For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆ ವಿಶೇಷ: ದೇಶಪ್ರೇಮ ಮೆರೆವ ಟಾಪ್ 7 ಸಿನಿಮಾಗಳು

  |

  ಸ್ವಾತಂತ್ರ್ಯ ದಿನಾಚರಣೆ ಬಂದರೆ ಸಾಕು ಚಿತ್ರರಂಗದ ಗಣ್ಯರು ಸಹ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಚಿತ್ರರಂಗದ ಸಾಕಷ್ಟು ಗಣ್ಯರು ದೇಶಪ್ರೇಮ ಮೆರೆಯುವ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಅದರಲ್ಲೂ ಬಾಲಿವುಡ್ ನಲ್ಲಿ ದೇಶ ಭಕ್ತಿಯ ಅನೇಕ ಸಿನಿಮಾಗಳು ನಿರ್ಮಾಣವಾಗಿವೆ.

  ಸ್ವಾತಂತ್ರ್ಯ ಸಂಗ್ರಾಮದ ಕುರಿತ ಐತಿಹಾಸಿ ಸಿನಿಮಾಗಳು, ಹೋರಾಟಗಾರರ ಬಗ್ಗೆ, ಸ್ವಾತಂತ್ರ್ಯದ ನಂತರದ ಕಥೆ ಸೇರಿದ್ದಂತೆ ದೇಶ ಭಕ್ತಿ ಮೆರೆಯುವ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಿವೆ. ಬಾಲಿವುಡ್ ಮಾತ್ರವಲ್ಲದೆ ಬೇರೆ ಬೇರೆ ಭಾಷೆಯಲ್ಲಿಯೂ ದೇಶ ಪ್ರೇಮದ ಸಿನಿಮಾಗಳು ತೆರೆಕಂಡಿವೆ. ಕನ್ನಡದಲ್ಲಿಯೂ ದರ್ಶನ್ ಅಭಿನಯದ ಸಂಗೊಳ್ಳಿ ರಾಯಣ್ಣ ಸಿನಿಮಾ ಮಾಡಿ ಯಶಸ್ಸು ಕಂಡಿದ್ದಾರೆ.

  ಸ್ವಾತಂತ್ರ್ಯ ದಿನಾಚರಣೆಯಂದು ಈ ಆರು ಸ್ಟಾರ್ಸ್‌ಗೆ ಮತ್ತೊಂದು ಸಂಭ್ರಮಸ್ವಾತಂತ್ರ್ಯ ದಿನಾಚರಣೆಯಂದು ಈ ಆರು ಸ್ಟಾರ್ಸ್‌ಗೆ ಮತ್ತೊಂದು ಸಂಭ್ರಮ

  ಇನ್ನೂ ಹಿಂದಿಯಲ್ಲಿ ಇತ್ತೀಚಿಗೆ ಬಂದ ಉರಿ, ರಾಜಿ, ಪರಮಾಣು ಸಿನಿಮಾಗಳು ಸೇರಿದ್ದಂತೆ ಎವರ್ ಗ್ರೀನ್ ಸಿನಿಮಾಗಳಾದ ಲಗಾನ್ ಬಾರ್ಡರ್ ಕಾರ್ಗಿಲ್, ರಂಗ್ ದೇ ಬಸಂತಿ, ರೋಜಾ ಚಿತ್ರಗಳು ಹೆಮ್ಮೆಯ ಭಾರತೀಯರನ್ನಾಗಿಸುತ್ತೆ. ಆಮೀರ್ ಖಾನ್. ಅಕ್ಷಯ್ ಕುಮಾರ್, ಖಾರುಖ್ ಖಾನ್, ಅಜಯ್ ದೇವಗನ್ ಮತ್ತು ಹೃತಿಕ್ ರೋಷನ್ ಮುಂತಾದವರು ದೇಶಪ್ರೇಮದ ಸಿನಿಮಾಗಳನ್ನು ಮಾಡಿಗೆದ್ದಿದ್ದಾರೆ. ಹೆಮ್ಮೆಯ ಭಾರತೀಯರನ್ನಾಗಿ ಮಾಡುವ ದೇಶಪ್ರೇಮದ ಸಿನಿಮಾಗಳು ಇಲ್ಲಿವೆ. ಮುಂದೆ ಓದಿ..

  ರಾಝಿ ಸಿನಿಮಾ

  ರಾಝಿ ಸಿನಿಮಾ

  ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ವಿಕ್ಕಿ ಕೌಸಲ್ ಅಭಿನಯದ ರಾಜಿ ಸಿನಿಮಾ ಸ್ಪೈ ಥ್ರಿಲ್ಲರ್ ಸಿನಿಮಾವಾಗಿದೆ. ಹರಿಂದರ್ ಸಿಕ್ ಎನ್ನುವವರು ಬರೆದ ಸೆಹ್ಮತ್ ಕಾದಂಬರಿ ಆಧಾರಿತ ಸಿನಿಮಾವಿದು. 1971ರ ಇಂಡೋ-ಪಾಕಿಸ್ತಾನ್ ಯುದ್ಧಕ್ಕೆ ಮುಂಚಿತವಾಗಿ, ಭಾರತಕ್ಕೆ ಮಾಹಿತಿ ಪ್ರಸಾರ ಮಾಡಲು ತಂದೆಯ ಕೋರಿಕೆಯ ಮೇರೆಗೆ ಪಾಕಿಸ್ತಾನದ ಮಿಲಿಟರಿ ಅಧಿಕಾರಿಯನ್ನು ಮದುವೆಯಾಗಿ ಭಾರತಕ್ಕೆ ಮಾಹಿತಿಯನ್ನು ಪ್ರಸಾರ ಮಾಡುವ ಕಥೆ ಈ ಸಿನಿಮಾದಲ್ಲಿದೆ. ರಾಜಿ ಬಾಕ್ಸ್ ಆಫೀಸ್ ನಲ್ಲಿಯೂ ಉತ್ತಮ ಕಲೆಕ್ಷನ್ ಮಾಡಿದೆ.

  ಉರಿ: ದಿ ಸರ್ಜಿಕಲ್ ಸ್ಟ್ರೈಕ್

  ಉರಿ: ದಿ ಸರ್ಜಿಕಲ್ ಸ್ಟ್ರೈಕ್

  ವಿಕ್ಕಿ ಕೌಸಲ್, ಪರೇಶ್ ರಾವಲ್, ಯಾಮಿ ಗೌತಮ್ ಮತ್ತು ಮೋಹಿತ್ ರೈನಾ ಅಭಿನಯಿಸಿರುವ ಸಿನಿಮಾ. ಜಮ್ಮು-ಕಾಶ್ಮೀರದ ಭಾರತೀಯ ಸೇನಾ ಬ್ರಿಗೇಡ್ ಕೇಂದ್ರ ಕಚೇರಿಯ ಮೇಲೆ ನಡೆದ ದಾಳಿಯ ಪ್ರತಿಕಾರವಾಗಿ ಶಂಕಿತ ಪಾಕಿಸ್ತಾನಿ ಉಗ್ರರ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಸುತ್ತ ಈ ಚಿತ್ರ ಸುತ್ತುತ್ತೆ.

  ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್

  ಪರಮಾಣು: ದಿ ಸ್ಟೋರಿ ಆಫ್ ಪೋಖ್ರಾನ್

  ಪರಮಾಣು ದಿ ಸ್ಟೋರಿ ಆಫ್ ಪೋಖ್ರಾನ್ ಸಿನಿಮಾ 1998ರ ಪೋಖ್ರಾನ್ ಪರಮಾಣು ಪರೀಕ್ಷೆಯ ನೈಜ ಕಥೆಯನ್ನು ಆಧರಿಸಿದೆ. ಪೂರ್ಣ ಪ್ರಮಾಣದ ಪರಮಾಣು ರಾಷ್ಟ್ರವೆಂದು ಭಾರತ ಮಾನ್ಯತೆಗೆ ಕಾರಣವಾಯಿತು. ನಾಟಕ ಚಿತ್ರದಲ್ಲಿ ಜಾನ್ ಅಬ್ರಹಾಂ, ಡಯಾನಾ ಪೆಂಟಿ, ಬೊಮನ್ ಇರಾನಿ, ಅನುಜಾ ಸಾಥೆ ಸಿದ್ದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

  ಬಾರ್ಡರ್ ಸಿನಿಮಾ

  ಬಾರ್ಡರ್ ಸಿನಿಮಾ

  ಜೆ ಪಿ ದತ್ತಾ ಅವರ ಅಪ್ರತಿಮ ಸೃಷ್ಟಿ ಬಾರ್ಡರ್. ನೋಡಲೆ ಬೇಕಾದ ಸಿನಿಮಾಗಳಲ್ಲಿ ಒಂದು. ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ, ಮತ್ತು ಅಕ್ಷಯ್ ಖನ್ನಾ ಅಭಿನಯದ ಸಿನಿಮಾ. 1971ರ ಭಾರತ-ಪಾಕಿಸ್ತಾನ ಯುದ್ಧದ ಸುತ್ತ ಹೆಣೆಯಲಾದ ಕಥೆ. ಬಾರ್ಡರ್ ಸಿನಿಮಾ ಸಂಗೀತ ಭರಿತವಾಗಿಯೂ ಯಶಸ್ವಿಯಾಗಿದೆ.

  ಲಗಾನ್

  ಲಗಾನ್

  ಬ್ರಿಟಿಷರು ಆಡುತ್ತಿದ್ದ ಕ್ರಿಕೆಟ್ ಆಟದ ಮೂಲಕವೇ ಅವರನ್ನು ಸೋಲಿಸಿ ಸುಂಕ ತಪ್ಪಿಸಲು ಹಳ್ಳಿ ಹೈದ ಭುವನ್ ಹಾಗೂ ಅವನ ತಂಡ ಪಂದ್ಯ ಕಟ್ಟುವ ಕಥೆ ಇಲ್ಲಿದೆ. ಅಂತಿಮವಾಗಿ ಆಟದಲ್ಲಿ ಭಾರತ ತಂಡಕ್ಕೆ ಜಯ ಸಿಗುತ್ತದೆ. ಆಮೀರ್ ಖಾನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  ಹೃತಿಕ್ ರೋಷನ್: ಲಕ್ಷ್ಯ

  ಹೃತಿಕ್ ರೋಷನ್: ಲಕ್ಷ್ಯ

  ಹೃತಿಕ್ ರೋಷನ್ ಹಾಗೂ ಪ್ರೀತಿ ಜಿಂಟಾ ಅಭಿನಯದ ಈ ಚಿತ್ರ ಕಾರ್ಗಿಲ್ ಬಳಿಯ ದೊಡ್ಡ ಪರ್ವತ ಹತ್ತುವ ನಾಯಕ ಜೀವನದಲ್ಲಿ ತನ್ನ ಗುರಿಯನ್ನು ಕಂಡುಕೊಳ್ಳುವ ಜತೆಗೆ ದೇಶಕ್ಕಾಗಿ ಹೋರಾಟಕ್ಕೆ ಮುಂದಾಗುವ ಕಥೆ ಹೊಂದಿದೆ.

  ರಂಗ್ ದೇ ಬಸಂತಿ

  ರಂಗ್ ದೇ ಬಸಂತಿ

  ಇಂದಿನ ಯುವ ಪೀಳಿಗೆ ಭಾರತದ ಹಿಂದಿನ ಇತಿಹಾಸದತ್ತ ತಿರುಗಿ ನೋಡುವಂತೆ ಮಾಡಿದ ಚಿತ್ರ. ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಲು ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಅದರ ವಿರುದ್ಧ ಹೋರಾಟ ಮಾಡಲು ಹೇಗೆ ಸಿದ್ಧರಾಗುತ್ತಾರೆ ಎನ್ನುವುದು ಸಿನಿಮಾ. ಆಮೀರ್ ಖಾನ್, ಸಿದ್ದಾರ್ಥ್, ಶರ್ಮಾನ್ ಜೋಶಿ, ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿದ್ದರು.

  English summary
  Best Patriotic movies in Bollywood that makes proud to Indian.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X