»   »  'ಬಾಹುಬಲಿ 2': ಬಿಡುಗಡೆಗೆ ಮುನ್ನ 500 ಕೋಟಿ ಗಳಿಕೆ

'ಬಾಹುಬಲಿ 2': ಬಿಡುಗಡೆಗೆ ಮುನ್ನ 500 ಕೋಟಿ ಗಳಿಕೆ

Written By:
Subscribe to Filmibeat Kannada

2015 ರ ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿ ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ ಅದೇ ಚಿತ್ರದ ಮುಂದುವರಿದ ಭಾಗ ಬಿಡುಗಡೆಗೂ ಮುನ್ನ ಹೊಸ ದಾಖಲೆ ಮಾಡಿದೆ.['ಬಾಹುಬಲಿ-2' ಚಿತ್ರೀಕರಣದಿಂದ ಪ್ರಭಾಸ್ ಔಟ್!]

baahubali 2

ಬಾಹುಬಲಿ-2 ಚಿತ್ರ ಏಪ್ರಿಲ್ 28 ರಂದು ತೆರೆ ಮೇಲೆ ಬರಲು ಸಿದ್ದವಾಗಿದೆ. ಆದರೆ ಈ ಚಿತ್ರ ಬಿಡುಗಡೆಗೂ ಮುನ್ನ 500 ಕೋಟಿ ಗಳಿಸಿ, ಬಾಹುಬಲಿ ಚಿತ್ರದ ದಾಖಲೆ ಮುರಿದಿದೆ. ಅಲ್ಲದೇ ರಿಲೀಸ್ ಗೂ ಮುನ್ನ ಅತಿ ಹೆಚ್ಚು ಗಳಿಸಿದ ಮೊದಲ ಸಿನಿಮಾ ಎಂಬ ದಾಖಲೆ ಸೃಷ್ಟಿಸಿದೆ.[ಅಮರೇಂದ್ರ 'ಬಾಹುಬಲಿ' ಪ್ರಭಾಸ್ ಗೆ ಮದ್ವೆ ಅಂತೆ..!]

'ಬಾಹುಬಲಿ- ದಿ ಕನ್ ಕ್ಲೂಸನ್' ಏಕಕಾಲದಲ್ಲಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಧರ್ಮಾ ಪ್ರೊಡಕ್ಷನ್ ಅಡಿಯಲ್ಲಿ 'ಬಾಹುಬಲಿ- ದಿ ಕನ್ ಕ್ಲೂಸನ್' ಹಿಂದಿ ಡಬ್ ಅವತರಣಿಕೆಯನ್ನು ಬಿಡುಗಡೆ ಮಾಡುತ್ತಿದ್ದಾರೆ.

English summary
Going by reports, filmmaker SS Rajamouli's upcoming epic saga Baahubali: The Conclusion has made a business of Rs 500 crore worldwide even before the film's release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada