For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್‌ ಗೆ ಧನ್ಯವಾದ ಹೇಳಿದ ಅಸ್ಸಾಂ ಮುಖ್ಯಮಂತ್ರಿ

  |

  ಅಸ್ಸಾಂ ಮುಖ್ಯಮಂತ್ರಿ ಸರ್ಬನಂದ ಸೋನಾವಾಲ್, ನಟ ಅಕ್ಷಯ್‌ ಕುಮಾರ್ ಗೆ ಧನ್ಯವಾದ ಅರ್ಪಿಸಿದ್ದಾರೆ.

  ಮೊದಲ ಸಿನಿಮಾದಲ್ಲೇ Superstar Niranjan 6 packs | Filmibeat Kannada

  ಪ್ರಸ್ತುತ ಸ್ಕಾಟ್‌ಲೆಂಡ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಅಕ್ಷಯ್ ಕುಮಾರ್, ಪ್ರವಾಹ ಪೀಡಿತ ಅಸ್ಸಾಂ ಗೆ ಒಂದು ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಹಾಗಾಗಿ ಅಸ್ಸಾಂ ಸಿಎಂ ಅಕ್ಷಯ್ ಕುಮಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

  ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ ಕುಮಾರ್ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಏಕೈಕ ಭಾರತೀಯ ಅಕ್ಷಯ್ ಕುಮಾರ್

  ಟ್ವೀಟ್‌ ಮಾಡಿರುವ ಅಸ್ಸಾಂ ಸಿಎಂ, 'ಅಸ್ಸಾಂನ ನಿಜ ಗೆಳೆಯರಾಗಿರುವ ನೀವು, ಅಸ್ಸಾಂ ಪ್ರವಾಹ ಪರಿಹಾರ ನಿಧಿಗೆ ಒಂದು ಕೋಟಿ ದೇಣಿಗೆ ನೀಡುರುವುದಕ್ಕೆ ಧನ್ಯವಾದಗಳು' ಎಂದಿದ್ದಾರೆ.

  ಅಕ್ಷಯ್‌ಕುಮಾರ್ ಗೆ ಅಸ್ಸಾಂ ಸಿಎಂ ಟ್ವೀಟ್

  ಅಕ್ಷಯ್‌ಕುಮಾರ್ ಗೆ ಅಸ್ಸಾಂ ಸಿಎಂ ಟ್ವೀಟ್

  ಯಾವುದೇ ಸಂಕಷ್ಟದ ಪರಿಸ್ಥಿತಿಗೆ ನೀವು ಸ್ಪಂದಿಸುತ್ತೀರಿ. ಕಾಳಜಿ ವ್ಯಕ್ತಪಡಿಸುತ್ತೀರಿ. ದೇವರು ನಿಮಗೆ ಆಶೀರ್ವಾದ ಕರುಣಿಸಲಿ, ನಿಮ್ಮ ಕೀರ್ತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸಿದ್ದಾರೆ ಅಸ್ಸಾಂ ಸಿಎಂ ಸೋನಾವಾಲ್.

  ಬಿಹಾರ ರಾಜ್ಯಕ್ಕೂ ಒಂದು ಕೋಟಿ ದೇಣಿಗೆ

  ಬಿಹಾರ ರಾಜ್ಯಕ್ಕೂ ಒಂದು ಕೋಟಿ ದೇಣಿಗೆ

  ಪ್ರಸ್ತುತ ಅಸ್ಸಾಂ ಮತ್ತು ಬಿಹಾರ ರಾಜ್ಯಗಳು ಪ್ರವಾಹದಿಂದ ತತ್ತರಿಸಿವೆ. ಎರಡೂ ರಾಜ್ಯಗಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿ ಹಣವನ್ನು ದೇಣಿಗೆ ನೀಡಿದ್ದರು ಅಕ್ಷಯ್ ಕುಮಾರ್. ದೇಣಿಗೆ ನೀಡಿದ ಬಳಿಕ ಎರಡೂ ರಾಜ್ಯದ ಸಿಎಂ ಗಳ ಜೊತೆಗೆ ಅಕ್ಷಯ್ ಕುಮಾರ್ ದೂರವಾಣಿ ಮೂಲಕ ಮಾತನಾಡಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

  ಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕಅಕ್ಷಯ್ ಕುಮಾರ್ ದೊಡ್ಡ ಸ್ವಾರ್ಥಿ, ಹಣವಷ್ಟೆ ಆತನಿಗೆ ಮುಖ್ಯ ಎಂದ ನಿರ್ಮಾಪಕ

  ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ

  ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ

  ನಟ ಅಕ್ಷಯ್ ಕುಮಾರ್ ಅವರು ದೇಶದಲ್ಲಿ ನಡೆಯುವ ಯಾವುದೇ ಸಂಕಷ್ಟಕ್ಕೆ ಸ್ಪಂದಿಸುತ್ತಾರೆ. ಸಹಾಯ ಹಸ್ತವನ್ನು ಚಾಚುತ್ತಲೇ ಬಂದಿದ್ದಾರೆ. ಕೊರೊನಾ ಸಂಕಷ್ಟಕ್ಕೆ ಸ್ಪಂದಿಸಿದ್ದ ಅಕ್ಷಯ್ 25 ಕೋಟಿ ಹಣವನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಿದ್ದನ್ನು ಸ್ಮರಿಸಬಹುದು.

  ಅಕ್ಷಯ್ ಕುಮಾರ್ ಮುಂಬರಲಿರುವ ಸಿನಿಮಾಗಳು

  ಅಕ್ಷಯ್ ಕುಮಾರ್ ಮುಂಬರಲಿರುವ ಸಿನಿಮಾಗಳು

  ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಸೂರ್ಯವಂಶಿ ಸಿನಿಮಾ ಸಹ ಬಿಡುಗಡೆಗೆ ತಯಾರಿದೆ. ಅತರಂಗಿ ರೇ, ಬಚ್ಚನ್ ಪಾಂಡೆ, ಹೇರಾ ಪೇರಿ 3, ಪೃಥ್ವಿರಾಜ್ ಸಿನಿಮಾ ಚಿತ್ರೀಕರಣ ಆಗಬೇಕಿದೆ.

  14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?14 ದಿನಗಳ ಚಿತ್ರೀಕರಣಕ್ಕೆ ಅಕ್ಷಯ್ ಕುಮಾರ್ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ?

  English summary
  Assam CM Sarbananda Sonowal thanked actor Akshay Kumar for donating 1 crore rupees for CM relief fund to help flood victims.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X