For Quick Alerts
  ALLOW NOTIFICATIONS  
  For Daily Alerts

  ಗುಪ್ತಾಂಗ ತೋರಿಸಿದ್ರೆ ಅವಕಾಶ ನೀಡುತ್ತೇನೆ: ಚಿತ್ರರಂಗದ ಕೆಟ್ಟ ಅನುಭವ ಬಿಚ್ಚಿಟ್ಟ ನಟ ಆಯುಷ್ಮಾನ್

  |

  ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ಆಯುಷ್ಮಾನ್ ಖುರಾನ ಸಹ ಒಬ್ಬರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಯುಷ್ಮಾನ್ ಇತ್ತೀಚಿಗೆ 'ಶುಭ್ ಮಂಗಳ್ ಜ್ಯಾದಾ ಸಾವಧಾನ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ದೇಶ ಕಂಡ ಅದ್ಭುತ ನಟ Irrfan Khan ಇನ್ನಿಲ್ಲ

  ಪ್ರತಿಯೊಂದು ಸಿನಿಮಾಗಳಲ್ಲಿಯೂ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವ ಆಯುಷ್ಮಾನ್ ಸಿನಿ ಪ್ರಿಯರ ಮೋಸ್ಟ್ ಫೇವರಿಟ್ ನಟ ಆಗಿದ್ದಾರೆ. ಬದೈ ಹೋ, ಅಂಧಾಧುನ್, ಆರ್ಟಿಕಲ್ 15 ಇನ್ನೂ ಮುಂತಾದ ಅದ್ಭುತ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಆಯುಷ್ಮಾನ್ ಇತ್ತೀಚಿಗೆ ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಾರಂಭ ದಿನಗಳಲ್ಲಿ ಅನುಭವಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

  ಕಾಸ್ಟಿಂಗ್ ಕೌಚ್ ಸಮಸ್ಯೆ ನಟಿಮಣಿಯರು ಮಾತ್ರ ಎದುರಿಸುತ್ತಿಲ್ಲ. ಕಾಸ್ಟಿಂಗ್ ಕೌಚ್ ಸಮಸ್ಯೆ ಎದುರಿಸದ ಅನೇಕ ನಟರು ಚಿತ್ರರಂದಲ್ಲಿದ್ದಾರೆ. ಈಗಾಗಲೇ ಸಾಕಷ್ಟು ನಟರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಈಗ ನಟ ಆಯುಷ್ಮಾನ್ ಖುರಾನ ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ಎದುರಿಸುವ ಕಾಸ್ಟಿಂಗ್ ಕೌಚ್ ಸಮಸ್ಯೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.ಮುಂದೆ ಓದಿ..

  ಕಿರುತೆರೆ ಮೂಲಕ ವೃತ್ತಿ ಜೀವನ ಆರಂಭಿಸಿದ ನಟ ಆಯುಷ್ಮಾನ್

  ಕಿರುತೆರೆ ಮೂಲಕ ವೃತ್ತಿ ಜೀವನ ಆರಂಭಿಸಿದ ನಟ ಆಯುಷ್ಮಾನ್

  ಬಾಲಿವುಡ್ ನಲ್ಲಿ ಟಾಪ್ ನಟನಾಗಿ ಬೆಳೆದು ನಿಂತಿರುವ ಆಯುಷ್ಮಾನ್ ಮೊದಲು ಕಿರುತೆರೆ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದವರು. ಚಿಕ್ಕ ವಯಸ್ಸಿನಲ್ಲಿಯೆ MTV ರೋಡೀಸ್ ಕಾರ್ಯಕ್ರಮದ ವಿನ್ನರ್ ಆಗಿ ಹೊರ ಹೊಮ್ಮಿದ್ದ ಆಯುಷ್ಮಾನ್ ನಂತರ ಆರ್ ಜೆಯಾಗಿ, ಟಿವಿ ನಿರೂಪಕನಾಗಿ, ನಂತರ ಹೀರೋ ಆಗಿ ಖ್ಯಾತಿ ಗಳಿಸಿದ್ದಾರೆ.

  ವಿಕ್ಕಿ ಡೋನರ್ ಮೊದಲ ಸಿನಿಮಾ

  ವಿಕ್ಕಿ ಡೋನರ್ ಮೊದಲ ಸಿನಿಮಾ

  ಕಿರುತೆರೆಯಲ್ಲಿ ಖ್ಯಾತಿಗಳಿಸಿದ್ದ ನಟ ಆಯುಷ್ಮಾನ್ ಖುರಾನ ಮೊದಲಬಾರಿಗೆ ದೊಡ್ಡ ಪರದೆಮಲೆ ಕಾಣಿಸಿಕೊಂಡಿದ್ದು ವಿಕ್ಕಿ ಡೋನರ್ ಸಿನಿಮಾ ಮೂಲಕ. 2012ರಲ್ಲಿ ರಿಲೀಸ್ ಆದ ಚಿತ್ರಕ್ಕೆ ಸೂಜಿತ್ ಸರ್ಕಾರ್ ನಿರ್ದೇಶನವಿತ್ತು. ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ತಂದು ಕೊಟ್ಟಿತ್ತು. ಮೊದಲ ಸಿನಿಮಾವೇ ಆಯುಷ್ಮಾನ್ ಭವಿಷ್ಯ ಬದಲಾಯಿಸಿತ್ತು. ಆ ನಂತರ ಬಾಲಿವುಡ್ ನಲ್ಲಿ ದೊಡ್ಡ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.

  ಮೊದಲ ಆಡಿಷನ್ ಬಗ್ಗೆ ಮಾತನಾಡಿದ ಆಯುಷ್ಮಾನ್

  ಮೊದಲ ಆಡಿಷನ್ ಬಗ್ಗೆ ಮಾತನಾಡಿದ ಆಯುಷ್ಮಾನ್

  ಮೊದಲ ಬಾರಿಗೆ ಸಿನಿಮಾ ಆಡಿಷನ್ ಗೆ ಹೊದ ಅನುಭವನ್ನು ಹಂಚಿಕೊಂಡಿದ್ದಾರೆ. ''ಮೊದಲು ಆಡಿಷನ್ ಗೆ ಒಬ್ಬರನ್ನೇ ಬರುವಂತೆ ಹೇಳಿದ್ದರು. ಅಲ್ಲಿ ಹೋದ ನಂತರ ಇದ್ದಕ್ಕಿದ್ದಂತೆ ಸಂಖ್ಯೆ ಹೆಚ್ಚಾಯಿತು. 50ಕ್ಕೂ ಹೆಚ್ಚು ಜನ ಒಂದು ಕೋಣೆಯಲ್ಲಿ ಆಡಿಷನ್ ನೀಡಲು ಬಂದಿದ್ದರು. ಅಲ್ಲಿ ಗಲಾಟೆ ಮಾಡಿದೆ. ಹಾಗಾಗಿ ಆಡಿಷನ್ ನಿಂದ ಹೊರ ಕಳುಹಿಸಿದರು. ಸಾಕಷ್ಟು ಬಾರಿ ನಿರಾಕರಣೆಗೆ ಒಳಗಾಗಿದ್ದೀನಿ" ಎಂದು ಅಯುಷ್ಮಾನ ಹೇಳಿದ್ದಾರೆ.

  ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಹೇಳಿಕೆ

  ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಹೇಳಿಕೆ

  ಆರಂಭದ ದಿನಗಳಲ್ಲಿ ಅವಕಾಶಕ್ಕಾಗಿ ಸಾಕಷ್ಟು ಪರದಾಡಿದ್ದ ಆಯುಷ್ಮಾನ್ ಚಿತ್ರರಂಗದಲ್ಲಿ ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಆಡಿಷನ್ ಗೆ ತೆರಳಿದ್ದ ಆಯುಷ್ಮಾನ್ ಗೆ ನಿರ್ಮಾಪಕರೊಬ್ಬರು ''ನಿಮ್ಮ ಗುಪ್ತಾಂಗ ತೋರಿಸಿದರೆ ಸಿನಿಮಾದಲ್ಲಿ ಹೀರೋ ಮಾಡುವುದಾಗಿ ಭರವಸೆ ನೀಡಿದ್ರು" ಎನ್ನುವ ಸತ್ಯವನ್ನು ಬಂಹಿರಂಗ ಪಡಿಸಸಿದ್ದಾರೆ.

  ಆಯುಷ್ಮಾನ್ ಪ್ರತಿಕ್ರಿಯೆ ಹೀಗಿತ್ತು

  ಆಯುಷ್ಮಾನ್ ಪ್ರತಿಕ್ರಿಯೆ ಹೀಗಿತ್ತು

  ನಿರ್ಮಾಪಕರ ವರ್ತನೆಯಿಂದ ಶಾಕ್ ಆದ ಆಯುಷ್ಮಾನ್, ''ನಿರ್ಮಾಪಕರ ಬೇಡಿಕೆಯನ್ನು ತಿರಸ್ಕರಿಸಿ ಅಲ್ಲಿಂದ ಹೊರಟು ಹೋದೆ". ಎಂದು ಹೇಳಿದ್ದಾರೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಆಯುಷ್ಮಾನ್ ಅನುಭವಿಸಿದ ಕೆಟ್ಟ ಅನುಭವಗಳನ್ನು ಇತ್ತೀಚಿಗೆ ಬಹಿರಂಗಪಡಿಸಿದ್ದಾರೆ.

  ಸೋಲನ್ನು ನಿಭಾಯಿಸಲು ಕಲಿತ್ತಿದ್ದೀನಿ

  ಸೋಲನ್ನು ನಿಭಾಯಿಸಲು ಕಲಿತ್ತಿದ್ದೀನಿ

  "ತೀರ ಆರಂಭದ ದಿನಗಳಲ್ಲಿಯೆ ನಾನು ಸಾಕಷ್ಟು ಸೋಲು ಕಂಡಿದ್ದೀನಿ. ಹಾಗಾಗಿ ಈಗ ಸೋಲನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಕಲಿತಿದ್ದೀನಿ.

  ಪ್ರತಿಶುಕ್ರವಾರ ಎಲ್ಲವೂ ಬದಲಾಗುತ್ತೆ. ಕಳೆದ ಎರಡ್ಮೂರು ವರ್ಷಗಳಲ್ಲಿ ಕೆಲವು ಉತ್ತಮ ಶುಕ್ರವಾರಗಳನ್ನು ಹೊಂದಲು ನಾನು ಅದೃಷ್ಟಶಾಲಿಯಾಗಿದ್ದೇನೆ" ಎಂದು ಹೇಳಿದ್ದಾರೆ.

  'ಗುಲಾಬೋ ಸಿತಾಬೋ' ಸಿನಿಮಾದಲ್ಲಿ ಆಯುಷ್ಮಾನ್

  'ಗುಲಾಬೋ ಸಿತಾಬೋ' ಸಿನಿಮಾದಲ್ಲಿ ಆಯುಷ್ಮಾನ್

  ಗುಲಾಬೋ ಸಿತಾಬೋ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಯುಷ್ಮಾನ್, ಮುಂದಿನ ಚಿತ್ರಗಳ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.

  English summary
  Bollywood Actor Ayushmann Khurrana opens up about a casting couch experience from his erly days.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X