮರ್ ವಿರುದ್ದ ಬಂಧನ ವಾರೆಂಟ್

  |

  ಬಾಲಿವುಡ್ ಸಿನಿಮಾದಲ್ಲೂ ನಟಿಸಿರುವ ಪಾಕಿಸ್ತಾನದ ನಟಿ ಸಬಾ ಖಮರ್ ಹಾಗೂ ಗಾಯಕ ಬಿಲಾಲ್‌ ಸೈಯದ್ ವಿರುದ್ಧ ಪಾಕಿಸ್ತಾನದ ಸ್ಥಳೀಯ ನ್ಯಾಯಾಲಯವೊಂದು ಬಂಧನದ ವಾರೆಂಟ್ ಹೊರಡಿಸಿದೆ.

  ಬಾಲಿವುಡ್‌ನ 'ಹಿಂದಿ ಮೀಡಿಯಮ್' ಸಿನಿಮಾದಲ್ಲಿ ನಟಿಸಿರುವ ಸಬಾ ಖಮರ್ ಪಾಕಿಸ್ತಾನದ ಐತಿಹಾಸಿಕ ಮಸೀದಿಯೊಂದರ ಮುಂದೆ ಡ್ಯಾನ್ಸ್ ಮಾಡಿ ಅದರ ವಿಡಿಯೋ ಚಿತ್ರೀಕರಣ ಮಾಡಿದ್ದರು. ಹಾಗಾಗಿ ಅವರ ವಿರುದ್ದ ದೂರು ದಾಖಲಾಗಿತ್ತು.

  ಲಾಹೋರ್‌ನ ಐತಿಹಾಸಿಕ ಮಸೀದಿಯ ಡ್ಯಾನ್ಸ್ ಮಾಡುವ ಮೂಲಕ ಮಸೀದಿಯನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿ ಸಬಾ ಖಮರ್ ಹಾಗೂ ಬಿಬಾಲ್ ವಿರುದ್ಧ ದೂರು ದಾಖಲಿಸಲಾಗಿತ್ತು. ಪಾಕಿಸ್ತಾನ ಪಿನಲ್ ಕೋಡ್ 256 ರ ಅಡಿ ಇಬ್ಬರು ಸೆಲೆಬ್ರಿಟಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

  ನ್ಯಾಯಾಲಯದಲ್ಲಿ ಹಲವು ದಿನದಿಂದ ಈ ಕುರಿತು ವಿಚಾರಣೆ ಚಾಲ್ತಿಯಲ್ಲಿತ್ತು ಆದರೆ ಹಲವು ಸಮನ್ಸ್ ನೀಡಿದ್ದರೂ ಸದಾ ಖಮರ್ ಹಾಗೂ ಬಿಲಾಲ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲವಾದ್ದರಿಂದ ಇಬ್ಬರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಲಾಗಿದೆ. ಡ್ಯಾನ್ಸ್ ವಿಡಿಯೋಕ್ಕೆ ಅನುಮತಿ ನೀಡಿದ ಇಬ್ಬರು ಅಧಿಕಾರಿಗಳನ್ನು ಸಹ ಅಮಾನತು ಮಾಡಲಾಗಿದೆ.

  ಸಬಾ ಖಮರ್‌ರ ಡ್ಯಾನ್ಸ್ ವಿಡಿಯೋ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ಸಬಾ ಖಮರ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ನಿಂದನೆ, ಕೊಲೆ ಬೆದರಿಕೆಗಳು ಬಂದಿವೆ. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಇಬ್ಬರೂ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣ ಮೂಲಕ ಕ್ಷಮೆ ಕೇಳಿದ್ದಾರೆ. ''ಮ್ಯೂಸಿಕ್ ವಿಡಿಯೋನಲ್ಲಿ ಮದುವೆಯ ದೃಶ್ಯ ಇತ್ತು. ಅದನ್ನು ಮಸೀದಿಯ ಮುಂದೆ ಚಿತ್ರೀಕರಣ ಮಾಡಿದ್ದೇವೆ. ಅದಕ್ಕೆ ಯಾವುದೇ ಹಿನ್ನೆಲೆ ಸಂಗೀತವನ್ನು ಸಹ ನಾವು ನೀಡಿಲ್ಲ. ನಮ್ಮ ವಿಡಿಯೋದಿಂದ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಇರಲಿ'' ಎಂದಿದ್ದಾರೆ.

  ಬಾಲಿವುಡ್‌ನ 'ಹಿಂದಿ ಮೀಡಿಯಮ್' ಸಿನಿಮಾದಲ್ಲಿ ಸಬಾ ಖಮರ್ ನಟಿಸಿದ್ದರು. ಈ ಸಿನಿಮಾದಲ್ಲಿ ಇರ್ಫಾನ್ ಖಾನ್ ನಾಯಕನಾಗಿ ನಟಿಸಿದ್ದರು. ಪಾಕಿಸ್ತಾನದ ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ಖಂದಿಲ್ ಬಲೂಚ್‌ ಜೀವನ ಆಧರಿತ ಸಿನಿಮಾದಲ್ಲಿಯೂ ಸಬಾ ನಟಿಸಿದ್ದರು. ಸಾಮಾಜಿಕ ಜಾಲತಾಣ ಸ್ಟಾರ್ ಆಗಿದ್ದ ಖಂದಿಲ್ ಬಲೂಚ್‌ ಕುಟುಂಬ ಗೌರವನ್ನು ಮಣ್ಣುಪಾಲು ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ಅಣ್ಣನೇ ಆಕೆಯನ್ನು ಕೊಲೆ ಮಾಡಿದ್ದ. ಈ ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು.

  ಸಬಾ ಖಮರ್‌ರ ಡ್ಯಾನ್ಸ್ ವಿಡಿಯೋ ಬಿಡುಗಡೆ ಆದ ಬಳಿಕ ಜಮಾತ್-ಇ-ಇಸ್ಲಾಂ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳು ನಟಿಯ ವಿರುದ್ಧ ಪ್ರತಿಭಟನೆ ಮಾಡಿದ್ದು, ಆಕೆಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ ಮಾಡಿವೆ.

  ಸಬಾ ಖಮರ್, ಬ್ಲಾಗರ್ ಅಜೀಮ್ ಖಾನ್ ಜೊತೆ ಮದುವೆ ನಿಶ್ಚಯವಾಗಿತ್ತು, ಆದರೆ ಅಂತಿಮ ಸಮಯದಲ್ಲಿ ಮದುವೆಯನ್ನು ಮುರಿದುಕೊಂಡ ಸಬಾ, ಅಜೀಮ್ ಖಾನ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು.

  English summary
  Pakistan local court issued arrest warrant against actress Saba Qamar and singer Bilal Saeed for recording a dance video in front of a historical mosque.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X