For Quick Alerts
  ALLOW NOTIFICATIONS  
  For Daily Alerts

  ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ವಿವಾದಗಳಿಂದ ದೂರ ಆಗುವ ಲಕ್ಷಣಗಳೇ ಕಾಣುತ್ತಿಲ್ಲ. ಒಂದಲ್ಲೊಂದು ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೊಂದು ವಿವಾದದಲ್ಲಿ ಕಂಗನಾ ಸಿಲುಕಿಕೊಂಡಿದ್ದಾರೆ. ಕ್ವೀನ್ ನಟಿಯ ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪ ಕೇಳಿಬಂದಿದೆ.

  ಕಂಗನಾ ಇತ್ತೀಚಿಗಷ್ಟೆ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. 'ಮಣಿಕರ್ಣಿಕಾ; ದಿ ಲೆಜೆಂಡ್ ಆಫ್ ದಿಡ್ಡಾ' ಎಂಬ ಹೆಸರಿನ ಚಿತ್ರದಲ್ಲಿ ಕಾಶ್ಮೀರದ ರಾಣಿಯಾಗಿ ನಟಿಸುವುದಾಗಿ ಕಂಗನಾ ಘೋಷಣೆ ಮಾಡಿದ್ದರು. ಸಿನಿಮಾ ಘೋಷಣೆಯಾದ ಬೆನ್ನಲ್ಲೇ ವಿವಾದವೂ ಬೆನ್ನತ್ತಿದೆ. ಕಂಗನಾ ಕಥೆ ಕದ್ದಿದ್ದಾರೆ ಎಂದು ಲೇಖಕ ಆಶಿಶ್ ಕೌಲ್ ಆರೋಪಿಸಿ ಕಂಗನಾಗೆ ನೋಟಿಸ್ ನೀಡಲಾಗಿದೆ.

  ಮತ್ತೆ ಮಣಿಕರ್ಣಿಕಾ ಅವತಾರದಲ್ಲಿ ಕಂಗನಾ ರಣೌತ್

  'ದಿಡ್ಡಾ- ಕಾಶ್ಮೀರ್ ಕೀ ಯೋಧಾ ರಾಣಿ' ಪುಸ್ತಕಕ್ಕೆ ಮುನ್ನುಡಿ ಬರೆದುಕೊಡುವಂತೆ ಕಂಗನಾಗೆ ಈ ಹಿಂದೆ ಮೇಲ್ ಮಾಡಿದ್ದೆ, ಆದರೆೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುನ್ನುಡಿ ಬದಲು, ಅದನ್ನೇ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ಲೇಖಕ ಆಶಿಶ್ ಆರೋಪಿಸಿದ್ದಾರೆ.

  ನೋಟಿಸ್ ನಲ್ಲಿ ಕಂಗನಾಗೆ 72 ಗಂಟೆಯಲ್ಲಿ ಉತ್ತರ ನೀಡುವಂತೆ ಕೇಳಿಕೊಂಡಿದ್ದಾರೆ. ಇಲ್ಲವಾದರೇ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

  ಚಿತ್ರದ ನಿರ್ಮಾಪಕ ಕಮಲ್ ಜೈನ್ ಕಥೆ ಕದ್ದು ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ ಅವರ ಸಿನಿಮಾ ಪುಸ್ತಕವನ್ನು ಆಧರಿಸಿದೆ ಎಂದು ಲೇಖಕ ಆಶೀಶ್ ಆರೋಪಿಸಿದ್ದಾರೆ. ಅಲ್ಲದೇ ಕಂಗನಾ ವಿರುದ್ಧ ಕಥೆ ಕದ್ದ ಆರೋಪ ಮಾಡಿದ ಬಳಿಕ ಕಂಗನಾ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ, ನಿಂದನೆ ಮಾಡುತ್ತಿದ್ದಾರೆ. ಇದರಿಂದ ತೀವ್ರ ಮಾನಸಿಕ ಯಾತನೆ ಅನುಭವಿಸಿರುವುದಾಗಿಯೂ ಅಶಿಶ್ ಹೇಳಿದ್ದಾರೆ.

  ಅಲ್ಲದೆ ಈ ಪುಸ್ತಕ ಈಗಾಗಲೇ ಸಿನಿಮಾವಾಗಲು ಖ್ಯಾತ ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆದಿದೆ. 2017ರಲ್ಲೇ ನೋಂದಾಯಿಸಲಾಗಿದೆ ಎಂದು ಹೇಳಿದ್ದಾರೆ.

  ಇದೀಗ ಕಂಗನಾ ಕಡೆಯಿಂದ ಯಾವ ಪ್ರತಿಕ್ರಿಯೆ ಬರಲಿದೆ ಎನ್ನುವ ಕಾತರ ಅಭಿಮಾನಿಗಲ್ಲಿದೆ. ಸಿನಿಮಾ ಪ್ರಾರಂಭಕ್ಕೂ ಮುನ್ನವೇ ಎದುರಾಗಿರುವ ವಿಘ್ನ ನಿವಾರಣೆಯಾಗುತ್ತಾ ಕಾದುನೋಡಬೇಕು.

  English summary
  Author of the Didda-Kashmir Ki Yodha Rani sends legal notice to kangana, Demands a reply within 72 hours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X