»   » ಹೆಸರಿನ ಜೊತೆ 'ಖಾನ್' ಸೇರಿಸಿಕೊಂಡ ಕರೀನಾ

ಹೆಸರಿನ ಜೊತೆ 'ಖಾನ್' ಸೇರಿಸಿಕೊಂಡ ಕರೀನಾ

Posted By:
Subscribe to Filmibeat Kannada
ಸೈಫೀನಾ ಮದುವೆ ಬಗ್ಗೆ ಹೇಗೆ ನಡೆಯಬಹುದು ಯಾರಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಗಬಹುದು ಎಂದು ಬಾಲಿವುಡ್ ಮಂದಿ ತಲೆಕೆಡಿಸಿಕೊಂಡಿದ್ದರೆ, ಮಾಧ್ಯಮಗಳಲ್ಲಿ ಮದುವೆ ತಯಾರಿಗಿಂತ ಮದುವೆಯಾದ ಮೇಲೆ ಕರೀನಾ ಯಾವ ಧರ್ಮಕ್ಕೆ ಸೇರುತ್ತಾರೆ ಎಂಬುದರ ಬಗ್ಗೆ ಭಾರಿ ಚರ್ಚೆ ನಡಿದಿದೆ.

ಕರೀನಾ ಮತಾಂತರವಾಗುತ್ತಾರೋ ಇಲ್ವವೋ ಗೊತ್ತಿಲ್ಲ ಅದರೆ, ಕರೀನಾ ಕಪೂರ್ ಅವರು ಕರೀನಾ ಕಪೂರ್ ಖಾನ್ ಎಂದು ಎರೆಡೆರದು 'ಸರ್ ನೇಮ್' ಇಟ್ಟಿಕೊಳ್ಳುವುದು ಖಾತ್ರಿಯಾಗಿದೆ. ಐಶ್ವರ್ಯಾ ರೈ ಅವರು ಐಶ್ವರ್ಯಾ ರೈ ಬಚ್ಚನ್ ಆದಂತೆ ಕರೀನಾ ಕೂಡಾ ಕಪೂರ್ ಹಾಗೂ ಖಾನ್ ಸರ್ ನೇಮ್ ಉಳಿಸಿಕೊಳ್ಳಲಿದ್ದಾರಂತೆ.

ಮಾಧ್ಯಮಗಳ ವರದಿ ಪ್ರಕಾರ ಅಮೀರ್ ಖಾನ್ ಅವರ ತಲಾಶ್ ಸಿನಿಮಾದಲ್ಲಿ ನಟಿಸಿರುವ ಕರೀನಾ ಕಪೂರ್ ಚಿತ್ರದ ಶೀರ್ಷಿಕೆಯಲ್ಲಿ ತಮ್ಮ ಹೆಸರು 'ಕರೀನಾ ಕಪೂರ್ ಖಾನ್' ಎಂದು ಬರಲಿ ಎಂದು ಸೂಚಿಸಿದ್ದಾರಂತೆ.

ಈ ಬಗ್ಗೆ ಅಮೀರ್ ಹಾಗೂ ರಿತೇಶ್ (ರಿತೇಶ್ ಸಿದ್ವಾನಿ, ಸಹ ನಿರ್ಮಾಪಕ) ಜೊತೆ ಕರೀನಾ ಮಾತಾಡಿದ್ದಾರೆ. ಈ ಬಗ್ಗೆ ಅವರ ಆಕ್ಷೇಪವೂ ಕೇಳಿಬಂದಿಲ್ಲ. ಹಾಗಾಗಿ ಇನ್ಮುಂದೆ ಅದೇ ಹೆಸರು ಎಲ್ಲಾ ಚಿತ್ರಗಳಲ್ಲೂ ಕಾಣಿಸುವ ಸಾಧ್ಯತೆ ಹೆಚ್ಚಿದೆ ಎಂದು ವೆಬ್ ತಾಣವೊಂದು ಹೇಳಿದೆ.

ಬಹುಶಃ ಈಗಿಟ್ಟಿರುವ ಮುಹೂರ್ತದಂತೆ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮದುವೆ ನಡೆದರೆ, ಮದುವೆ ನಂತರದ ಮೊದಲ ಚಿತ್ರವಾಗಿ 'ತಲಾಶ್' ಹೊರಬರಲಿದೆ.

ನವಾಬ್ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಶರ್ಮಿಳಾ ಠಾಗೋರ್ ಅವರನ್ನು ಮದುವೆಯಾದ ಸಂದರ್ಭದಲ್ಲೂ ಗುಪ್ತವಾಗಿ ಆಕೆಯನ್ನು ಮತಾಂತರಗೊಳಿಸಲಾಗಿತ್ತು ಎಂಬ ಸುದ್ದಿಯಿದೆ. ಅದೇ ರೀತಿ ಕರೀನಾಳನ್ನು ಮತಾಂತರಗೊಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

'ನಾನು ಮತ್ತು ಸೈಫ್ ಅಲಿ ಖಾನ್ ಈಗಾಗಲೇ ಮದುವೆ ಆಗಿದ್ದೇವೆ. ಕಾನೂನು ಪ್ರಕಾರ ನಾವು ಮದುವೆಯಾಗಬೇಕು. ಅದು ಇನ್ನೇನು ಕೆಲವು ದಿನಗಳಲ್ಲಿ ನಡೆದು ಹೋಗಲಿವೆ. ನಾವು ಹನಿಮೂನ್ ಗೆ ಹೋದರೆ ಅದು ನಮ್ಮಿಬ್ಬರ 250ನೇ ಹನಿಮೂನ್. ಅಷ್ಟು ಬಾರಿ ನಾವು ಒಟ್ಟಾಗಿ ಪ್ರವಾಸ ಮಾಡಿದ್ದೇವೆ. ಹಾಗಾಗಿ ನಮ್ಮಿಬ್ಬರ ಮದುವೆ ಬಗ್ಗೆ ಹೆಚ್ಚಿನ ಹೈಪ್ ಬೇಡ' ಎಂದು ಕರೀನಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿ ಎಲ್ಲರ ಹುಬ್ಬೇರಿಸಿದ್ದರು.

ಕರೀನಾ ಕಪೂರ್ ಈಗಾಗಲೇ ಮದುವೆಗೆ ಪೂರ್ವ ಸಿದ್ದತೆ ಮಾಡಿಕೊಂಡಿದ್ದಾರೆ. 40 ಲಕ್ಷ ರೂಪಾಯಿ ಬೆಲೆಬಾಳುವ ನೆಕ್ಲೆಸ್ ಖರೀದಿಸಿದ್ದಾರಂತೆ. ಇತ್ತ ಸೈಫ್ ಕೂಡಾ ಭರ್ಜರಿ ಶೇರ್ವಾನಿ ಉಡುಗೆಗೆ ಆರ್ಡರ್ ನೀಡಿದ್ದರಂತೆ. ಅಲ್ಲದೆ ಮದುವೆಗೆ ಮುನ್ನ ತೂಕವನ್ನು ಹೆಚ್ಚಿಸಿಕೊಳ್ಳಲು ಸೈಫ್ ನಿರ್ಧರಿಸಿದ್ದಾನಂತೆ.

English summary
As per media reports, Kareena Kapoor has decided to change her name to Kareena Kapoor Khan after marriage? Bebo leading actress in Aamir Khan's film Talaash said to be screened as Kareena Kapoor Khan in the opening movie title credits.
Please Wait while comments are loading...