For Quick Alerts
  ALLOW NOTIFICATIONS  
  For Daily Alerts

  ಅವರು ಮುಗ್ಧರು: ಮೌನ ಮುರಿದ ಆರ್ಯನ್ ಸಹ ಆರೋಪಿ ಅರ್ಬಾಜ್ ಮರ್ಚಂಟ್ ತಂದೆ

  |

  ಬಾಲಿವುಡ್ ಖ್ಯಾತ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಮತ್ತು ಸಹ ಆರೋಪಿಗಳು ಎನ್ ಸಿ ಬಿ ವಶದಲ್ಲಿದ್ದಾರೆ. ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ಮಾಡುವಾಗ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ಗೆಳೆಯರಾದ ಅರ್ಬಾಜ್ ಮರ್ಚಂಟ್, ಮೂನ್ ಮುನ್ ಧಾಮೇಚಾ ಸೇರಿದಂತೆ ಅನೇಕರನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಮೂವರು ಪ್ರಮುಖ ಆರೋಪಿಗಳನ್ನು ಅಕ್ಟೋಬರ್ 11ರ ವರೆಗೆ ವಶಕ್ಕೆ ಕೊಡುವಂತೆ ಎನ್ ಸಿ ಬಿ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಅಕ್ಟೋಬರ್ 7ರ ವರೆಗೆ ಮಾತ್ರ ವಿಸ್ತರಿಸಿದೆ.

  ಆರ್ಯನ್ ಗೆಳೆಯ, ಸಹ ಆರೋಪಿ ಅರ್ಬಾಜ್ ಮರ್ಚಂಟ್ ತಂದೆ ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿರುವ ಅವರು, ಅವರೆಲ್ಲ ಮುದ್ಧರು, ಅವರ ಬಳಿ ಯಾವುದೇ ವಾಟ್ಸಪ್ ಚಾಟ್ ಇಲ್ಲ ಎಂದು ಹೇಳಿದ್ದಾರೆ. ತನ್ನ ಮಗ ಮತ್ತು ಸ್ನೇಹಿತರ ವಿರುದ್ಧ ಕೇಳಿಬಂದಿರುವ ಆರೋಪಗಳು ಆಧಾರ ರಹಿತ ಎಂದು ಅರ್ಬಾಜ್ ತಂದೆ, ವಕೀಲ ಅಸ್ಲಂ ಮರ್ಚಂಟ್ ಹೇಳಿದ್ದಾರೆ.

  "ಇದು ಆಧಾರ ರಹಿತ ಆರೋಪಗಳು. ಇನ್ನು ತನಿಖೆಯಲ್ಲಿದೆ. ನಾನು ವಕೀಲನಾಗಿದ್ದರಿಂದ ನನಗೆ ನ್ಯಾಯಾಲಯದಲ್ಲಿ ನಂಬಿಕೆ ಇದೆ. ಸತ್ಯ ಮೇಲುಗೈ ಸಾಧಿಸಲಿದೆ. ಅವರು ಆರೋಪ ಮುಕ್ತರಾಗಿ ಹೊರಬರುತ್ತಾರೆ. ಅವರು ಮುದ್ಧರು" ಎಂದು ಹೇಳಿದ್ದಾರೆ.

  ಪತ್ತೆಯಾದ ಆಕ್ರಮ ವಸ್ತುಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸ್ಲಂ ಮರ್ಚಂಟ್, " ಏನೆ ಸಿಕ್ಕಿದರೂ ಅದು ಹಡಗಿನ ಒಳಗೆ. ಹೊರಗಡೆಯಲ್ಲ. ಅವರು ಇನ್ನು ಹಡಗಿನ ಒಳಗೆ ಪ್ರವೇಶ ಪಡೆದಿರಲಿಲ್ಲ. ಅವರು ಅಲ್ಲಿ ಗೆಸ್ಟ್ ಅಷ್ಟೆ" ಎಂದಿದ್ದಾರೆ. ಇನ್ನು ಆರ್ಯನ್ ಖಾನ್ ವಾಟ್ಸಪ್ ಚಾಟ್ ನಿಂದ ಶಾಕಿಂಗ್ ಮತ್ತು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ ಎಂದು ಎನ್ ಸಿ ಬಿ ನ್ಯಾಯಾಲಯದಲ್ಲಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಸ್ಲಂ ಮರ್ಚಂಟ್, "ಡ್ರಗ್ಸ್ ಗೆ ಸಂಬಂಧ ಪಟ್ಟ ವಾಟ್ಸಪ್ ಚಾಟ್ ಇಲ್ಲ. ಅವರು ಸಿದ್ಧತೆ ನಡೆಸಿ ಹೋದವರಲ್ಲ. ಹಡಗಿನ ಪಾರ್ಟಿಗೆ ಹೋಗಲು ಕೊನೆ ಕ್ಷಣದಲ್ಲಾದ ಪ್ಲಾನ್" ಎಂದು ಹೇಳಿದರು.

  ಅಂದಹಾಗೆ ಆರ್ಯನ್ ಖಾನ್ ಸ್ನೇಹಿತ ಅರ್ಬಾಜ್ ಮರ್ಚಂಟ್ ತಂದೆ ಅಸ್ಲಂ ಮರ್ಚಂಟ್ ಕೂಡ ವಕೀಲರು. ಪುತ್ರ ಅರ್ಬಾಜ್ ಮರ್ಚಂಟ್ ಬಾಲಿವುಡ್‌ನ ಅನೇಕ ಸ್ಟಾರ್ ಮಕ್ಕಳ ಜೊತೆ ಗೆಳೆತನ ಹೊಂದಿದ್ದಾರೆ. ಇರ್ಫಾನ್ ಖಾನ್ ಪುತ್ರ, ಬಾಬಿಲ್ ಖಾನ್, ಪೂಜಾ ಬೇಡಿ ಮಗಳು ಅಲಯಾ, ಅನನ್ಯಾ ಪಾಂಡೆ ಸೇರಿದಂತೆ ಅನೇಕರ ಜೊತೆ ಉತ್ತಮ ಸ್ನೇಹ ಹೊಂದಿದ್ದಾರೆ. ಸ್ಟಾರ್ ಮಕ್ಕಳ ಜೊತೆ ಇರುವ ಫೋಟೋಗಳನ್ನು ಅರ್ಬಾಜ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  English summary
  Aryan Khan cor accused Arbaaz merchant father reaction about his son arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X