twitter
    For Quick Alerts
    ALLOW NOTIFICATIONS  
    For Daily Alerts

    'ಎಮರ್ಜೆನ್ಸಿ ಪವರ್' ಬಳಸಿ ಮೋದಿ ಕುರಿತ ಡಾಕ್ಯುಮೆಂಟರಿ ನಿಷೇಧಿಸಿದ ಸರ್ಕಾರ! ಅಂಥಹದ್ದೇನಿದೆ ಅದರಲ್ಲಿ?

    By ಫಿಲ್ಮಿಬೀಟ್ ಡೆಸ್ಕ್
    |

    ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಬಿಬಿಸಿ ಡಾಕ್ಯುಮೆಂಟರಿ ನಿರ್ಮಿಸಿದ್ದು, ಅದರ ಮೊದಲ ಎಪಿಸೋಡ್‌ ಯೂಟ್ಯೂಬ್‌ನಲ್ಲಿ ಕೆಲ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು.

    'ಇಂಡಿಯಾ: ದಿ ಮೋದಿ ಕ್ವಶ್ಚನ್' ಹೆಸರಿನ ಈ ಡಾಕ್ಯುಮೆಂಟರಿ ಗುಜರಾತ್ ಗಲಭೆ ಸಂದರ್ಭದಲ್ಲಿ ಸಿಎಂ ಆಗಿದ್ದ ಮೋದಿಯ ವಿಫಲತೆ, ದುರಾಡಳಿತಗಳ ಬಗ್ಗೆ ಈ ಡಾಕ್ಯುಮೆಂಟರಿ ಹೇಳುತ್ತಿದೆ.

    'KD'ಗಾಗಿ ದಿನಕ್ಕೆ 10 ಕಿ.ಮೀ ಧ್ರುವ ಸರ್ಜಾ ರನ್ನಿಂಗ್: ಪ್ರೇಮ್ಸ್ ಪ್ಯಾನ್ಸ್ ಇಂಡಿಯಾ ಸಿನಿಮಾಗಾಗಿ ಭರ್ಜರಿ ತಯಾರಿ! 'KD'ಗಾಗಿ ದಿನಕ್ಕೆ 10 ಕಿ.ಮೀ ಧ್ರುವ ಸರ್ಜಾ ರನ್ನಿಂಗ್: ಪ್ರೇಮ್ಸ್ ಪ್ಯಾನ್ಸ್ ಇಂಡಿಯಾ ಸಿನಿಮಾಗಾಗಿ ಭರ್ಜರಿ ತಯಾರಿ!

    ಡಾಕ್ಯುಮೆಂಟರಿ ಬಗ್ಗೆ ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದ್ದು, ಮೋದಿಯ ಇಮೇಜು ರಕ್ಷಿಸಲು ಸರ್ಕಾರ ಇದೀಗ ವಿಶೇಷ ಎಮರ್ಜೆನ್ಸಿ ಪವರ್ ಬಳಸಿ ವಿಡಿಯೋವನ್ನು ಬ್ಲಾಕ್ ಮಾಡಿದೆ.

    BBCs Modi Documentry Baned By Central Government Using Emergency Power

    ಭಾರತದ ಯೂಟ್ಯೂಬ್‌ನಲ್ಲಿ ಬಿಬಿಸಿಯ ಡಾಕ್ಯುಮೆಂಟರಿ ಪ್ರದರ್ಶನವಾಗದಂತೆ ತಡೆಯಲಾಗಿದೆ. ಇದರ ಜೊತೆಗೆ ಈ ವಿಡಿಯೋ ಲಿಂಕ್ ಅನ್ನು ಶೇರ್ ಮಾಡುವ ಟ್ವೀಟ್‌ಗಳನ್ನು ಬ್ಲಾಕ್ ಮಾಡುವಂತೆ ಕೋರಲಾಗಿದೆ.

    ಕೇಂದ್ರ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ಹಾಗೂ ಕೆಲವು ಮಾಧ್ಯಮ ಸಂಸ್ಥೆಗಳು ಟೀಕಿಸಿವೆ. ಇದು ಮಾಧ್ಯಮ ಸ್ವಾತಂತ್ರ್ಯದ ಉಲ್ಲಂಘನೆ ಎಂದಿವೆ. ಒಂದು ಸಾಕ್ಷ್ಯಚಿತ್ರ ಇಡೀಯ ಸರ್ಕಾರವನ್ನೇ ಅಲುಗಾಡಿಸಿಬಿಟ್ಟಿದೆ ಎಂದು ಸಹ ಕೆಲವರು ಟೀಕಿಸಿದ್ದಾರೆ.

    ಇನ್ನು ಕೆಲವರು ಬಿಬಿಸಿಯು ಪೂರ್ವಾಗ್ರಹ ಪೀಡಿತವಾಗಿ ಈ ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿದೆ. ಇದು ಸಾಕ್ಷ್ಯಚಿತ್ರವಲ್ಲ, ರಾಜಕೀಯ ಪ್ರೇರಿತ ವಿಡಿಯೋ ಎಂದು ಬಿಜೆಪಿ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬಿಬಿಸಿಯ ಡಾಕ್ಯುಮೆಂಟರಿ ಬಗ್ಗೆ ವಿರೋಧಗಳು ವ್ಯಕ್ತವಾದ ಬೆನ್ನಲ್ಲೆ ಬಿಬಿಸಿಯು ತನ್ನ ಡಾಕ್ಯುಮೆಂಟರಿಯನ್ನು ಡಿಫೆಂಡ್ ಮಾಡಿಕೊಂಡಿದ್ದು, ''ನಾವು ಸತತವಾಗಿ ತನಿಖೆ, ಅಧ್ಯಯನಗಳನ್ನು ನಡೆಸಿ ಸಾಕ್ಷ್ಯಗಳನ್ನು ಕಲೆ ಹಾಕಿಯೇ ಡಾಕ್ಯುಮೆಂಟರಿ ನಿರ್ಮಿಸಿದ್ದೇವೆ'' ಎಂದಿದೆ.

    ಏನಿದು ಎಮರ್ಜೆನ್ಸಿ ಪವರ್?

    2021 ರ ಐಟಿ ಕಾಯ್ದೆಯ 16ನೇ ನಿಯಮದ ಪ್ರಕಾರ ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ಅಂತರ್ಜಾಲದಿಂದ ತೆಗೆದು ಹಾಕುವ ಹಕ್ಕನ್ನು ಹೊಂದಿದೆ. ಇದೇ ನಿಯಮವನ್ನು ಆಧರಿಸಿ ಇದೀಗ ಮೋದಿ ಬಗೆಗಿನ ಬಿಬಿಸಿ ಡಾಕ್ಯುಮೆಂಟರಿಯನ್ನು ಡಿಲೀಟ್ ಮಾಡಲಾಗಿದೆ.

    English summary
    BBC's doucmentry about Modi banned by central government using emergency power.
    Sunday, January 22, 2023, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X