For Quick Alerts
  ALLOW NOTIFICATIONS  
  For Daily Alerts

  ಎನ್‌ಸಿಬಿ ವಿಚಾರಣೆಗೆ ಮತ್ತೊಮ್ಮೆ ಹಾಜರಾದ ನಟಿ ಭಾರತಿ ಸಿಂಗ್ ಮತ್ತು ಪತಿ

  |

  ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿರುತೆರೆ ನಟಿ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾ ಅವರು ಮತ್ತೊಮ್ಮೆ ಎನ್‌ಸಿಬಿ ಕಚೇರಿಯಲ್ಲಿ ಪ್ರತ್ಯಕ್ಷವಾಗಿದ್ದಾರೆ.

  ಡಿಸೆಂಬರ್ 21, ಸೋಮವಾರ ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಯಲ್ಲಿ ಭಾರತಿ ಸಿಂಗ್ ದಂಪತಿ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ಇಬ್ಬರು ಅರೆಸ್ಟ್ ಆಗಿ ಜಾಮೀನು ಪಡೆದುಕೊಂಡಿದ್ದರು.

  ಡ್ರಗ್ಸ್ ಪ್ರಕರಣ: ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ಜಾಮೀನುಡ್ರಗ್ಸ್ ಪ್ರಕರಣ: ಕಾಮಿಡಿಯನ್ ಭಾರತಿ ಸಿಂಗ್ ಮತ್ತು ಪತಿ ಹರ್ಷ್ ಲಿಂಬಾಚಿಯಾಗೆ ಜಾಮೀನು

  ಮತ್ತೊಂದೆಡೆ ಬಾಲಿವುಡ್ ನಟ ಅರ್ಜುನ್ ರಾಂಪಲ್ ಸಹ ಇಂದು ಎನ್‌ಸಿಬಿ ವಿಚಾರಣೆ ಎದುರಿಸಿದರು.

  ನವೆಂಬರ್ ತಿಂಗಳಲ್ಲಿ ಎನ್‌ಸಿಬಿ ಅಧಿಕಾರಿಗಳು ಭಾರತಿ ಸಿಂಗ್ ಅವರ ಮನೆ ಮೇಲೆ ದಾಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾದಕ ವಸ್ತು ಹಾಗು ಗಾಂಜಾ ಸಿಕ್ಕಿತ್ತು ಎಂದು ವರದಿಯಾಗಿದೆ.

  ಮನೆಯಲ್ಲಿ ಗಾಂಜಾ ಸಿಕ್ಕಿದ ಹಿನ್ನೆಲೆ ಭಾರತಿ ಸಿಂಗ್ ಅವರನ್ನು ಎನ್‌ಸಿಬಿ ಕಸ್ಟಡಿಗೆ ತೆಗೆದುಕೊಂಡಿದ್ದರು. ಮರುದಿನ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಸಹ ವಶಕ್ಕೆ ಪಡೆದಿದ್ದರು.

  ಡ್ರಗ್ಸ್ ಪ್ರಕರಣ: ಎನ್‌ಸಿಬಿ ವಿಚಾರಣೆಗೆ ಅರ್ಜುನ್ ರಾಮ್‌ಪಾಲ್ ಹಾಜರುಡ್ರಗ್ಸ್ ಪ್ರಕರಣ: ಎನ್‌ಸಿಬಿ ವಿಚಾರಣೆಗೆ ಅರ್ಜುನ್ ರಾಮ್‌ಪಾಲ್ ಹಾಜರು

  ಅಂದ್ಹಾಗೆ, ಭಾರತಿ ಸಿಂಗ್ 'ಕಾಮಿಡಿ ಸರ್ಕಸ್' ಎಂಬ ಕಾಮಿಡಿ ರಿಯಾಲಿಟಿ ಶೋ ನಲ್ಲಿ ಹಲವು ವರ್ಷ ಕಾಮಿಡಿ ಶೋ ನಡೆಸಿದ್ದರು, ಪ್ರಸ್ತುತ ಭಾರತಿ ಮತ್ತು ಆಕೆಯ ಪತಿ 'ಗ್ರೇಟ್ ಇಂಡಿಯನ್ ಡಾನ್ಸರ್' ಶೋ ನಿರೂಪಿಸುತ್ತಾರೆ. ಭಾರತಿ ಕಪಿಲ್ ಶರ್ಮಾ ಶೋ ನ ಭಾಗವೂ ಆಗಿದ್ದಾರೆ. ಕನ್ನಡದ ರಂಗನ್ ಸ್ಟೈಲ್ ಸಿನಿಮಾದಲ್ಲೂ ನಟಿಸಿದ್ದಾರೆ.

  English summary
  Drugs Case: Bollywood Tv Actress Bharti Singh And Haarsh Limbachiyaa Visit to NCB Office again.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X