»   » ಬದುಕಿನಲ್ಲಿ ಫೇಲ್ ಆದ 'ಬಿಎ ಪಾಸ್' ಚಿತ್ರನಟಿ!

ಬದುಕಿನಲ್ಲಿ ಫೇಲ್ ಆದ 'ಬಿಎ ಪಾಸ್' ಚಿತ್ರನಟಿ!

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಹಿಂದಿ ಚಿತ್ರರಂಗದಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪರದಾಡುತ್ತಿದ್ದ, ಸರಿಯಾಗಿ ಉದ್ಯೋಗವಿಲ್ಲದೆ ಕಂಗಾಲಾಗಿದ್ದ ಮಾಡೆಲ್ ಕಂ ನಟಿ ಶಿಖಾ ಜೋಶಿ ಅವರು ಕತ್ತು ಸೀಳಿಕೊಂಡು ಮುಂಬೈನ ಅಪಾರ್ಟ್ಮೆಂಟೊಂದರಲ್ಲಿ ಶನಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಆತ್ಮಹತ್ಯೆ ಅಂತ ಪ್ರಾಥಮಿಕವಾಗಿ ಕಂಡುಬಂದಿದ್ದರೂ ಕೊಲೆಯೂ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

  ಮುಂಬೈನ ಅಂಧೇರಿ ಪಶ್ಚಿಮದಲ್ಲಿ ಮಹದಾ ಕಾಲೋನಿಯಲ್ಲಿ ತನ್ನ ಸ್ನೇಹಿತೆ ಮಧು ಭಾರತಿಯೊಂದಿಗೆ 40 ವರ್ಷದ ಶಿಖಾ ಜೋಶಿ ವಾಸಿಸುತ್ತಿದ್ದರು. ಬಚ್ಚಲು ಮನೆಯಲ್ಲಿ ಶಿಖಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಕೂಡಲೆ ಕೋಕಿಲಾ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.

  ವರ್ಸೋವಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಅಂತ ಕಂಡುಬಂದಿದ್ದರೂ, ತನ್ನ ಕತ್ತನ್ನು ತಾನೇ ಕತ್ತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲದ್ದರಿಂದ ಕೊಲೆಯ ಪ್ರಮೇಯವನ್ನು ಪೊಲೀಸರು ತಳ್ಳಿಹಾಕುತ್ತಿಲ್ಲ. [ಶವವಾಗಿ ಮಲಗಿರುವ ಜಿಯಾ ಖಾನ್ ಚಿತ್ರಗಳು]

  BA Pass Shikha Joshi fails in life, commits suicide

  ಸ್ನೇಹಿತೆ ಭಾರತಿ ಹೇಳುವ ಪ್ರಕಾರ, ಶಿಖಾ ಸಂಜೆ 7 ಗಂಟೆಯ ಸುಮಾರಿಗೆ ಮದ್ಯ ಸೇವಿಸಿ ಬಚ್ಚಲುಮನೆಯೊಳಗೆ ಚಿಲುಕ ಹಾಕಿಕೊಂಡಿದ್ದಾರೆ. ಸುಮಾರು ಹೊತ್ತಾದರೂ ಬರದಿದ್ದರಿಂದ ಭಾರತಿ ಬಾಗಿಲು ಬಡಿದಿದ್ದಾರೆ. ಸ್ವಲ್ಪ ಸಮಯದ ನಂತರ ಬಾಗಿಲು ತೆರೆದಾಗ ಅವರ ಕತ್ತು ಸೀಳಿತ್ತು, ಮೈಯೆಲ್ಲ ರಕ್ತಸಿಕ್ತವಾಗಿತ್ತು ಮತ್ತು ಅಡುಗೆಮನೆಯಲ್ಲಿದ್ದ ಚಾಕು ಅಲ್ಲಿ ಬಿದ್ದಿತ್ತು.

  2012ರಲ್ಲಿ ಬಿಡುಗಡೆಯಾಗಿದ್ದ 'ಬಿಎ ಪಾಸ್' ಎಂಬ ಹಿಂದಿ ಚಿತ್ರದಲ್ಲಿ ಶಿಖಾ ಜೋಶಿ ಅವರು ನಟಿಸಿದ್ದರು. ಆದರೆ, ಪಾತ್ರಗಳು ಸಿಗದೆ ಖಿನ್ನರಾಗಿದ್ದರು. ಕತ್ತು ಕತ್ತರಿಸಿಕೊಂಡ ನಂತರವೂ, ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಶಿಖಾ ಮಾತನಾಡುತ್ತಿದ್ದರು, ಏಕೆ ಹೀಗೆ ಮಾಡಿಕೊಂಡಿ ಅಂತ ಕೇಳಿದಾಗ, ಪಾತ್ರಗಳು ಸಿಗದೆ ಆತಂಕಗೊಂಡಿದ್ದೆ ಎಂದು ಹೇಳಿದ್ದಾಗಿ ಭಾರತಿ ಪೊಲೀಸರಿಗೆ ತಿಳಿಸಿದ್ದಾರೆ.

  ಚಿತ್ರರಂಗದಲ್ಲಿ ಸಣ್ಣ ಪ್ರಮಾಣದ ಕಲಾವಿದರು ಎದುರಿಸುವ ಅತಂತ್ರತೆ, ಖಿನ್ನತೆಗೆ ಈ ಪ್ರಕರಣ ಕನ್ನಡಿ ಹಿಡಿದಿದೆ. ಗುಂಡಿಗೆ ಗಟ್ಟಿ ಇರುವವರು, ಪಾತ್ರಗಳಿಗಾಗಿ ಎಂಥದೇ ಕಾಂಪ್ರಮೈಸಿಗೂ ಸಿದ್ಧರಿರುವವರು ಹೇಗೋ ಬದುಕಿಕೊಳ್ಳುತ್ತಾರೆ, ದುರ್ಬಲರು ಇಂಥ ಕ್ರಮಕ್ಕೆ ಮುಂದಾಗುತ್ತಾರೆ. ಬಿಎ ಪಾಸ್ ನಟಿ ಶಿಖಾ ಜೋಶಿ ಬದುಕಿನಲ್ಲಿ ಫೇಲಾಗಿದ್ದು ನಿಜಕ್ಕೂ ದುರಂತ. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

  English summary
  Shikha Joshi (40), a small time actress cum model who had acted in BA Pass hindi movie failed in life and committed suicide by cutting her throat in Mumbai. But, police are not ruling out murder angle also. A case has been register in Versova police station. Her friend said that Shikha was depressed as she did not get any work in Bollywood.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more