Just In
Don't Miss!
- News
ಮಾರ್ಚ್ 4ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
- Automobiles
ಖಾಲಿ ಜಾಗಗಳಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು
- Finance
ಏರಿಕೆಯಾಗಿದ್ದ ಸೆನ್ಸೆಕ್ಸ್ ಕುಸಿತ: 716 ಪಾಯಿಂಟ್ಸ್ ಇಳಿಕೆ
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಿಕಾ ಪಡುಕೋಣೆ ವಿರುದ್ಧ ಎದ್ದು ನಿಂತ ಅನುಷ್ಕಾ ಶೆಟ್ಟಿ !

ಬಾಲಿವುಡ್ ನಲ್ಲಿ ಇಷ್ಟು ದಿನಗಳ ಕಾಲ ದೊಡ್ಡ ಸುದ್ದಿ ಮಾಡಿದ್ದ 'ಪದ್ಮಾವತ್' ಸಿನಿಮಾಗೆ ಅಂತು ಬಿಡುಗಡೆಯ ಭಾಗ್ಯ ಸಿಕ್ಕಿದೆ. 'ಪದ್ಮಾವತ್' ಸಿನಿಮಾ ಇದೇ ಗುರುವಾರ ರಿಲೀಸ್ ಆಗುವುದಕ್ಕೆ ಸಜ್ಜಾಗಿದೆ. ಆದರೆ ಇದೀಗ 'ಪದ್ಮಾವತ್'ಗೆ ಸೌತ್ ಕ್ವೀನ್ ಅನುಷ್ಕಾ ಸವಾಲು ಹಾಕಿದ್ದಾರೆ.
ಅನುಷ್ಕಾ ಶೆಟ್ಟಿ ನಟನೆಯ 'ಭಾಗಮತಿ' ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬರಲು ರೆಡಿಯಾಗಿದೆ. ಈ ಸಿನಿಮಾ ಇದೇ ತಿಂಗಳ 26ಕ್ಕೆ ಅಂದರೆ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಎರಡು ಸಿನಿಮಾಗಳಿಗೂ ಒಂದೇ ಒಂದು ದಿನ ಗ್ಯಾಪ್ ಇದ್ದು, ಎರಡು ಚಿತ್ರಗಳ ನಡುವೆ ನೇರ ಪೈಪೋಟಿ ಶುರುವಾಗಿದೆ. ಸ್ಟಾರ್ ನಟರ ಸಿನಿಮಾಗಳ ನಡುವೆ ನಡೆಯುತ್ತಿದ್ದ ಈ ಫೈಟ್ ಈಗ ನಟಿಯರ ಚಿತ್ರಕ್ಕೂ ನಡೆಯುತ್ತಿದೆ. 'ಭಾಗಮತಿ' ಮತ್ತು 'ಪದ್ಮಾವತ್' ನಡುವಿನ ಹೋರಾಟದಲ್ಲಿ ಗೆಲುವು ಯಾರಿಗೆ ಎನ್ನುವುದು ದೊಡ್ಡ ಕುತೂಹಲ ಮೂಡಿಸಿದೆ.
'ಪದ್ಮಾವತ್' ಬಿಡುಗಡೆಗೆ ಗ್ರೀನ್ ಸಿಗ್ನಲ್ ನೀಡಿದ ಸುಪ್ರೀಂ ಕೋರ್ಟ್
'ಪದ್ಮಾವತ್' ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬಸ್ಸಾಲಿ ಕಾಂಬಿನೇಶನ್ ನಲ್ಲಿ ಬರುತ್ತಿರುವ 3ನೇ ಸಿನಿಮಾಗಿದೆ. ಚಿತ್ರದಲ್ಲಿ ನಟ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಕೂಡ ನಟಿಸಿದ್ದಾರೆ. ಎಲ್ಲ ಅಡೆ ತಡೆಗಳ ನಂತರ 'ಪದ್ಮಾವತಿ' ಚಿತ್ರ 'ಪದ್ಮಾವತ್' ಆಗಿ ತೆರೆಗೆ ಬರುತ್ತಿದೆ.
ಇತ್ತ 'ಭಾಗಮತಿ' ಅನುಷ್ಕಾ ನಟನೆಯ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾವಾಗಿದೆ. 'ಬಾಹುಬಲಿ' ನಂತರ ಅನುಷ್ಕಾ ಈ ಚಿತ್ರ ಮಾಡಿದ್ದು, ಸಾಮಾನ್ಯವಾಗಿಯೇ ಚಿತ್ರಕ್ಕೆ ಮೇಲಿನ ಕುತೂಹಲ ಹೆಚ್ಚಿದೆ. ಅಶೋಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.