ದಾಖಲೆಗಳನ್ನು ಧೂಳಿಪಟ ಮಾಡಿದ ದಬಾಂಗ್2

ಶುಕ್ರವಾರ ದಬಾಂಗ್2 ಚಿತ್ರ 20ರಿಂದ 21 ಕೋಟಿ ರು. ಬಾಚಿಕೊಂಡಿದೆ ಎಂಬ ಪ್ರಥಮ ಮಾಹಿತಿಗಳು ಹೊರಬಿದ್ದಿವೆ. ರಜಾದಿನಗಳು ಇಲ್ಲದಿರುವಾಗ ಬಿಡುಗಡೆಯಾದ ಚಿತ್ರ ಮೊದಲ ದಿನವೇ ಮಾಡಿದ ಅತಿ ಹೆಚ್ಚು ಗಳಿಕೆ ಇದಾಗಿದೆ. ನಾಡಿನಾದ್ಯಂತ ಮೂರುವರೆ ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ದಬಾಂಗ್2 ಜನರನ್ನು ಭಾರೀ ಪ್ರಮಾಣದಲ್ಲಿ ಸೆಳೆಯುತ್ತಿದೆ.
ಆಗಸ್ಟ್ 15ರಂದು ಬಿಡುಗಡೆಯಾಗಿದ್ದ ಏಕ್ ಥಾ ಟೈಗರ್ ಮೊದಲ ದಿನವೇ 32.92 ಕೋಟಿ ರು. ಗಳಿಸಿತ್ತು. ರೌಡಿ ರಾಥೋಡ್ ಚಿತ್ರ ಬಿಡುಗಡೆಯಾದ ಶುಕ್ರವಾರದಂದು 15.1 ಕೋಟಿ ರು. ಜೇಬಿಗಿಳಿಸಿತ್ತು. ಈಗ ದಬಾಂಗ್2 ಮೊದಲ ದಿನ 20ರಿಂದ 21 ಕೋಟಿ ರು. ಗಳಿಸಿ, ರೌಡಿ ರಾಥೋಡ್ ದಾಖಲೆಯನ್ನು ಅಳಿಸಿಹಾಕಿದೆ ಎಂದು ಚಿತ್ರ ವಿಶ್ಲೇಷಕ ತರಣ್ ಆದರ್ಶ್ ಅವರು ವಿಶ್ಲೇಷಿಸಿದ್ದಾರೆ.
ದಬಾಂಗ್ ಚಿತ್ರದ ಮುಂದಿನ ಅವತರಣಿಕೆಯಾಗಿರುವ ದಬಾಂಗ್2 ಚಿತ್ರದ ಮುಖಾಂತರ ಸಲ್ಮಾನ್ ಖಾನ್ ಅವರು ತಾವು ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಎರಡನೇ ದಿನದ ಗಳಿಕೆ ತುಸು ಕುಸಿದಿದ್ದು, 18 ಕೋಟಿ ರು. ಗಳಿಸಿದೆ. ಇದು ಏಕ್ ಥಾ ಟೈಗರ್ ಚಿತ್ರದ ಎರಡನೇ ದಿನದ ಗಳಿಕೆಗಿಂತ ಹೆಚ್ಚು. ಏಕ್ ಥಾ ಟೈಗರ್ ಎರಡನೇ ದಿನ 14 ಕೋಟಿ ರು. ಜೇಬಿಗಿಳಿಸಿತ್ತು.


Click it and Unblock the Notifications











