»   » ಐಶ್ವರ್ಯ ಮೇಲೆ ಬಚ್ಚನ್ ಫ್ಯಾಮಿಲಿಗ್ಯಾಕೆ ಅಷ್ಟೊಂದು ಕೋಪ

ಐಶ್ವರ್ಯ ಮೇಲೆ ಬಚ್ಚನ್ ಫ್ಯಾಮಿಲಿಗ್ಯಾಕೆ ಅಷ್ಟೊಂದು ಕೋಪ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಆದರ್ಶ ದಂಪತಿಗಳಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ನಡುವೆ ಏನೋ ಸರಿ ಇಲ್ವಂತೆ, ಹಾಗೆ-ಹೀಗೆ ಅಂತ ಮೊನ್ನೆ-ಮೊನ್ನೆ ಬಾಲಿವುಡ್ ಅಂಗಳದಲ್ಲಿ ಗುಸು-ಗುಸು ಕೂಡ ಶುರುವಾಗಿತ್ತು.

ಇದೀಗ ಅದಕ್ಕೆ ತಕ್ಕಂತೆ ಮತ್ತೊಂದು ಸುದ್ದಿ ಬಂದಿದೆ. ಬಚ್ಚನ್ ಕುಟುಂಬದ ಸೊಸೆ ನಟಿ ಐಶ್ವರ್ಯ ರೈ ಅವರ ಮೇಲೆ ಬಿಗ್ ಬಿ ಫ್ಯಾಮಿಲಿಯವರಿಗೆ ಒಂಥರಾ ಅಸಮಾಧಾನ ಇದೆ ಅನ್ನೋ ಗುಮಾನಿ ಬಿಟೌನ್ ನಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ.[ವಿಸ್ಮಯ: ಐಶ್ ಗೆ ಅಭಿ ಮೇಲೆ ಯಾವತ್ತೂ ಕ್ರಷ್ ಆಗಿಲ್ವಂತೆ.!]

Bachchan Household Angry With Aishwarya Rai’s Intimate Scene In ADHM

ಮದುವೆ-ಮಗು ಅಂತಾದ ಮೇಲೆ ಐಶ್ವರ್ಯ ರೈ ಅವರು 'ಜಸ್ಬಾ' ಸಿನಿಮಾ ಮಾಡಿದರು. ತದನಂತರ ಒಪ್ಪಿಕೊಂಡಿದ್ದು, ರಣಬೀರ್ ಕಪೂರ್ ಅವರ ಜೊತೆ 'ಏ ದಿಲ್ ಹೈ ಮುಷ್ಕಿಲ್'.

ಈ ಚಿತ್ರಕ್ಕೆ ನಿರ್ದೇಶಕ ಕರಣ್ ಜೋಹರ್ ಅವರು ಆಕ್ಷನ್-ಕಟ್ ಹೇಳಿದ್ದು, ನಟಿ ಅನುಷ್ಕಾ ಶರ್ಮಾ ಅವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.[ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್]

Bachchan Household Angry With Aishwarya Rai’s Intimate Scene In ADHM

ಅಂದಹಾಗೆ ಐಶ್ ಅವರ ಹೊಸ ಸಿನಿಮಾಗೂ ಇವರಿಬ್ಬರ ಸಂಸಾರದಲ್ಲಿ ಅಪಸ್ವರ ಏಳೋದಕ್ಕೂ ಒಂದು ಕಾರಣ ಇದೆ. 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಐಶ್ ಅವರು ನಟಿಸುತ್ತಿದ್ದು, ಈ ಚಿತ್ರದಲ್ಲಿ ಕೊಂಚ ಹಸಿ-ಬಿಸಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಬಿಗ್ ಫ್ಯಾಮಿಲಿಯ ಕಣ್ಣು ಕೆಂಪಾಗಿಸಿದೆ.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]

Bachchan Household Angry With Aishwarya Rai’s Intimate Scene In ADHM

ಈ ಚಿತ್ರದಲ್ಲಿ ಐಶ್ವರ್ಯ ಮತ್ತು ರಣಬೀರ್ ಕಪೂರ್ ಅವರ ನಡುವೆ ಲಿಪ್ ಲಾಕ್ ದೃಶ್ಯವನ್ನು ಕರಣ್ ಜೋಹರ್ ಕ್ರಿಯೇಟ್ ಮಾಡಿದ್ದರು. ಆದರೆ ಅದಕ್ಕೆ ಐಶ್ ಒಪ್ಪದ ಕಾರಣ, ರೋಮ್ಯಾಂಟಿಕ್ ಆಗಿ ಚಾಕಲೇಟು ತಿನ್ನುವ ದೃಶ್ಯವನ್ನು ಸೇರಿಸಿದ್ದರು. ಇದೀಗ ಆ ದೃಶ್ಯ ಕೂಡ ಐಶ್ ಫ್ಯಾಮಿಲಿಗೆ ಹಿಡಿಸಲಿಲ್ಲವಂತೆ.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]

Bachchan Household Angry With Aishwarya Rai’s Intimate Scene In ADHM

ಯಾಕೋ ಆ ದೃಶ್ಯ ಕೂಡ ಸರಿ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಕರಣ್ ಜೋಹರ್ ಅವರ ಬಳಿ ಆ ದೃಶ್ಯಕ್ಕೆ ಕತ್ತರಿ ಹಾಕುವಂತೆ ಬಚ್ಚನ್ ಫ್ಯಾಮಿಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಮೊದಲು ಒಪ್ಪದ ಕರಣ್ ನಂತರ ಬಿಗ್ ಬಿ ಅಮಿತಾಭ್ ಅವರ ಮಾತಿನ ಮೇರೆಗೆ ಆ ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ.

English summary
The Bachchan household is not happy with Aishwarya Rai doing an intimate scene with Ranbir Kapoor in the movie 'Ae Dil Hai Mushkil', and has asked film-maker Karan Johar to remove the scene before the film releases.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada