»   » ಕನ್ನಡಿಗ ಅಟ್ಲಾಂಟಾ ನಾಗೇಂದ್ರ 'ಮುಂಭಾಯ್ ಕನೆಕ್ಷನ್'

ಕನ್ನಡಿಗ ಅಟ್ಲಾಂಟಾ ನಾಗೇಂದ್ರ 'ಮುಂಭಾಯ್ ಕನೆಕ್ಷನ್'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಪರಿಮಳವನ್ನು ಸಪ್ತಸಾಗರದಾಚೆಗೆ ಪರಿಚಯಿಸುತ್ತಿರುವ ಅನಿವಾಸಿ ಕನ್ನಡಿಗರಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಅಟ್ಲಾಂಟಾ ನಾಗೇಂದ್ರ. ಹಲವಾರು ಕನ್ನಡ ಚಿತ್ರಗಳ ಸಾಗರೋತ್ತರ ಹಕ್ಕುಗಳನ್ನು ಪಡೆಯುವ ಮೂಲಕ ಸಪ್ತಸಾಗರದಾಚೆ ಕನ್ನಡ ಚಿತ್ರಗಳನ್ನು ಪರಿಚಯಿಸಿದ ಖ್ಯಾತಿ ಅವರದು.

ಅಟ್ಲಾಂಟಾ ನಾಗೇಂದ್ರ ಅವರು ವೃತ್ತಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆದರೆ ಪ್ರವೃತ್ತಿಯಲ್ಲಿ ಸಿನಿಮಾ ನಿರ್ಮಾತೃ. ಬೆಂಗಳೂರು ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಅವರು ಚಿತ್ರರಂಗಕ್ಕೆ ಅಡಿಯಿಟ್ಟದ್ದೇ ಒಂದು ವಿಶೇಷ.

Atlanta Nagendra

ಅಮೆರಿಕದ ಅತಿಹೆಚ್ಚು ಜನನಿಬಿಡ ರಾಜ್ಯಗಳಲ್ಲಿ ಒಂದಾಗಿರುವ ಅಟ್ಲಾಂಟಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ಆರಂಭಿಸಿದ ನಾಗೇಂದ್ರ ಅವರು ಹಲವಾರು ಕನ್ನಡ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಶರಣ್ ಅಭಿನಯದ 'ರ್‍ಯಾಂಬೋ' ಚಿತ್ರವನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕರೆನ್ನಿಸಿಕೊಂಡರು.

ಇದಕ್ಕೂ ಮುನ್ನ ಅಂದರೆ 2004ರಲ್ಲಿ 'ಜೋಕ್ ಫಾಲ್ಸ್' ಎಂಬ ಚಿತ್ರವನ್ನು ನಿರ್ಮಿಸಿದ್ದರು. ರಮೇಶ್ ಅರವಿಂದ ಅಭಿನಯದ 'ಜೋಕ್ ಫಾಲ್ಸ್' ಚಿತ್ರ ಬೆಂಗಳೂರಿನ ಪಿವಿಆರ್ ಸಿನಿಮಾಸ್ ನಲ್ಲಿ 25 ವಾರಗಳ ಭರ್ಜರಿ ಪ್ರದರ್ಶನ ಕಂಡಿದೆ. ಅಲ್ಲಿಂದ ಆರಂಭವಾದ ಅವರ ಬೆಳ್ಳೆತೆರೆಯ ನಂಟು ಈಗ 'ಮುಂಭಾಯ್ ಕನೆಕ್ಷನ್'ವರೆಗೂ ಬಂದಿದೆ.

ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರ ಮಾರ್ಚ್ 2014ರಲ್ಲಿ ತೆರೆಕಾಣುತ್ತಿದೆ. ಈ ಸಿನಿಮಾಗೆ ಚಿತ್ರಕಥೆ ಜೊತೆಗೆ ಸಂಭಾಷಣೆ ಸಹ ಅಟ್ಲಾಂಟಾ ನಾಗೇಂದ್ರ ಅವರೇ ಬರೆದಿರುವುದು ವಿಶೇಷ. ಸ್ಪ್ಯಾನಿಷ್ ಭಾಷೆಯಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಮುಂಭಾಯ್ ಕನೆಕ್ಷನ್ ಚಿತ್ರದ ವಿಶೇಷಗಳೆಂದರೆ...ಈ ಚಿತ್ರವನ್ನು ಸಂಪೂರ್ಣವಾಗಿ ಅಟ್ಲಾಂಟಾದಲ್ಲೇ ಚಿತ್ರೀಕರಿಸಿರುವುದು. ಈಗಾಗಲೆ ಎಂಟು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವಾರು ಪ್ರಶಸ್ತಿ, ಗೌರವಕ್ಕೆ 'ಮುಂಭಾಯ್ ಕನೆಕ್ಷನ್' ಚಿತ್ರ ಪಾತ್ರವಾಗಿದೆ.

Mumbhai Connection

ಕೇವಲ 90 ನಿಮಿಷಗಳ ಕಾಲಾವಧಿಯ ಈ ಚಿತ್ರ ಐಟಿ ಜಗತ್ತು ಹಾಗೂ ಮಾಫಿಯಾ ಅಂಶಗಳ ಸುತ್ತ ಸುತ್ತುತ್ತದೆ. ಈ ಹಿಂದಿ ಮಿಶ್ರಿತ ಇಂಗ್ಲಿಷ್ ಚಿತ್ರದಲ್ಲಿ ಭಾರತೀಯ ಹಾಗೂ ಅಮೆರಿಕ ಕಲಾವಿದರು ಅಭಿನಯಿಸಿದ್ದಾರೆ. ಚಲನಚಿತ್ರೋತ್ಸವಗಳಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರ ಕ್ಯಾಲಿಪೋರ್ನಿಯಾ, ಜಾರ್ಜಿಯಾ ಹಾಗೂ ಅಟ್ಲಾಂಟಾ ಚಿತ್ರೋತ್ಸವಗಳಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

ಈ ಚಿತ್ರದ ಸಾಕಷ್ಟು ತಾಂತ್ರಿಕ ಕೆಲಸಗಳು ಬೆಂಗಳೂರಿನಲ್ಲೇ ನಡೆದಿರುವುದು ವಿಶೇಷ. ಬೆಂಗಳೂರಿನಲ್ಲೇ ಸೆನ್ಸಾರ್ ಮಾಡಿಸಲಾಗಿದ್ದು ಯು/ಎ ಸರ್ಟಿಫಿಕೇಟ್ ಪಡೆದಿದೆ. ಮೇನ್ ಥಿಯೇಟರ್ ಗಳಿಗಿಂತ ಹೆಚ್ಚಾಗಿ ಮಲ್ಟಿಫ್ಲೆಕ್ಸ್ ಗಳಲ್ಲೇ ಹೆಚ್ಚಾಗಿ ರಿಲೀಸ್ ಮಾಡಲು ನಾಗೇಂದ್ರ ಅವರು ಉದ್ದೇಶಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Mumbhai Connection is a 2014 full-length feature film in Hindi/English shot entirely in Atlanta, USA. The movie is set to release in March 2014 and is presented by Mowgli Productions Pvt Ltd. It is directed by Atlanta Nagendra, who also wrote the screenplay.
Please Wait while comments are loading...