For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ-ವಿರಾಟ್ ಗೆ ಹೊಸ ತಲೆಬಿಸಿ: ಲೀಗಲ್ ನೋಟೀಸ್ ನೀಡಿದ ಕಸ ಬಿಸಾಕಿದ ವ್ಯಕ್ತಿ.!

  By Harshitha
  |

  ಅನುಷ್ಕಾ ಶರ್ಮಾ ರ 'ಕಸ'ದ ರಂಪಾಟ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಐಷಾರಾಮಿ ಕಾರಿನಲ್ಲಿ ಕೂತುಕೊಂಡು ರಸ್ತೆಗೆ ಪ್ಲಾಸ್ಟಿಕ್ ಬಿಸಾಡಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಕೋಪಕ್ಕೆ ಗುರಿಯಾಗಿದ್ದ ಅರ್ಹಾನ್ ಸಿಂಗ್ ಇದೀಗ ಕಾನೂನು ಮೊರೆ ಹೋಗಿದ್ದಾರೆ.

  ಸೋಷಿಯಲ್ ಮೀಡಿಯಾದಲ್ಲಿ ಕೋಟ್ಯಾಂತರ ಜನರ ಮುಂದೆ ಮಾನ ಹರಾಜಿಗೆ ಹಾಕಿದ ವಿರಾಟ್-ಅನುಷ್ಕಾಗೆ ಬುದ್ದಿ ಕಲಿಸಲು ಅರ್ಹಾನ್ ಸಿಂಗ್ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

  ''ನನ್ನ ವಕೀಲರು ವಿರಾಟ್ ದಂಪತಿಗೆ ಲೀಗಲ್ ನೋಟೀಸ್ ನೀಡಿದ್ದಾರೆ. ಈಗ ಚೆಂಡು ಅವರ ಬಳಿ ಇದೆ. ಇನ್ನು ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ'' ಎಂದು ಖಾಸಗಿ ವಾಹಿನಿಯೊಂದಕ್ಕೆ ಅರ್ಹಾನ್ ಸಿಂಗ್ ತಿಳಿಸಿದ್ದಾರೆ.

  ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದವನ ಮುಖಕ್ಕೆ ಮಂಗಳಾರತಿ ಮಾಡಿದ ಅನುಷ್ಕಾ.!ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದವನ ಮುಖಕ್ಕೆ ಮಂಗಳಾರತಿ ಮಾಡಿದ ಅನುಷ್ಕಾ.!

  ಘಟನೆಯ ಹಿನ್ನಲೆ:

  ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಅರ್ಹಾನ್ ಸಿಂಗ್ ರಸ್ತೆ ಮೇಲೆ ಪ್ಲಾಸ್ಟಿಕ್ ಬಿಸಾಕಿದ್ದನ್ನ ನೋಡಿದ್ಮೇಲೆ, ''ರಸ್ತೆ ಮೇಲೆ ಕಸವನ್ನ ಯಾಕೆ ಎಸೆಯುತ್ತಿದ್ದೀರಾ.? ಪ್ಲಾಸ್ಟಿಕ್ ನ ರಸ್ತೆಗೆ ಯಾಕೆ ಎಸೆಯುತ್ತಿದ್ದೀರಾ.? ದಯವಿಟ್ಟು ಹುಷಾರಾಗಿರಿ. ರಸ್ತೆ ಮೇಲೆ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬೇಡಿ. ಕಸದ ಬುಟ್ಟಿ ಉಪಯೋಗಿಸಿ'' ಎಂದು ನಟಿ ಅನುಷ್ಕಾ ಶರ್ಮಾ ಬುದ್ಧಿ ಹೇಳಿದ ವಿಡಿಯೋನ ವಿರಾಟ್ ಕೊಹ್ಲಿ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಶೇರ್ ಮಾಡಿದ್ದರು.

  ಒಳ್ಳೆಯದನ್ನೇ ಹೇಳಿದರೂ ಅನುಷ್ಕಾ ಕೆಟ್ಟವಳು: ಟ್ರೋಲಿಗರಿಗೆ ಶೇಮ್ ಎಂದ ವಿರಾಟ್.!ಒಳ್ಳೆಯದನ್ನೇ ಹೇಳಿದರೂ ಅನುಷ್ಕಾ ಕೆಟ್ಟವಳು: ಟ್ರೋಲಿಗರಿಗೆ ಶೇಮ್ ಎಂದ ವಿರಾಟ್.!

  ಜೊತೆಗೆ, ''ರಸ್ತೆ ಮೇಲೆ ಕಸ ಎಸೆಯುತ್ತಿದ್ದ ವ್ಯಕ್ತಿಗೆ ಬುದ್ಧಿ ಹೇಳಿದ್ದೇವೆ. ಐಷಾರಾಮಿ ಕಾರ್ ನಲ್ಲಿ ಪ್ರಯಾಣ ಮಾಡುತ್ತಿದ್ದರೂ ತಲೆಯಲ್ಲಿ ಬುದ್ಧಿ ಇರುವುದಿಲ್ಲ. ಇಂತಹ ಜನ ನಮ್ಮ ದೇಶವನ್ನ ಹೇಗೆ ಸ್ವಚ್ಛವಾಗಿ ಇಡುತ್ತಾರೆ.? ಇದೇ ತರಹ ನಿಮ್ಮ ಅಕ್ಕ-ಪಕ್ಕದಲ್ಲಿ ಆಗುತ್ತಿದ್ದರೆ, ಹೀಗೇ ಬುದ್ಧಿ ಹೇಳಿ ಜನರಲ್ಲಿ ಅರಿವು ಮೂಡಿಸಿ'' ಎಂದು ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದರು.

  ಅನುಷ್ಕಾ ಬಾಯಿಂದ ಬಂದ ಮಾತುಗಳು ಕಸಕ್ಕಿಂತ ಕೀಳು ಎಂದ 'ಆ' ಶ್ರೀಮಂತ.!ಅನುಷ್ಕಾ ಬಾಯಿಂದ ಬಂದ ಮಾತುಗಳು ಕಸಕ್ಕಿಂತ ಕೀಳು ಎಂದ 'ಆ' ಶ್ರೀಮಂತ.!

  ವಿರಾಟ್ ಕೊಹ್ಲಿ ಶೇರ್ ಮಾಡಿದ ವಿಡಿಯೋದಲ್ಲಿ ಪ್ಲಾಸ್ಟಿಕ್ ಬಿಸಾಕಿದ ವ್ಯಕ್ತಿಯ ಫೋಟೋ ಬ್ಲರ್ ಆಗಿರಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ತಮಗೆ ಅನವಶ್ಯಕವಾಗಿ ಟಾರ್ಗೆಟ್ ಮಾಡಿ ಅವಮಾನ ಮಾಡಲಾಗಿದೆ ಎಂಬುದು ಅರ್ಹಾನ್ ಸಿಂಗ್ ವಾದ.

  ತಗಳಪ್ಪಾ... ಅನುಷ್ಕಾ ಕೋಪಕ್ಕೆ ಗುರಿಯಾದವ ಒಂದ್ಕಾಲದಲ್ಲಿ 'ಬಾಲನಟ'.!ತಗಳಪ್ಪಾ... ಅನುಷ್ಕಾ ಕೋಪಕ್ಕೆ ಗುರಿಯಾದವ ಒಂದ್ಕಾಲದಲ್ಲಿ 'ಬಾಲನಟ'.!

  ಸದ್ಯ ವಿರಾಟ್ ದಂಪತಿಗೆ ಅರ್ಹಾನ್ ಸಿಂಗ್ ಲೀಗಲ್ ನೋಟೀಸ್ ನೀಡಿದ್ದಾರೆ. ಮುಂದೆ ಇನ್ನೇನು ಆಗುತ್ತೋ, ನೋಡಬೇಕು.

  English summary
  Arrhan Singh (Man who threw garbage) sends a legal notice to Anushka Sharma and Virat Kohli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X