»   » ಬ್ಯಾಂಗ್ ಬ್ಯಾಂಗ್ ಬಾಕ್ಸಾಫೀಸ್ ನಲ್ಲಿ ಧೂಳ್ ಧೂಳ್

ಬ್ಯಾಂಗ್ ಬ್ಯಾಂಗ್ ಬಾಕ್ಸಾಫೀಸ್ ನಲ್ಲಿ ಧೂಳ್ ಧೂಳ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಾಣದ ಬಹು ನಿರೀಕ್ಷಿತ ಬ್ಯಾಂಗ್ ಬ್ಯಾಂಗ್ ಚಿತ್ರ 'ಹಾಲಿಡೇ' ಸಮಯವನ್ನು ಸಕತ್ ಆಗಿ ದುಡಿಸಿಕೊಂಡಿದೆ. ಸಾಲು ಸಾಲು ರಜೆ ಇದ್ದ ಕಾರಣ ಹೃತಿಕ್-ಕತ್ರೀನಾ ಅಭಿನಯದ ಚಿತ್ರವನ್ನು ಪ್ರೇಕ್ಷಕರು ಮತ್ತೆ ಮತ್ತೆ ವೀಕ್ಷಿಸಿದ್ದಾರೆ. ಫಲಿತಾಂಶ ಸಿದ್ದಾರ್ಥ್ ಆನಂದ್ ಅವರ ನಿರ್ದೇಶನದ ಚಿತ್ರದ ಗಲ್ಲಾಪೆಟ್ಟಿಗೆ ಭರ್ಜರಿಯಾಗಿ ತುಂಬಿದೆ, ಚಿತ್ರ ಬಿಡುಗಡೆಯಾದ ನಾಲ್ಕೇ ದಿನದಲ್ಲಿ 175 ಕೋಟಿ ರು ಗಳಿಕೆ ದಾಟಿದೆ.

ಟಾಮ್ ಕ್ರೂಸ್ ನಟನೆಯ Knight and Day ಹಾಲಿವುಡ್ ಚಿತ್ರದ ರಿಮೇಕ್ ಚಿತ್ರ ಬ್ಯಾಂಗ್ ಬ್ಯಾಂಗ್ 140 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗಿದೆ. ಬಾಲಿವುಡ್ ಸಿನಿಮಾಗಳಲ್ಲಿ ಇರುವ ಹಾಗೆ ಎಲ್ಲಾ ಮಸಾಲೆಗಳನ್ನು ತುಂಬಲಾಗಿದೆ.  ಹೃತಿಕ್-ಕತ್ರೀನಾ ರೋಮ್ಯಾನ್ಸ್, ಹಾಡು, ಕುಣಿತ, ಫೈಟ್ ಚಿತ್ರದ ಗಳಿಕೆ ವೇಗ ಹೆಚ್ಚಿಸಿದೆ. ಚಿತ್ರಕಥೆ, ನಿರೂಪಣೆ ನಿಧಾನಗತಿಯಲ್ಲಿದ್ದು ಚಿತ್ರಕ್ಕೆ ಮಾರಕವಾಗಿದೆ.

Bang Bang Box Office Report: Mints Rs 175.61 Cr Gross Worldwide

ಸಿನಿಮಾ ನೋಡಿದ ಕೆಲವು ಮಂದಿ ಹಾಲಿವುಡ್ ಚಿತ್ರದೊಡನೆ ಹೋಲಿಕೆ ಮಾಡಿ ಸುಮ್ಮನೆ ಹಾಡುಗಳನ್ನು ತುರುಕಲಾಗಿದೆ. ಹೃತಿಕ್ ಡ್ಯಾನ್ಸ್ ಇಲ್ಲದಿದ್ದರೆ ಹಾಡುಗಳು ಈ ಚಿತ್ರದಲ್ಲಿರುವುದು ವೇಸ್ಟ್ ಎಂದಿದ್ದಾರೆ. ಇದೇ ರೀತಿ ಅಭಿಪ್ರಾಯವನ್ನು ವಿಮರ್ಶಕರು ಕೂಡಾ ನೀಡಿದ್ದಾರೆ. ಇದು ಹೃತಿಕ್ ರೋಷನ್ ಹಾಗೂ ಕತ್ರೀನಾ ಕೈಫ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ ಎಂದು ಷರಾ ಬರೆದಿದ್ದರು.

ಅದರೆ, ಏನೇ ಅದರೂ ಹೃತಿಕ್ ಅವರ ಲಕ್ ಸಕತ್ತಾಗಿದೆ. ಅಕ್ಟೋಬರ್ 2ರಂದು ಬಿಡುಗಡೆಯಾದ ಚಿತ್ರ ಭಾರತದಲ್ಲೇ 134.47 ಕೋಟಿ ರು ಗಳಿಸಿದೆ. ವಿದೇಶದ ಚಿತ್ರಮಂದಿರಗಳ ಗಳಿಕೆ 41.14 ಕೋಟಿ ರು ಮೀರುತ್ತಿದೆ.

ಹೃತಿಕ್ ಹಾಗೂ ಕತ್ರೀನಾ ಅಲ್ಲದೆ ಈ ಚಿತ್ರದಲ್ಲಿ ಡ್ಯಾನಿ ಡೆನ್ಜೊಗ್ಪ, ಜಾವೇದ್ ಜೆಫ್ರಿ, ದೀಪ್ತಿ ನವಾಲ್, ಕನ್ವಲ್ಜೀತ್ ಸಿಂಗ್, ಜಿಮ್ಮಿ ಶೆರ್ಗಿಲ್ ಮುಂತಾದ ತಾರಾಗಣವಿದೆ. ಸುಸಾನ್ ಜೊತೆ ಮನಸ್ತಾಪ, ವಿವಾಹ ವಿಚ್ಛೇದನ, ಮೆದುಳಿನ ಶಸ್ತ್ರಚಿಕಿತ್ಸೆ ಮುಂತಾದ ಕಾರ್ಮೋಡಗಳ ನಂತರ ಹೃತಿಕ್ ರೋಷನ್ ಅವರಿಗೆ ಬ್ಯಾಂಗ್ ಬ್ಯಾಂಗ್ ಚಿತ್ರ ವೃತ್ತಿ ಬದುಕಿನಲ್ಲಿ ಬೆಳ್ಳಿ ಮೋಡವಾಗಿ ಪರಿಣಮಿಸಿದೆ.

English summary
Bang Bang! is making a lot of money at the box office. It is not only a big hit in India but also worldwide. The film is getting negative review for it's slow screenplay, it has managed to impress the audience. Hrithik Roshan and Katrina Kaif-starrer Bang Bang movie has turned out to be a money-spinner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada