»   » ನಟ ವಿವೇಕ್ ಪತ್ನಿ ಪ್ರಿಯಾಂಕಾ ಆಳ್ವಗೆ ಗಂಡು ಮಗು

ನಟ ವಿವೇಕ್ ಪತ್ನಿ ಪ್ರಿಯಾಂಕಾ ಆಳ್ವಗೆ ಗಂಡು ಮಗು

Posted By:
Subscribe to Filmibeat Kannada
Priyanka gives birth to a baby boy! Read more at: https://www.filmibeat.com/bollywood/news/2013/vivek-oberoi-wife-priyanka-birth-baby-boy-son-103253.html
ಬಾಲಿವುಡ್ ನಟ ವಿವೇಕ್ ಒಬೆರಾಯ್ ಈಗ ತಂದೆಯಾಗಿ ಬಡ್ತಿ ಪಡೆದಿದ್ದಾರೆ. ಅವರ ಪತ್ನಿ ಪ್ರಿಯಾಂಕಾ ಆಳ್ವ ಅವರು ಮಂಗಳವಾರ (ಫೆ.5)ಗಂಡುಮಗುವಿಗೆ ಜನ್ಮ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಸುದ್ದಿಯನ್ನು ಸ್ವತಃ ವಿವೇಕ್ ತಮ್ಮ ಟ್ವೀಟ್ ಮಾಡಿದ್ದು ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ದಿನ ನನ್ನ ಜೀವನದಲ್ಲಿ ಬಹು ಮಹತ್ವದ ದಿನ. ಪ್ರಿಯಾಂಕಾ ಹಾಗೂ ನಾನು ಹೊಸ ಲಿಟ್ಲ್ ಸ್ಟಾರ್ ರನ್ನು ಬರಮಾಡಿಕೊಂಡಿದ್ದೇವೆ. ಮಗು ತುಂಬಾ ಆರೋಗ್ಯವಾಗಿ, ಸುಂದರವಾಗಿ ಹಾಗೂ ದಿವ್ಯ ತೇಜಸ್ಸಿನಿಂದ ಕೂಡಿದೆ ಎಂದಿದ್ದಾರೆ ವಿವೇಕ್.

ತಮ್ಮ ಅಭಿಮಾನಿಗಳ ಶುಭ ಹಾರೈಕೆಗೆ ವಿವೇಕ್ ಪ್ರತಿಕ್ರಿಯಿಸಿದ್ದು, ನಿಮ್ಮೆಲ್ಲ ಆಶೀರ್ವಾದ, ಪ್ರಾರ್ಥನೆಗೆ ನಾನು ಚಿರಋಣಿ ಎಂದಿದ್ದಾರೆ. ಇಸವಿ 2010ರ ಅಕ್ಟೋಬರ್ 29ರಂದು ಪ್ರಿಯಾಂಕಾ ಆಳ್ವ ಅವರನ್ನು ವರಿಸಿದರು ವಿವೇಕ್.

ಜೆಡಿ(ಯು) ಮುಖಂಡ ದಿವಂಗತ ಜೀವರಾಜ್ ಆಳ್ವ ಅವರ ಮಗಳ ಕೈಹಿಡಿದ ಬಳಿಕ ವಿವೇಕ್ ಕರ್ನಾಟಕದ ಅಳಿಯನಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ಬಳಿಕ ವಿವೇಕ್ ದಂಪತಿಗೆ ಮಗುವಾಗುತ್ತಿದೆ. ಇದು ಸಹಜ ಹೆರಿಗೆಯೋ ಅಥವಾ ಸಿಸೇರಿಯನ್ ಹೆರಿಗೆಯೋ ಎಂಬುದನ್ನು ವಿವೇಕ್ ತಿಳಿಸಿಲ್ಲ. (ಏಜೆನ್ಸೀಸ್)

English summary
Actor Vivek Oberoi's wife Priyanka Alva has given birth to a baby boy yesterday afternoon. Vivek, who is on cloud nine currently, revealed this good news on Twitter.
Please Wait while comments are loading...