For Quick Alerts
  ALLOW NOTIFICATIONS  
  For Daily Alerts

  ಕಾರ್ತಿಕ್ ಆರ್ಯನ್‌ಗೆ ಕೋಟಿಗಟ್ಟಲೆ ಮೌಲ್ಯದ ಕಾರು ಉಡುಗೊರೆ ನೀಡಿದ ನಿರ್ಮಾಪಕ!

  |

  ಬಾಲಿವುಡ್ ನಟ ಕಾರ್ತಿಕ್ ಆರ್ಯನ್‌ಗೆ ಇದು ಸುಗ್ಗಿಯ ಸಮಯ. ಬಾಲಿವುಡ್‌ನ ದೊಡ್ಡ ನಟರ ಸಿನಿಮಾಗಳೇ ಒಂದರ ಹಿಂದೊಂದರಂತೆ ಮಕಾಡೆ ಮಲಗುತ್ತಿದ್ದಾಗ ಕಾರ್ತಿಕ್ ಆರ್ಯನ್ ದೊಡ್ಡ ಹಿಟ್ ಒಂದು ನೀಡಿದ್ದಾರೆ.

  ಕಾರ್ತಿಕ್ ಆರ್ಯನ್ ನಟಿಸಿರುವ 'ಭೂಲ್ ಭುಲಯ್ಯ 2' ಸಿನಿಮಾ ದೊಡ್ಡ ಹಿಟ್ ಆಗಿದೆ. ಸಿನಿಮಾವು ಕೆಲವೇ ದಿನಗಳಲ್ಲಿ ನೂರು ಕೋಟಿಗೂ ಹೆಚ್ಚು ಹಣ ಗಳಿಸಿದೆ. ಸಿನಿಮಾದ ನಿರ್ಮಾಪಕ ಭೂಷಣ್ ಕುಮಾರ್ ಇದರಿಂದ ಬಹಳ ಖುಷಿಯಾಗಿದ್ದು ಕಾರ್ತಿಕ್ ಆರ್ಯನ್‌ಗೆ ದೊಡ್ಡ ಉಡುಗೊರೆಯನ್ನೇ ನೀಡಿದ್ದಾರೆ.

  ಟಿ-ಸೀರೀಸ್ ಸಂಸ್ಥೆಯ ಒಡೆಯರೂ ಆಗಿರುವ ಭೂಷಣ್ ಕುಮಾರ್, 'ಭೂಲ್ ಬುಲಯ್ಯ 2' ಸಿನಿಮಾದ ನಿರ್ಮಾಪಕರಾಗಿದ್ದು, ತಮ್ಮ ಸಿನಿಮಾ ದೊಡ್ಡ ಹಿಟ್ ಆಗಿರುವ ಕಾರಣ ನಾಯಕ ಕಾರ್ತಿಕ್ ಆರ್ಯನ್‌ಗೆ ಕೋಟಿಗಟ್ಟಲೆ ಮೌಲ್ಯದ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

  ದುಬಾರಿ, ಐಶಾರಾಮಿ ಹಾಗೂ ವೇಗದ ಕಾರು

  ದುಬಾರಿ, ಐಶಾರಾಮಿ ಹಾಗೂ ವೇಗದ ಕಾರು

  ವಿಶ್ವದ ಅತಿ ಐಶಾರಾಮಿ, ದುಬಾರಿ ಹಾಗೂ ವೇಗದ ಕಾರು ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿರುವ ಮೆಕ್‌ಲಾರೆನ್ ಜಿಟಿ ಕಾರನ್ನು ಕಾರ್ತಿಕ್ ಆರ್ಯನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ ನಿರ್ಮಾಪಕ ಭೂಷಣ್ ಕುಮಾರ್. ಇದು ಭಾರತದ ಮೊಟ್ಟ ಮೊದಲ ಮೆಕ್‌ಲಾರೆನ್ ಜಿಟಿ ಕಾರಾಗಿದೆ. ಪ್ರಸ್ತುತ ಭಾರತದಲ್ಲಿ ಕಾರ್ತಿಕ್ ಆರ್ಯನ್ ಬಳಿ ಹೊರತಾಗಿ ಇನ್ನಾರ ಬಳಿಯೂ ಮೆಕ್‌ಲಾರೆನ್ ಜಿಟಿ ಕಾರಿಲ್ಲ.

  ಕೋಟ್ಯಂತರ ಬೆಲೆ ಬಾಳುವ ಮೆಕ್‌ಲ್ಯಾರೆನ್ ಕಾರು

  ಕೋಟ್ಯಂತರ ಬೆಲೆ ಬಾಳುವ ಮೆಕ್‌ಲ್ಯಾರೆನ್ ಕಾರು

  ಮೆಕ್‌ಲಾರೆನ್ ಜಿಟಿ ಕಾರು ಭಾರಿ ದುಬಾರಿ ಬೆಲೆಯ ಕಾರಾಗಿದೆ. ಇದರ ಬೆಲೆ 4.28 ಕೋಟಿಯಿಂದ 6 ಕೋಟಿಯ ವರೆಗೆ ಇದೆ. ಭಾರತದಲ್ಲಿ ಜಿಎಸ್‌ಟಿ, ರಸ್ತೆ ತೆರಿಗೆ ಇನ್ನಿತರೆಗಳು ಸೇರಿದಂತೆ ಇನ್ನೂ ಒಂದು ಕೋಟಿಯಷ್ಟು ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಕಾರ್ತಿಕ್‌ ಆರ್ಯನ್ ಬಳಿ ಈಗಾಗಲೇ ಕೆಲವು ಒಳ್ಳೆಯ ಕಾರುಗಳು ಇವೆಯಾದರೂ ಇದು ಅವರ ಕಲೆಕ್ಷನ್ ಸೇರಿರುವ ಅತ್ಯಂತ ದುಬಾರಿ ಮತ್ತು ಐಶಾರಾಮಿ ಕಾರಾಗಿದೆ.

  ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡಿರುವ ಕಾರ್ತಿಕ್

  ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹಂಚಿಕೊಂಡಿರುವ ಕಾರ್ತಿಕ್

  ಭೂಷಣ್ ಕುಮಾರ್ ಉಡುಗೊರೆ ನೀಡಿರುವ ಕಾರಿನೊಟ್ಟಿಗೆ ಫೊಟೊ ತೆಗೆಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕಾರ್ತಿಕ್ ಆರ್ಯನ್, ತಮ್ಮ ಹೊಸ ಕಾರನ್ನು ಊಟದ ಟೇಬಲ್‌ಗೆ ಹೋಲಿಕೆ ಮಾಡಿದ್ದಾರೆ. ''ಚೈನೀಸ್ ಊಟ ತಿನ್ನಲು ದೊಡ್ಡ ಟೇಬಲ್ ಉಡುಗೊರೆ ಸಿಕ್ಕಿದೆ. ಶ್ರಮದ ಫಲ ಸಿಹಿಯಾಗಿರುತ್ತದೆ ಎಂದು ಕೇಳಿದ್ದೆ ಆದರೆ ಇಷ್ಟು ಬೃಹತ್ತಾಗಿರುತ್ತದೆ ಎಂದು ಈಗ ಅರಿತುಕೊಳ್ಳುತ್ತಿದ್ದೇನೆ. ಭಾರತದ ಮೊದಲ ಮೆಕ್‌ಲಾರೆನ್ ಜಿಟಿ ನೀಡಿದ್ದಕ್ಕೆ ಧನ್ಯವಾದ. ಮುಂದಿನ ಬಾರಿ ಚಾರ್ಟೆಡ್ ಪ್ಲೇನ್ ಉಡುಗೊರೆಯಾಗಿ ನೀಡಿ'' ಎಂದಿದ್ದಾರೆ ಕಾರ್ತಿಕ್ ಆರ್ಯನ್.

  185 ಕೋಟಿ ಗಳಿಸಿದ 'ಭೂಲ್ ಭುಲಯ್ಯ 2'

  185 ಕೋಟಿ ಗಳಿಸಿದ 'ಭೂಲ್ ಭುಲಯ್ಯ 2'

  ಭೂಷಣ್ ಕುಮಾರ್, ಬಾಲಿವುಡ್‌ನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರು. ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾದ ನಿರ್ಮಾಪಕರೂ ಇವರೇ. ಈ ಸಿನಿಮಾಕ್ಕೆ 600 ಕೋಟಿ ಬಜೆಟ್ ಅನ್ನು ಭೂಷಣ್ ಕುಮಾರ್ ಹೂಡುತ್ತಿದ್ದಾರೆ. ಈ ಸಿನಿಮಾವು ರಾಮಾಯಣದ ಕತೆ ಹೊಂದಿರಲಿದ್ದು, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಇನ್ನು 'ಭೂಲ್ ಭುಲಯ್ಯ 2' ಸಿನಿಮಾ ಐದು ವಾರದಲ್ಲಿ 185 ಕೋಟಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗುತ್ತಿದೆ. 'ಭೂಲ್ ಭುಲಯ್ಯ 2' ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಕಿಯಾರಾ ಅಡ್ವಾಣಿ, ಟಬು, ರಾಜ್‌ ಪಾಲ್ ಯಾದವ್ ಸಹ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

  English summary
  Bhool Bhulaiyaa 2 movie producer Bhushan Kumar gave swanky car to hero Karthik Aryan. Movie made more than 180 crore rs in just five weeks.
  Saturday, June 25, 2022, 10:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X