For Quick Alerts
  ALLOW NOTIFICATIONS  
  For Daily Alerts

  ಕಾಸ್ಟಿಂಗ್ ಕೌಚ್ ಬರೀ ನಟಿಯರಿಗೆ ಮಾತ್ರ ಅಲ್ಲ, ನಟರಿಗೂ ತಪ್ಪಿದ್ದಲ್ಲ.!

  |

  ''ಚಿತ್ರರಂಗದಲ್ಲಿ ನೆಲೆಯೂರಬೇಕು ಅಂದ್ರೆ, ನಿರ್ಮಾಪಕರು/ನಿರ್ದೇಶಕರ ಜೊತೆಗೆ 'ಅಡ್ಜಸ್ಟ್' ಮಾಡಿಕೊಳ್ಳಬೇಕು'' ಎಂಬ ಕೆಟ್ಟ ಸಂಪ್ರದಾಯ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿಯೂ ಇದೆ.

  ಕಾಸ್ಟಿಂಗ್ ಕೌಚ್ ಪದ್ಧತಿಗೆ ಬರೀ ನಟಿಯರು ಮಾತ್ರ ಬಲಿಯಾಗಿಲ್ಲ. ಸಲಿಂಗಿ ನಿರ್ದೇಶಕರ ಕೈಯಲ್ಲಿ ಸಿಲುಕಿ ನಟರೂ ಕೂಡ ಕಾಸ್ಟಿಂಗ್ ಕೌಚ್ ಎದುರಿಸಿದ್ದಾರೆ. ಅದಕ್ಕೆ ಸಾಕ್ಷಿ ಆಯುಷ್ಮಾನ್ ಖುರಾನಾ.

  'ಎಂಟಿವಿ ರೋಡೀಸ್-2' ರಿಯಾಲಿಟಿ ಶೋ ಗೆದ್ದ ಆಯುಷ್ಮಾನ್ ಖುರಾನಾ, 'ವಿಕ್ಕಿ ಡೋನರ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. 'ನೌಟಂಕಿ ಸಾಲಾ', 'ಬೇವಕೂಫಿಯಾನ್', 'ಮೇರಿ ಪ್ಯಾರಿ ಬಿಂದು' ಸೇರಿದಂತೆ ಹಲವು ಸಿನಿಮಾಗಳಲ್ಲಿ ಆಯುಷ್ಮಾನ್ ಖುರಾನಾ ಅಭಿನಯಿಸಿದ್ದಾರೆ.

  ಇಂತಿಪ್ಪ ಆಯುಷ್ಮಾನ್ ಖರಾನಾ ಜೊತೆಗೆ ಕಾಸ್ಟಿಂಗ್ ನಿರ್ದೇಶಕರೊಬ್ಬರು ಅಸಭ್ಯವಾಗಿ ವರ್ತಿಸಿದ್ದರಂತೆ. ಈ ಬಗ್ಗೆ ಆಯುಷ್ಮಾನ್ ಖರಾನಾ ಸಂದರ್ಶನವೊಂದರಲ್ಲಿ ಬಾಯಿಬಿಟ್ಟಿದ್ದಾರೆ. ಮುಂದೆ ಓದಿರಿ...

  ಸಲಿಂಗಿ ಕಾಸ್ಟಿಂಗ್ ಡೈರೆಕ್ಟರ್

  ಸಲಿಂಗಿ ಕಾಸ್ಟಿಂಗ್ ಡೈರೆಕ್ಟರ್

  ''ಚಿತ್ರವೊಂದರ ಆಡಿಷನ್ ಗೆ ಹೋಗಿದ್ದಾಗ, ಕಾಸ್ಟಿಂಗ್ ಡೈರೆಕ್ಟರ್ ಕೆಲವು ಸೀನ್ ಗಳನ್ನ ಅಭಿನಯಿಸುವಂತೆ ಹೇಳಿದರು. ಹಾಗೆ, ನಟಿಸುತ್ತಿರುವಾಗಲೇ ಪ್ಯಾಂಟ್ ಝಿಪ್ ತೆಗೆಯುವಂತೆ ತಾಕೀತು ಮಾಡಿದರು. ನನ್ನನ್ನ ಮುಟ್ಟಲು ಬಂದರು. ಸಾಲದಕ್ಕೆ ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು'' ಎಂದು ಸಂದರ್ಶನವೊಂದರಲ್ಲಿ ಆಯುಷ್ಮಾನ್ ಖುರಾನಾ ಹೇಳಿದ್ದಾರೆ.

  ಅಲ್ಲು ಅರ್ಜುನ್ ಅಣ್ಣನ 'ಸ್ವಿಮ್ಮಿಂಗ್ ಪೂಲ್' ರಹಸ್ಯ ಬಿಚ್ಚಿಟ್ಟ ಶ್ರೀರೆಡ್ಡಿಅಲ್ಲು ಅರ್ಜುನ್ ಅಣ್ಣನ 'ಸ್ವಿಮ್ಮಿಂಗ್ ಪೂಲ್' ರಹಸ್ಯ ಬಿಚ್ಚಿಟ್ಟ ಶ್ರೀರೆಡ್ಡಿ

  ಆಮೇಲೆ ಬೋಧನೆ

  ಆಮೇಲೆ ಬೋಧನೆ

  ಕಾಸ್ಟಿಂಗ್ ಡೈರೆಕ್ಟರ್ ಗೆ ಆಯುಷ್ಮಾನ್ ಖುರಾನಾ ಪ್ರತಿರೋಧ ವ್ಯಕ್ತಪಡಿಸಿದರು. ಇದರಿಂದ ಸಿಟ್ಟು ಮಾಡಿಕೊಂಡ ಆ ಕಾಸ್ಟಿಂಗ್ ಡೈರೆಕ್ಟರ್, ಬಾಲಿವುಡ್ ನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ಲೆಕ್ಚರ್ ಕೊಡಲು ಆರಂಭಿಸಿದರಂತೆ.

  'ಕಾಸ್ಟಿಂಗ್ ಕೌಚ್' ವಿವಾದದ ಬಗ್ಗೆ ಮನಬಿಚ್ಚಿ ಮಾತನಾಡಿದ ಸಮಂತಾ'ಕಾಸ್ಟಿಂಗ್ ಕೌಚ್' ವಿವಾದದ ಬಗ್ಗೆ ಮನಬಿಚ್ಚಿ ಮಾತನಾಡಿದ ಸಮಂತಾ

  ಮುಜುಗರಕ್ಕೀಡಾದ ಆಯುಷ್ಮಾನ್

  ಮುಜುಗರಕ್ಕೀಡಾದ ಆಯುಷ್ಮಾನ್

  'ವಿಕ್ಕಿ ಡೋನರ್' ಸಿನಿಮಾ ತೆರೆಕಂಡ ಬಳಿಕ, ಮಾಲ್ ಒಂದಕ್ಕೆ ಭೇಟಿ ನೀಡಿದ್ದಾಗ ಆಯುಷ್ಮಾನ್ ಗೆ ವಿಚಿತ್ರ ಘಟನೆ ಎದುರಾಯಿತಂತೆ. ಏಕಾಏಕಿ ಹುಡುಗಿಯೊಬ್ಬಳು ''ವಿಕ್ಕಿ, ನನಗೆ ನಿನ್ನ ವೀರ್ಯಾಣು ಬೇಕು'' ಎಂದು ಜೋರಾಗಿ ಕೇಳಿದ್ಳಂತೆ. ಇದರಿಂದ ಆಯುಷ್ಮಾನ್ ಮುಜುಗರಕ್ಕೀಡಾಗಬೇಕಾಯಿತು.

  'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

  ಪಕ್ಕದಲ್ಲಿ ತಾಯಿ

  ಪಕ್ಕದಲ್ಲಿ ತಾಯಿ

  ''ವಿಕ್ಕಿ, ನನಗೆ ನಿನ್ನ ವೀರ್ಯಾಣು ಬೇಕು'' ಎಂದು ಹುಡುಗಿಯೊಬ್ಬಳು ಮಾಲ್ ನಲ್ಲಿ ಕೇಳಿದಾಗ, ಆಯುಷ್ಮಾನ್ ಜೊತೆಗೆ ಅವರ ತಾಯಿ ಕೂಡ ಇದ್ದರು. ಇದರಿಂದ ಆಯುಷ್ಮಾನ್ ತಾಯಿಗೂ ಶಾಕ್ ಆಯ್ತಂತೆ.

  ಕಾಸ್ಟಿಂಗ್ ಕೌಚ್ ಗೆ ಕೊನೆ ಎಂದು.?

  ಕಾಸ್ಟಿಂಗ್ ಕೌಚ್ ಗೆ ಕೊನೆ ಎಂದು.?

  ಕಾಸ್ಟಿಂಗ್ ಕೌಚ್ ಎಂಬ ಭೂತದ ವಿರುದ್ಧ ನಟ-ನಟಿಯರು ಒಬ್ಬೊಬ್ಬರಾಗಿ ಬಾಯಿ ಬಿಡುತ್ತಿದ್ದಾರೆ. ಇನ್ನಾದರೂ, ಈ ಕಾಸ್ಟಿಂಗ್ ಕೌಚ್ ನಿಂತರೆ ಅರ್ಹ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಬಹುದು.

  English summary
  Bollywood Actor Ayushmann's shocking revelations on Casting Couch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X