Don't Miss!
- News
ಓಲಾದಲ್ಲಿ ಎಸಿಯಿಲ್ಲ ಎಂದು 15,000 ಪರಿಹಾರ ಪಡೆದ ಬೆಂಗಳೂರಿನ ಉದ್ಯಮಿ, ವಿವರಗಳು
- Sports
Ind vs NZ1st T20: ವಾಶಿಂಗ್ಟನ್ 'ಸುಂದರ' ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಲಾರ್ಡ್ಸ್‌ನಲ್ಲಿ ರಾಹುಲ್ ಶತಕ, ಪ್ರೇಮ ಸಂದೇಶ ರವಾನಿಸಿದ ಆತಿಯಾ ಶೆಟ್ಟಿ
ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಆತಿಯಾ ಶೆಟ್ಟಿ ಲವ್ವಲ್ಲಿ ಇದ್ದಾರೆ, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಬಹಳ ದಿನದಿಂದ ಚರ್ಚೆಯಲ್ಲಿದೆ. ಈ ಬಗ್ಗೆ ಯಾರೊಬ್ಬರು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಪ್ರಣಯ ಪಕ್ಷಿಗಳಂತೆ ಪಾರ್ಟಿ, ಪಬ್, ಹಾಲಿಡೇ ಎಂಜಾಯ್ ಅಂತ ಎಲ್ಲಾ ಕಡೆಯೂ ಈ ಇಬ್ಬರು ಒಟ್ಟೊಟ್ಟಿಗೆ ಸುತ್ತಾಡುತ್ತಿರುವುದು ಈ ಜೋಡಿಯ ಪ್ರೀತಿಯನ್ನು ಖಚಿತಪಡಿಸಿದೆ.
ಟೀಂ ಇಂಡಿಯಾ ಈಗ ಆಂಗ್ಲರ ವಿರುದ್ಧ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಆಡುತ್ತಿದೆ. ಈ ಟೂರ್ನಿಗಾಗಿ ತಿಂಗಳ ಹಿಂದೆಯೆ ಭಾರತೀಯ ಕ್ರಿಕೆಟಿಗರು ತಮ್ಮ ಕುಟುಂಬ ಸಮೇತ ಲಂಡನ್‌ಗೆ ಹಾರಿದ್ದರು. ಈ ವೇಳೆ ಕೆಎಲ್ ರಾಹುಲ್ ಜೊತೆ ಆತಿಯಾ ಶೆಟ್ಟಿಯೂ ಕಾಣಿಸಿಕೊಂಡಿದ್ದು ಬಿಸಿಬಿಸಿ ಚರ್ಚೆಗೆ ಕಾರಣ ಆಗಿತ್ತು. ಟೀಂ ಇಂಡಿಯಾ ಆಟಗಾರರು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ಆದರೆ ರಾಹುಲ್ ಮಾತ್ರ ಪ್ರೇಯಸಿ ಜೊತೆ ಹೋಗಿದ್ದು ಏಕೆ ಎಂದು ನೆಟ್ಟಿಗರು ಬಿಸಿಸಿಐ ವಿರುದ್ಧ ಟೀಕೆ ಸಹ ವ್ಯಕ್ತಪಡಿಸಿದ್ದರು.
ನಟ
ಸುನಿಲ್
ಶೆಟ್ಟಿ
ಮಗಳ
ಜೊತೆ
ಲಂಡನ್ನಲ್ಲಿ
ಕಾಣಿಸಿಕೊಂಡ
ಕೆ.ಎಲ್
ರಾಹುಲ್:
ಫೋಟೋ
ವೈರಲ್
ಇದೀಗ, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೆಎಲ್ ರಾಹುಲ್ ಶತಕ ಬಾರಿಸಿ ಮಿಂಚಿದ್ದಾರೆ. ಮೊದಲ ದಿನವೇ ಸೆಂಚುರಿ ದಾಖಲು ಮಾಡಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ. ಐತಿಹಾಸಿಕ ಕ್ರೀಡಾಂಗಣ ಲಾರ್ಡ್ಸ್‌ನಲ್ಲಿ ಮೊದಲ ಸೆಂಚುರಿ ಬಾರಿಸಿದ್ದಕ್ಕೆ ರಾಹುಲ್‌ಗೆ ದಿಗ್ಗಜ ಕ್ರಿಕೆಟಗರು ಶುಭಕೋರಿದ್ದಾರೆ.
ಈ ಕಡೆ ಲರ್ಡ್ಸ್‌ನಲ್ಲಿ ರಾಹುಲ್ ಸೆಂಚುರಿ ಬಾರಿಸುತ್ತಿದ್ದಂತೆ ಆತಿಯಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಪ್ರೇಮ ಸಂದೇಶ ರವಾನಿಸಿದ್ದಾರೆ. ರಾಹುಲ್ ಶತಕದ ವಿಡಿಯೋ ತುಣುಕನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಹೈಫೈ ಎಮೋಜಿ ಜೊತೆಗೆ ಲವ್ ಎಮೋಜಿ ಪೋಸ್ಟ್ ಮಾಡಿ ರಾಹುಲ್ ಖಾತೆ ಟ್ಯಾಗ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಆತಿಯಾ ಶೆಟ್ಟಿ ತಂದೆ ನಟ ಸುನೀಲ್ ಶೆಟ್ಟಿ ಸಹ ರಾಹುಲ್ ಸೆಂಚುರಿ ಬಾರಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 127* (248) ರನ್ ಬಾರಿಸಿ ನಾಟೌಟ್ ಆಗಿ ಉಳಿದುಕೊಂಡಿದ್ದಾರೆ. ಮೊದಲ ದಿನದ ಅಂತ್ಯಕ್ಕೆ ಭಾರತದ ಒಟ್ಟು ಸ್ಕೋರ್ 276/3.
ಸುಟ್ಟು
ಹೋದ
ಬ್ರೆಡ್
ಹಾಗೂ
ಕೆಎಲ್
ರಾಹುಲ್
ಮತ್ತು
ಸುನಿಲ್
ಶೆಟ್ಟಿ
ಮಗಳ
ಡೇಟಿಂಗ್!
ಇನ್ನು ಆತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಪ್ರೀತಿ ಸಂಬಂಧದ ಬಗ್ಗೆ ಸುನೀಲ್ ಶೆಟ್ಟಿ ಈ ಹಿಂದೆಯೊಮ್ಮೆ ಪ್ರತಿಕ್ರಿಯಿಸಿದ್ದರು. ''ಅವರಿಬ್ಬರ ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಒಂದು ವೇಳೆ ಅವರೇ ಏನಾದರೂ ಹೇಳಿದ್ರೆ ನನಗೆ ತಿಳಿಸಿ'' ಎಂದು ಹೇಳಿದ್ದರು. ಈ ಕಡೆ ರಾಹುಲ್ ಮತ್ತು ಆತಿಯಾ ಶೆಟ್ಟಿಗೂ ವೈಯಕ್ತಿಕವಾಗಿ ಸೋಶಿಯಲ್ ಮೀಡಿಯಾ ಈ ಕುರಿತು ಪ್ರಶ್ನೆಗಳು ಕೇಳುತ್ತಲೇ ಇರುತ್ತದೆ. ಆದರೆ ಈ ಬಗ್ಗೆ ಇಬ್ಬರ ಮೌನ ಮುಂದುವರಿಸಿದ್ದಾರೆ.

2015ರಲ್ಲಿ ಬಾಲಿವುಡ್‌ಗೆ ಕಾಲಿಟ್ಟ ನಟಿ ಅತಿಯಾ ಶೆಟ್ಟಿ, ನಟ ಸೂರಜ್ ಪಾಂಚೋಲಿ ಜೊತೆ ನಟಿಸಿದ್ದರು. ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದ ಅತಿಯಾ ಸಿನಿಮಾಗಿಂತ ಹೆಚ್ಚಾಗಿ ರಾಹುಲ್ ಜೊತೆಗಿನ ಪ್ರೀತಿ, ಡೇಟಿಂಗ್ ವಿಚಾರವಾಗಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ.
ಅತಿಯಾ ಶೆಟ್ಟಿಗೂ ಮುಂಚೆ ಕೆಎಲ್ ರಾಹುಲ್ ಹೆಸರು ಹಲವು ಬಾಲಿವುಡ್ ನಟಿಯರ ಜೊತೆ ತಳುಕು ಹಾಕಿಕೊಂಡಿತ್ತು. ಆಕಾಂಕ್ಷಾ ರಂಜನ್ ಕಪೂರ್, ನಿಧಿ ಅಗರ್‌ವಾಲ್, ಸೋನಮ್ ಬಾಜ್ವಾ, ಸೋನಾಲ್ ಚೌಹಣ್ ಜೊತೆಯೂ ಕ್ರಿಕೆಟಿಗನ ಹೆಸರು ಕೇಳಿ ಬಂದಿತ್ತು. ಆದರೆ ಆತಿಯಾ ಶೆಟ್ಟಿ ಜೊತೆ ಹೆಚ್ಚು ಲಿಂಕ್ ಅಪ್ ಆಗಿದೆ.