ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ರೆಡಿಯಾದ ತೆಲುಗು ಯುವನಟ
ಬಾಲಿವುಡ್ ಸಿನಿಮಾಗಳಲ್ಲಿ ನಟಿಸಬೇಕು ಎಂಬುದು ಹಲವು ನಟ-ನಟಿಯರ ಆಸೆಯಾಗಿರುತ್ತದೆ. ಬಾಲಿವುಡ್‌ನ ಬೃಹತ್ 'ಗಾತ್ರ', ಅದರ ಥಳುಕು-ಬಳುಕುಗಳೇ ಇದಕ್ಕೆ ಕಾರಣ.
ತೆಲುಗಿನ ಯುವ ನಟರೊಬ್ಬರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಲು ಸಕಲ ಸಜ್ಜಾಗಿದ್ದಾರೆ. ತೆಲುಗಿನಲ್ಲಿ ಗಮನ ಸೆಳೆಯುತ್ತಿರುವ ಈ ನಟ ಏಕಾ-ಏಕಿ ಬಾಲಿವುಡ್ ಕಡೆ ಹಾರುತ್ತಿರುವುದು ಕೆಲವರಿಗೆ ಅಚ್ಚರಿಯನ್ನೂ ತಂದಿದೆ.
ಯುವನಟ ಬೆಲ್ಲಂಕೊಂಡ ಶ್ರೀನಿವಾಸ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಲ್ಲಂಕೊಂಡ ನಟಿಸಲಿರುವುದು ಪಕ್ಕಾ ಬಾಲಿವುಡ್ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ.

ತೆಲುಗಿನಲ್ಲಿ 2005 ರಲ್ಲಿ ಬಿಡುಗಡೆ ಆಗಿದ್ದ ಛತ್ರಪತಿ ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್ ನಟಿಸಲಿದ್ದಾರೆ. ಪ್ರಭಾಸ್ ನಟಿಸಿ, ರಾಜಮೌಳಿ ನಿರ್ದೇಶಿಸಿದ್ದ 'ಛತ್ರಪತಿ' ಭರ್ಜರಿ ಹಿಟ್ ಆಗಿತ್ತು. ಪ್ರಭಾಸ್ ನಟನೆಯ ಸೂಪರ್-ಡೂಪರ್ ಸಿನಿಮಾದಲ್ಲಿ ಛತ್ರಪತಿ ಸಹ ಒಂದು.
ತಮ್ಮ ಮೊದಲ ಸಿನಿಮಾದ ಪೋಸ್ಟರ್ ಅನ್ನು ಬೆಲ್ಲಂಕೊಂಡ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಿದ್ದಾರೆ. ಮೂಲ ಛತ್ರಪತಿ ಸಿನಿಮಾದ ಕತೆಯಲ್ಲಿ ತುಸುವೇ ಬದಲಾವಣೆ ಮಾಡಿ ಹಿಂದಿಗೆ ತರಲಾಗುತ್ತಿದೆಯಂತೆ.
Recommended Video
ಈ ವರೆಗೆ ಏಳು ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಬೆಲ್ಲಂಕೊಂಡ ಶ್ರೀನಿವಾಸ್, ಪ್ರಸ್ತುತ ಧೀರಾ ಹಾಗೂ ಅಲ್ಲು ಅಧುರ್ಸ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











