For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ನಟರ ದಾಖಲೆಗಳನ್ನೇ ಪುಡಿಗಟ್ಟಿದ ನರೇಂದ್ರ ಮೋದಿ!

  |

  ಸ್ಟಾರ್‌ ನಟರ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ ಹೊಸ ದಾಖಲೆ ಬರೆದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

  ಬಾರ್ಕ್‌ (ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ನೀಡಿರುವ ಅಂಕಿ-ಅಂಶದ ಪ್ರಕಾರ ಟಿವಿಯಲ್ಲಿ ಅತಿ ಹೆಚ್ಚು ನೋಡಲಾದ ಕಾರ್ಯಕ್ರಮ ಮೋದಿಯವರದ್ದು!

  ಹೌದು, ಅದರಲ್ಲಿಯೂ ಆಗಸ್ಟ್ 05 ರಂದು ನಡೆದ ಪ್ರಧಾನಿ ಅವರು ಭಾಗವಹಿಸಿದ್ದ ಅಯೋಧ್ಯೆ ರಾಮಜನ್ಮ ಭೂಮಿ ಶಿಲಾನ್ಯಾಸ ಕಾರ್ಯಕ್ರಮವು ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮವಂತೆ.

  ಡಾ. ರಾಜ್ ಕುಮಾರ್‌ಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಸಂಸದರ ಪತ್ರ

  198 ಚಾನೆಲ್‌ಗಳಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮವನ್ನು ಒಟ್ಟು 16.30 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

  ಸ್ವಾತಂತ್ರ್ಯೋತ್ಸವ ದಿನದ ಭಾಷಣ

  ಸ್ವಾತಂತ್ರ್ಯೋತ್ಸವ ದಿನದ ಭಾಷಣ

  ಇ‍ಷ್ಟೇ ಅಲ್ಲ, ಪ್ರಧಾನಿ ಅವರು ಇದೇ ಸ್ವಾತಂತ್ರ್ಯ ದಿನಾಚರಣೆ ದಿನದಂದು ಕೆಂಪುಕೋಟೆಯಿಂದ ಮಾಡಿದ ಭಾಷಣ ಸಹ ಹೊಸದೊಂದು ದಾಖಲೆ ಬರೆದಿದೆ. ಈ ಭಾಷಣ, ಅತಿ ಹೆಚ್ಚು ವೀಕ್ಷಣಾ ಅವಧಿ ಪಡೆದ ಕಾರ್ಯಕ್ರಮವಾಗಿದೆ. ಆ ಕಾರ್ಯಕ್ರಮ ನೋಡಿದ ಎಲ್ಲರೂ ವ್ಯಯಿಸಿರುವ ಒಟ್ಟು ಸಮಯ 42 ಕೋಟಿ ನಿಮಿಷಗಳು!

  ಈ ಹಿಂದಿನ ದಾಖಲೆಯೂ ಮೋದಿಯದ್ದೇ

  ಈ ಹಿಂದಿನ ದಾಖಲೆಯೂ ಮೋದಿಯದ್ದೇ

  ಇದಕ್ಕೆ ಮುನ್ನಾ ಸಹ ಮೋದಿ ಅವರದ್ದೇ ದಾಖಲೆ ಆಗಿತ್ತು. ಮೇ 12 ರಂದು ಕೋವಿಡ್ ಲಾಕ್‌ಡೌನ್ ಮಾಡುವ ಸಮಯ ಮೋದಿ ಮಾತನಾಡಿದ್ದಾಗಲೂ ಬಹುತೇಕ ಇಷ್ಟೇ ಸಮಯವನ್ನು ಟಿವಿ ನೋಡಲು ವ್ಯಯ ಮಾಡಿದ್ದರು ವೀಕ್ಷಕರು.

  ಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ

  ಸುಶಾಂತ್ ಸುದ್ದಿಯನ್ನು ಹೆಚ್ಚು ಮಂದಿ ನೋಡಿದ್ದಾರೆ

  ಸುಶಾಂತ್ ಸುದ್ದಿಯನ್ನು ಹೆಚ್ಚು ಮಂದಿ ನೋಡಿದ್ದಾರೆ

  ಇದಲ್ಲದೆ, ಸುಶಾಂತ್ ಸಿಂಗ್ ರಜಪೂತ್‌ ವಿಷಯವಾಗಿ ಪ್ರಸಾರವಾದ ಸುದ್ದಿಗಳನ್ನು ಸಹ ಭಾರತೀಯ ಮಂದಿ ಹೆಚ್ಚು ನೋಡಿದ್ದಾರಂತೆ. ವಿವಿಧ ಚಾನೆಲ್‌ಗಳಲ್ಲಿ ಪ್ರಸಾರವಾದ ಸುದ್ದಿಗಳಲ್ಲಿ, ಅತಿ ಹೆಚ್ಚು ಮಂದಿ ನೋಡಿರುವ ಸುದ್ದಿ ಸುಶಾಂತ್ ಪ್ರಕರಣ ಕುರಿತಾದದ್ದೇ ಆಗಿದೆ.

  ಮನೊರಂಜನೆಯಿಂದ ಸುದ್ದಿಯ ಕಡೆಗೆ

  ಮನೊರಂಜನೆಯಿಂದ ಸುದ್ದಿಯ ಕಡೆಗೆ

  ಬಾರ್ಕ್‌ ನೀಡಿರುವ ಹೊಸ ವರದಿ ಪ್ರಕಾರ, ಮನೊರಂಜನೆಗಿಂತಲೂ ಸುದ್ದಿ ಚಾನೆಲ್‌ಗಳನ್ನೇ ಜನ ಹೆಚ್ಚು ನೋಡುತ್ತಿದ್ದಾರಂತೆ. ಜನರು ಮನೊರಂಜನೆಯಿಂದ ಸುದ್ದಿಯ ಕಡೆಗೆ ವಾಲುತ್ತಿದ್ದಾರೆ ಎಂದಿದೆ ಬಾರ್ಕ್‌.

  ಮೋದಿ ಅವರ ಸ್ವದೇಶಿ ಕರೆಗೆ ದಾನಿಶ್ ಸೇಠ್ ವ್ಯಂಗ್ಯದ ವಿಡಿಯೋ

  English summary
  Ayodhya Bhoomi poojan event gets high viewership in TV. Independence day speech of Modi is also gets highest viewership.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X