»   » ಕರಣ್ ಜೋಹರ್ ಗೆ 'ಬಾಹುಬಲಿ 2' ಹಿಂದಿ ಡಬ್ಬಿಂಗ್ ರೈಟ್ಸ್: ರಿಲೀಸ್ ಯಾವಾಗ?

ಕರಣ್ ಜೋಹರ್ ಗೆ 'ಬಾಹುಬಲಿ 2' ಹಿಂದಿ ಡಬ್ಬಿಂಗ್ ರೈಟ್ಸ್: ರಿಲೀಸ್ ಯಾವಾಗ?

Posted By:
Subscribe to Filmibeat Kannada

ಎಸ್‌.ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' ಚಿತ್ರ ಬಿಡುಗಡೆಗೂ ಮುನ್ನ ಹೊಸ ದಾಖಲೆ ಮಾಡಿದೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರು 'ಬಾಹುಬಲಿ 2' ಚಿತ್ರದ ಹಿಂದಿ ಅವತರಣಿಕೆಯನ್ನು ಈ ಬಾರಿಯೂ ಬಿಡುಗಡೆ ಮಾಡುತ್ತಿದ್ದು, ಬಿಗ್ ಬಜೆಟ್ ಗೆ ಡಬ್ಬಿಂಗ್ ರೈಟ್ಸ್ ಖರೀದಿಸಿದ್ದಾರೆ.['ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!]

'ಬಾಹುಬಲಿ- ದಿ ಕನ್ ಕ್ಲೂಸನ್' ಸಿನಿಮಾ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಅನ್ನು ಕರಣ್ ಜೋಹರ್ 120 ಕೋಟಿಗೆ ಖರೀದಿಸಿದ್ದು, ಧರ್ಮಾ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರದ ಹಿಂದಿ ಡಬ್ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ಮಾಹಿತಿಯನ್ನು ಸಿನಿಮಾ ಟ್ರೇಡ್ ಅನಾಲಿಸ್ಟ್ ರಮೇಶ್ ಬಾಲ ಅವರು ಬಹಿರಂಗಪಡಿಸಿದ್ದಾರೆ.

ಧರ್ಮಾ ಪ್ರೊಡಕ್ಷನ್ ಅಡಿಯಲ್ಲಿ 'ಬಾಹುಬಲಿ 2' ರಿಲೀಸ್

ಕರಣ್ ಜೋಹರ್ ಅವರು 'ಬಾಹುಬಲಿ ದಿ ಬಿಗಿನಿಂಗ್' ಅನ್ನು AA Films ನೊಂದಿಗೆ ಬಿಡುಗಡೆ ಮಾಡಿದ್ದರು. ಈ ಬಾರಿಯು ಬಾಹುಬಲಿ ಚಿತ್ರದ ಮುಂದುವರೆದ ಭಾಗ 'ಬಾಹುಬಲಿ- ದಿ ಕನ್ ಕ್ಲೂಸನ್' ಅನ್ನು ಧರ್ಮಾ ಪ್ರೊಡಕ್ಷನ್ ಅಡಿಯಲ್ಲಿ ಬಿಡುಗಡೆ ಮಾಡುತ್ತಿದ್ದು, 120 ಕೋಟಿಗೆ ಡಬ್ಬಿಂಗ್ ರೈಟ್ಸ್ ಅನ್ನು ಖರೀದಿಸಿದ್ದಾರೆ.['ಬಾಹುಬಲಿ 2': ಬಿಡುಗಡೆಗೆ ಮುನ್ನ 500 ಕೋಟಿ ಗಳಿಕೆ]

ಬಿಡುಗಡೆ ಮುನ್ನ 500 ಕೋಟಿ ಗಳಿಕೆ

'ಬಾಹುಬಲಿ 2' ಚಿತ್ರ ಬಿಡುಗಡೆಗೆ ಮುನ್ನ 500 ಕೋಟಿ ಗಳಿಸಿದ್ದು, ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ಬಿಗ್ ಬಜೆಟ್‌ ಗೆ ಥಿಯೇಟರ್ ರೈಟ್ಸ್ ಮಾರಾಟ

'ಬಾಹುಬಲಿ 2' ಚಿತ್ರದ ಥಿಯೇಟರ್ ರೈಟ್ಸ್ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 130 ಕೋಟಿ ಬಿಡ್ ಆಗಿದೆ. ಅಲ್ಲದೇ ತಮಿಳಿನಲ್ಲಿ 47 ಕೋಟಿಗೆ, ಕೇರಳದಲ್ಲಿ 10 ಕೋಟಿಗೆ, ಕರ್ನಾಟಕದಲ್ಲಿ 45 ಕೋಟಿಗೆ ಮಾರಾಟವಾಗಿದೆ. ಉತ್ತರ ಅಮೆರಿಕ ಸಹ 45 ಕೋಟಿಗೆ ಥಿಯೇಟರ್ ರೈಟ್ಸ್ ಖರೀದಿಸಿದೆ.

'ಬಾಹುಬಲಿ 2' ಚಿತ್ರದ ಸ್ಯಾಟಲೈಟ್ ರೈಟ್ಸ್

'ಬಾಹುಬಲಿ 2' ಚಿತ್ರದ ಸ್ಯಾಟಲೈಟ್ ರೈಟ್ಸ್ ಹಿಂದಿ ಗೆ 51 ಕೋಟಿಗೆ ಮತ್ತು ತೆಲುಗಿಗೆ 26 ಕೋಟಿಗೆ ಮಾರಾಟವಾಗಿದೆ.

'ಬಾಹುಬಲಿ 2' ಚಿತ್ರದ ಪೋಸ್ಟರ್

'ಬಾಹುಬಲಿ 2' ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದ, ದೇವಸೇನಾ ಜೊತೆಗೆ ಅಮರೇಂದ್ರ ಬಾಹುಬಲಿ ಇರುವ ತೆಲುಗಿನ ಹೊಸ ಪೋಸ್ಟರ್ ಇದು.

ಚಿತ್ರ ರಿಲೀಸ್ ಯಾವಾಗ

ಏಪ್ರಿಲ್ 28 ರಂದು 'ಬಾಹುಬಲಿ-2' ಚಿತ್ರ ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

English summary
The film 'Baahubali 2' will be released in four languages Telugu, Tamil, Hindi and Malayalam. The Hindi theatrical rights have been sold to filmmaker Karan Johar's Dharma Productions for a whopping Rs 120 crore, as disclosed by a tweet from trade analyst Ramesh Bala.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada