For Quick Alerts
  ALLOW NOTIFICATIONS  
  For Daily Alerts

  ಠಾಕ್ರೆ ಅಂತಿಮ ಯಾತ್ರೆಗೆ ಕಿಂಗ್ ಖಾನ್ ಗೈರು

  By Mahesh
  |

  ಸಾವಿನ ಮನೆಗೆ ಹೋಗಲು ದ್ವೇಷ ಅಡ್ಡಿ ಬರುವುದಿಲ್ಲ ಎಂಬ ಮಾತಿದೆ. ಆದರೆ, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಅವರು ಬಾಳಾ ಠಾಕ್ರೆ ಅವರ ಮೇಲಿನ ಸಿಟ್ಟನ್ನು ಮುಂದುವರೆಸಿದಂತೆ ತೋರುತ್ತಿದೆ.

  ಮರಾಠಿ ನಾಯಕ ಬಾಳಾ ಠಾಕ್ರೆ ಅವರ ಅಂತಿಮ ಯಾತ್ರೆ [ಚಿತ್ರಗಳಿಗೆ ಕ್ಲಿಕ್ ಮಾಡಿ] ಯಲ್ಲಿ ಇಡೀ ಮುಂಬೈ ಪಾಲ್ಗೊಂಡಿದೆ. ಈ ನಡುವೆ ಶಾರುಖ್ ಖಾನ್ ಅವರು ಅಂತಿಮ ದರ್ಶನಕ್ಕೆ ಬರುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಈ ಬಗ್ಗೆ ಶಾರುಖ್ ಯಾವುದೇ ಹೇಳಿಕೆ ನೀಡಿರಲಿಲ್ಲ.

  ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಬಾಲಿವುಡ್ ಅಷ್ಟೇ ಅಲ್ಲದೆ ಇತರೆ ಚಿತ್ರರಂಗದ ಗಣ್ಯರು ಕೂಡಾ ಠಾಕ್ರೆ ನಿಧನಕ್ಕೆ ಕಂಬನಿ ಮಿಡಿದಿದ್ದರು. ಬಿಗ್ ಬಿ ಅಮಿತಾಬ್ ಬಚ್ಚನ್, ನಿರ್ದೇಶಕ ಮಧುರ್ ಬಂಡಾರ್ಕರ್ ಅವರು ಠಾಕ್ರೆ ನಿವಾಸ ಮತೋಶ್ರಿಗೆ ತೆರಳಿ ಅಂತಿಮ ದರ್ಶನ ಪಡೆದು ಬಂದಿದ್ದರು. ಆದರೆ ಶಾರುಖ್ ಮೌನವಹಿಸಿದ್ದರು.

  86 ವರ್ಷದ ಮರಾಠ ಸೇನಾಪತಿ ಠಾಕ್ರೆ ಅವರ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ ಎಂಬ ಅಳುಕು ಶಾರುಖ್ ರನ್ನು ಕಾಡುತ್ತಿದೆಯಂತೆ. ಮೊದಲ ಬಾರಿಗೆ ಠಾಕ್ರೆ ನಿಧನದ ಬಗ್ಗೆ ಶಾರುಖ್ ಟ್ವೀಟ್ ಮಾಡಿದ್ದಾರೆ.

  bridges out of personal issues & then it gets too late. I should hav gone & met BalaSahib.Will miss our chats R.I.P. sır..." ಎಂದು ಭಾನುವಾರ ಶಾರುಖ್ ಟ್ವೀಟ್ ಮಾಡಿದ್ದಾರೆ.

  ಪಾಕಿಸ್ತಾನದ ಕ್ರಿಕೆಟ್ ಆಟಗಾರರ ಬೆಂಬಲಕ್ಕೆ ನಿಂತಿದ್ದ ಶಾರುಖ್ ಖಾನ್ ಅವರನ್ನು ವಿರುದ್ಧ ಬಾಳಾ ಠಾಕ್ರೆ ಕಟುವಾಗಿ ಟೀಕಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

  ಶಾರುಖ್ ಖಾನ್ ಅವರ ಮೈ ನೇಮ್ ಇಸ್ ಖಾನ್ ಚಿತ್ರ ಬಳಸಿ ಯುವ ಜಿಹಾದಿಗಳಿಗೆ ಸ್ಫೂರ್ತಿ ತುಂಬಲಾಗುತ್ತಿದೆ ಎಂದು ಉಗ್ರನೊಬ್ಬನ್ನು ತಪ್ಪೊಪ್ಪಿಗೆ ನೀಡಿರುವ ಬಗ್ಗೆ ವರದಿ ಬಂದಿರುವ ಹಿನ್ನೆಲೆಯಲ್ಲಿ ಶಾರುಖ್ ಹಾಗೂ ಕರಣ್ ಇಬ್ಬರೂ ತಪ್ಪಿತಸ್ಥರು. ಅವರಿಗೆ ಸಹಾಯ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಠಾಕ್ರೆ ಅವರು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದ್ದರು.

  ನಂತರ 2008ರ ಐಪಿಎಲ್ ನಲ್ಲಿ ಪಾಕಿಸ್ತಾನ ಆಟಗಾರನ್ನು ಆಡಿಸಲು ಶಾರುಖ್ ಮುಂದಾಗಿದ್ದರು. ಶಾರುಖ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಪಾಕ್ ಆಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಠಾಕ್ರೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

  ಇದಾದ ಮೇಲೆ 2012ರ ಐಪಿಎಲ್ ಪಂದ್ಯದ ನಂತರ ವಾಂಖೆಡೆ ಸ್ಟೇಡಿಯಂನ ಸಿಬ್ಬಂದಿ ಜೊತೆ ಶಾರುಖ್ ಖಾನ್ ರಾದ್ಧಾಂತ ಮಾಡಿಕೊಂಡಿದ್ದರು. ಶಾರುಖ್ ರನ್ನು ತಡೆ ಹಿಡಿದಿದ್ದ ಮರಾಠಿ ಮೂಲದ ಕ್ರೀಡಾಂಗಣದ ಸಿಬ್ಬಂದಿಯನ್ನು ಶಿವಸೇನೆ ಹಾಡಿಹೊಗಳಿತ್ತು. ಮೈದಾನ ಪ್ರವೇಶಿಸದಂತೆ ಶಾರುಖ್ ಮೇಲೆ ನಿರ್ಬಂಧ ಹೇರುವ ಕ್ರಮವನ್ನು ಠಾಕ್ರೆ ಸ್ವಾಗತಿಸಿದ್ದರು.

  ಇಷ್ಟೆಲ್ಲ ಮನಸ್ತಾಪದ ನಡುವೆಯೂ ಶಾರುಖ್ ಅವರು ಬಾಳಾ ಠಾಕ್ರೆ ಅವರು ಅನಾರೋಗ್ಯಪೀಡಿತರಾಗಿ ರುಗ್ಣಶಯ್ಯೆಯಲ್ಲಿದ್ದಾಗ "My prayers & wishes for Bala sahibji...may he recover soon & healthy from this battle." ಎಂದು ಟ್ವೀಟ್ ಮಾಡಿ ತಮ್ಮ ಕಳಕಳಿ ವ್ಯಕ್ತಪಡಿಸಿದ್ದರು.

  ಸಲ್ಮಾನ್ ಬಗ್ಗೆ ಮೆಚ್ಚುಗೆ 26/11ರ ಮುಂಬೈ ಉಗ್ರರ ದಾಳಿಯ ಬಗ್ಗೆ ಹಗುರವಾಗಿ ಮಾತನಾಡಿ ನಂತರ ಕ್ಷಮೆಯಾಚಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ದೇಶವಿರೋಧಿ ಯೆಂದು ಕೆಂಡಕಾರಿದ್ದ ಶಿವಸೇನೆ, ನಂತರ ತನ್ನ ನಿಲುವನ್ನು ಬದಲಾಯಿಸಿಕೊಂಡು, ಸಲ್ಮಾನ್ ಖಾನ್ ರದ್ದು ನಿಜಕ್ಕೂ ದೇಶಭಕ್ತ ಕುಟುಂಬ ಎಂದು ಹಾಡಿಹೊಗಳಿತ್ತು. ಇದು ಕೂಡಾ ಶಾರುಖ್ ಮನಸ್ಸನ್ನು ಘಾಸಿಗೊಳಿಸಿತ್ತು.

  English summary
  Bollywood superstar Shahrukh Khan finally broke his silence over Bal Thackeray's demise. Lamenting the death of the supremo of Shiv Sena, SRK's tweet shows that the actor must be feeling guilty over not dissolving his distance with 86-year-old "Senapati".

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X