For Quick Alerts
  ALLOW NOTIFICATIONS  
  For Daily Alerts

  'ಪಠಾಣ್' ವಿವಾದ: ಚಿತ್ರಮಂದಿರದ ಮೇಲೆ ಭಜರಂಗದಳ ದಾಳಿ

  |

  ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ವಿವಾದದ ಬೆನ್ನಲ್ಲೆ ಭಜರಂಗದಳ ಕಾರ್ಯಕರ್ತರು ಚಿತ್ರಮಂದಿರವೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ.

  ಗುಜರಾತ್‌ನ ಅಹ್ಮದಾಬಾದ್‌ನ ಮಾಲ್‌ ಒಂದರಲ್ಲಿ ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾದ ಪೋಸ್ಟರ್‌ ಹಾಕಲಾಗಿತ್ತು. ಇದನ್ನು ಖಂಡಿಸಿ ಮಾಲ್‌ಗೆ ನುಗ್ಗಿದ ಭಜರಂಗದಳ ಕಾರ್ಯಕರ್ತರು ಪೋಸ್ಟರ್ ಅನ್ನು ಕಿತ್ತೊಗೆದು ಶಾರುಖ್ ಖಾನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, 'ಪಠಾಣ್' ಸಿನಿಮಾ ಪ್ರದರ್ಶಿಸದಂತೆ ಬೆದರಿಕೆ ಸಹ ಹಾಕಿದ್ದಾರೆ.

  'ಪಠಾಣ್' ಸಿನಿಮಾದ ಪೋಸ್ಟರ್‌ ಅನ್ನು ಹರಿದು ಕಾಲುಗಳಲ್ಲಿ ತುಳಿದಿದ್ದಾರೆ. ಒಂದೊಮ್ಮೆ ಸಿನಿಮಾ ಬಿಡುಗಡೆ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಘೋರವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೇಸರಿ ಶಾಲು ಹೊದ್ದ ಯುವಕರು 'ಜೈ ಶ್ರೀರಾಮ್' ಘೋಷಣೆ ಕೂಗುತ್ತಾ ಕ್ಯಾಮೆರಾ ಮುಂದೆ 'ಪಠಾಣ್' ಪೋಸ್ಟರ್‌ ಅನ್ನು ಒದೆಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಹಿಂದು ರಾಷ್ಟ್ರೀಯ ಸಂಘವು ಜನವರಿ 04 ರಂದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ 'ಪಠಾಣ್' ಸಿನಿಮಾದ ವಿರುದ್ಧ ಪ್ರತಿಭಟನೆ ಸಹ ನಡೆದಿದೆ. ಯಾವುದೇ ಚಿತ್ರಮಂದಿರಗಳು ಈ ಸಿನಿಮಾವನ್ನು ಪ್ರದರ್ಶಿಸಿದಲ್ಲಿ ಚಿತ್ರಮಂದಿರಗಳ ಮೇಳೆ ದಾಳಿ ಮಾಡಲಾಗುವುದು ಎಂದು ಹಿಂದುಪರ ಸಂಘಟನೆಗಳ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.

  'ಪಠಾಣ್' ಸಿನಿಮಾದ ಹಾಡೊಂದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದಾರೆಂಬುದು ವಿವಾದಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಹಲವು ಕಡೆ ಹಿಂದುಪರ ಸಂಘಟನೆಗಳು ಶಾರುಖ್ ಖಾನ್ ವಿರುದ್ಧ ಪ್ರತಿಭಟನೆ ನಡೆಸಿವೆ.

  'ಪಠಾಣ್' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸಿನಿಮಾದಲ್ಲಿ ಜಾನ್ ಅಬ್ರಹಾಂ ಸಹ ಇದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಯಶ್‌ ರಾಜ್ ಫಿಲಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

  English summary
  Bajarangadal members in Ahmedabad Vandalized theater. Tear Shah Rukh Khan's Pathaan movie poster.
  Thursday, January 5, 2023, 9:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X