»   » 'ಪದ್ಮಾವತಿ' ಟ್ರೈಲರ್ ನೋಡಿ ರಾಜಮೌಳಿ ಕಾಮೆಂಟ್ ಮಾಡಿದ್ದು ಯಾರಿಗೆ?

'ಪದ್ಮಾವತಿ' ಟ್ರೈಲರ್ ನೋಡಿ ರಾಜಮೌಳಿ ಕಾಮೆಂಟ್ ಮಾಡಿದ್ದು ಯಾರಿಗೆ?

Posted By:
Subscribe to Filmibeat Kannada

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಪದ್ಮಾವತಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಎಲ್ಲೆಡೆ ಸುದ್ದಿ ಮಾಡುತ್ತಿದೆ. ಬಾಲಿವುಡ್ ನಟ, ನಟಿಯರು ಈ ಚಿತ್ರಕ್ಕಾಗಿ ಕಾಯುತ್ತಿದ್ದೇವೆ ಎಂದು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ 'ಬಾಹುಬಲಿ' ಚಿತ್ರದ ಮೂಲಕ ವಿಶ್ವ ಖ್ಯಾತಿಗಳಿಸಿಕೊಂಡ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಕೂಡ 'ಪದ್ಮಾವತಿ' ಟ್ರೈಲರ್ ನೋಡಿದ್ದಾ ಖುಷ್ ಆಗಿದ್ದಾರೆ.

ಈ ಟ್ರೈಲರ್ ನೋಡಿ ಚಿತ್ರದ ಬಗ್ಗೆ ಮೆಚ್ಚುಗೆ ತಿಳಿಸಿರುವ ರಾಜಮೌಳಿ, ನಟನೊಬ್ಬನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಹಾಗಿದ್ರೆ, 'ಪದ್ಮಾವತಿ' ಟ್ರೈಲರ್ ನೋಡಿ ರಾಜಮೌಳಿ ಏನಂದ್ರು? ನಟನ ಬಗ್ಗೆ ಏನೆಂದು ಕಾಮೆಂಟ್ ಮಾಡಿದ್ರು? ಮುಂದೆ ಓದಿ......

'ಪದ್ಮಾವತಿ' ಟ್ರೈಲರ್ ಗೆ ಫುಲ್ ಮಾರ್ಕ್ಸ್

''ಪದ್ಮಾವತಿ ಟ್ರೈಲರ್ ಸುಂದರವಾಗಿದೆ. ಚಿತ್ರದ ಪ್ರತಿಯೊಂದು ದೃಶ್ಯವೂ ಅತ್ಯದ್ಭುತವಾಗಿದೆ ಎಂದು'' ಬಾಹುಬಲಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಬಣ್ಣಿಸಿದ್ದಾರೆ

ವಿಡಿಯೋ: ದೃಶ್ಯ ವೈಭವ ಸೃಷ್ಟಿಸಿದ 'ಪದ್ಮಾವತಿ' ಟ್ರೇಲರ್ ಮಿಸ್ ಮಾಡದೇ ನೋಡಿ

ರಣ್ವೀರ್ ಸಿಂಗ್ ಭಯಾನಕ

ಚಿತ್ರದಲ್ಲಿ ಅಭಿನಯಿಸಿರುವ ನಟ ರಣ್ವೀರ್ ಸಿಂಗ್ ಪಾತ್ರಕ್ಕೆ ರಾಜಮೌಳಿ ಬೋಲ್ಡ್ ಆಗಿದ್ದಾರೆ. ''ರಣ್ವೀರ್ ಸಿಂಗ್ ಅವರ ಲುಕ್ ಭಯಗೊಳಿಸುವಂತಿದೆ, ಆದ್ರೂ, ನನ್ನ ಕಣ್ಣು ಅವರಿಂದ ಬೇರೆ ಕಡೆ ಹೋಗುತ್ತಿಲ್ಲ'' ಎಂದು ಪ್ರಶಂಸಿದ್ದಾರೆ.

ಫೋಟೋ ನೋಡಿ: ಅಲಾವುದ್ದೀನ್ ಖಿಲ್ಜಿ ಆದ ರಣ್ವೀರ್ ಸಿಂಗ್

ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್

'ಪದ್ಮಾವತಿ' ಚಿತ್ರದಲ್ಲಿ ನಟ ರಣ್ವೀರ್ ಸಿಂಗ್ ನೆಗಿಟೀವ್ ಪಾತ್ರವನ್ನ ನಿರ್ವಹಿಸಿದ್ದು, ಅಲ್ಲಾವುದ್ದೀನ್ ಖಿಲ್ಜಿ ಆಗಿ ಮಿಂಚುತ್ತಿದ್ದಾರೆ. ಹೀಗಾಗಿ, ರಣ್ವೀರ್ ಲುಕ್ ಭಯಾನಕ ಮತ್ತು ಭೀತಿಗೊಳಿಸುವಂತಿದೆ.

ಬನ್ಸಾಲಿಯ ಮತ್ತೊಂದು ಐತಿಹಾಸಿಕ ಸಿನಿಮಾ

'ರಾಮ್ ಲೀಲಾ', 'ಬಾಜಿರಾವ್ ಮಸ್ತಾನಿ' ಚಿತ್ರಗಳ ನಂತರ ಸಂಜಯ್ ಬನ್ಸಾಲಿ ನಿರ್ದೇಶನದ ಮತ್ತೊಂದು ಐತಿಹಾಸಿಕ ಚಿತ್ರ ಪದ್ಮಾವತಿ. ದೀಪಿಕಾ ಪಡುಕೋಣೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶಾಹೀದ್ ಕಪೂರ್ 'ಪದ್ಮಾವತಿ' ಗಂಡ ಮಹಾರಾವಲ್ ರತನ್ ಸಿಂಗ್ ಆಗಿ ಬಣ್ಣ ಹಚ್ಚಿದ್ದಾರೆ. ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಅಭಿನಯಿಸಿದ್ದಾರೆ.

ದೀಪಿಕಾ ಪಡುಕೋಣೆ 'ಪದ್ಮಾವತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

English summary
Baahubali Director SS Rajamouli's Reaction on Padmavati Trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada