For Quick Alerts
  ALLOW NOTIFICATIONS  
  For Daily Alerts

  'ಮೈ ಡಿಯರ್ ಆರ್ಯನ್...' ಶಾರುಖ್ ಪುತ್ರನಿಗೆ ಧೈರ್ಯ ತುಂಬಿದ ಹೃತಿಕ್ ರೋಷನ್

  By ಫಿಲ್ಮಿಬೀಟ್ ಡೆಸ್ಕ್
  |

  ಶಾರುಖ್​ ಖಾನ್ ​ಪುತ್ರ ಆರ್ಯನ್ ​ಖಾನ್​ ಸದ್ಯ ಎನ್ ಸಿ ಬಿ ವಶದಲ್ಲಿದ್ದಾರೆ. ಇಂದು (ಅಕ್ಟೋಬರ್ 07) ಆರ್ಯನ್ ಮತ್ತು ಸಹ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಇವತ್ತಾದರೂ ಆರ್ಯನ್ ಖಾನ್‌ಗೆ ಜಾಮೀನು ಸಿಗಲಿದೆಯೇ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ಪಾರ್ಟಿ ಮಾಡುವಾಗ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ಗೆಳೆಯರಾದ ಅರ್ಬಾಜ್ ಮರ್ಚಂಟ್, ಮೂನ್ ಮುನ್ ಧಾಮೇಚಾ ಸೇರಿದಂತೆ 10 ಮಂದಿ ಎನ್ ಸಿ ಬಿ ಬಲೆಗೆ ಬಿದ್ದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳನ್ನು ಅಕ್ಟೋಬರ್ 11ರ ವರೆಗೆ ವಶಕ್ಕೆ ಕೊಡುವಂತೆ ಎನ್ ಸಿ ಬಿ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಅಕ್ಟೋಬರ್ 7ರ ವರೆಗೆ ಮಾತ್ರ ವಿಸ್ತರಿಸಿತ್ತು. ಇಂದು ಆರ್ಯನ್ ಖಾನ್ ಬಂಧನ ಮುಕ್ತ ಆಗಲಿದ್ದಾರಾ ಎನ್ನುವುದು ಕುತೂಹಲ ಮೂಡಿಸಿದೆ.

  ಅಂದಹಾಗೆ ಆರ್ಯನ್ ಖಾನ್ ಬಂಧನವನ್ನು ವಿರೋಧಿಸಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಶಾರುಖ್ ಅಭಿಮಾನಿಗಳ ಜೊತೆಗೆ ಬಾಲಿವುಡ್‌ನ ಅನೇಕ ಸ್ಟಾರ್ ಕಲಾವಿದರು ಸಹ ಆರ್ಯನ್ ಖಾನ್ ಬಂಧನವನ್ನು ಖಂಡಿಸಿದ್ದಾರೆ. ಅಲ್ಲದೆ ಆರ್ಯನನ್ನು ಬಿಡುಗಡೆ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಇದೀಗ ಶಾರುಖ್ ಪುತ್ರನ ಬೆಂಬಲಕ್ಕೆ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೃತಿಕ್ ದೀರ್ಘವಾದ ಪೋಸ್ಟ್ ಹಾಕುವ ಮೂಲಕ ಆರ್ಯನ್ ಖಾನ್‌ಗೆ ಬಹಿರಂಗ ಪತ್ರ ಬರೆದಿದ್ದಾರೆ.

  ಹೃತಿಕ್ ಪೋಸ್ಟ್‌ನಲ್ಲಿ, "ಮೈ ಡಿಯರ್ ಆರ್ಯನ್....ಬದುಕು ಒಂದು ವಿಚಿತ್ರ ಸವಾರಿ. ಇದು ಅದ್ಭುತವಾಗಿದೆ ಏಕೆಂದರೆ ಇದು ಅನಿಶ್ಚಿತ. ಆದರೆ ದೇವರು ಕರುಣಾಮಯಿ. ದೇವರು ನಿಮಗೆ ದಯೆತೋರುತ್ತಾನೆ. ಆ ದೇವರು ಕಠಿಣವಾದ ಆಟವನ್ನು ಆಡಲು ಮಾತ್ರ ಕಠಿಣವಾದ ಚೆಂಡು ನೀಡುತ್ತಾನೆ. ಕೋಪ, ಗೊಂದಲ, ಅಸಹಾಯಕತೆ. ಆಹಾ.. ಈ ಎಲ್ಲಾ ಅಂಶಗಳು ಸುಟ್ಟು ನಿಮ್ಮೊಳಗಿನ ನಾಯಕ ಹೊರಬರುತ್ತಾನೆ. ಆದರೆ ಹುಷಾರು, ಇದೆ ಅಂಶಗಳು ನಿಮ್ಮಲ್ಲಿನ ಒಳ್ಳೆತನ ದಯೆ, ಸಹಾನುಭೂತಿ, ಪ್ರೀತಿಯನ್ನು ಸುಟ್ಟುಹಾಕಬಹುದು" ಎಂದು ಹೇಳಿದ್ದಾರೆ.

  "ನಿನ್ನಲ್ಲಿ ಯಾವ ಅನುಭವಗಳನ್ನು ಎಸೆಯಬೇಕು ಮತ್ತು ಯಾವ ಅನುಭವಗಳನ್ನು ಇಟ್ಟುಕೊಳ್ಳಬೇಕು ಎಂದು ತಿಳಿಯದಿದ್ದರೆ ಈ ತಪ್ಪು , ವೈಫಲ್ಯಗಳು, ಗೆಲವು, ಯಶಸ್ಸು ಎಲ್ಲವೂ ಒಂದೇ ಆಗುತ್ತದೆ. ಆದರೆ ನೀನು ಎಲ್ಲದರೊಂದಿಗೆ ಉತ್ತಮವಾಗಿ ಬೆಳೆಯಬಹುದು ಎಂದು ತಿಳಿದಿದಿಯಾ. ನಾನು ನಿನ್ನನ್ನು ಚಿಕ್ಕವನಿಂದ ನೋಡಿದ್ದೇನೆ ಮತ್ತು ದೊಡ್ಡವನಾದಾಗನೂ ನೋಡಿದ್ದೀನಿ. ಈ ಅನುಭವಗಳನ್ನೆಲ್ಲ ನೀನು ನಿನ್ನದಾಗಿಸಿಕೊಳ್ಳಬೇಕು. ಈ ಅನುಭವಗಳೇ ನಿನಗೆ ಗಿಫ್ಟ್" ಎಂದು ಧೈರ್ಯ ತುಂಬಿದ್ದಾರೆ. ಹೃತಿಕ್ ಪೋಸ್ಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

  ಅಂದಹಾಗೆ ಈಗಾಗಲೇ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್, ಸುನಿಲ್ ಶೆಟ್ಟಿ, ಸಲ್ಮಾನ್ ಖಾನ್ ಸೇರಿದಂತೆ ಅನೇಕರು ಆರ್ಯನ್ ಖಾನ್ ಪರ ನಿಂತಿದ್ದಾರೆ. ಇದೀಗ ಹೃತಿಕ್ ಕೂಡ ನಿಂತಿದ್ದಾರೆ.

  English summary
  Aryan arrest: Actor Hrithik Roshan pens long note for Aryan Khan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X