»   » ಅಜರುದ್ದೀನ್ ಮೇಲೆ ಸಿನ್ಮಾ ಮಾಡ್ತಾರಂತೆ?

ಅಜರುದ್ದೀನ್ ಮೇಲೆ ಸಿನ್ಮಾ ಮಾಡ್ತಾರಂತೆ?

By: ಜೇಮ್ಸ್ ಮಾರ್ಟಿನ್
Subscribe to Filmibeat Kannada
Biopic on Azharuddin in the offing?
ಭಾರತದ ಹೆಮ್ಮೆಯ ಅಥ್ಲೀಟ್ ಮಿಲ್ಕಾ ಸಿಂಗ್ ಅವರ ಜೀವನ ಚರಿತ್ರೆ ಚಲನಚಿತ್ರವಾಗಿ ಯಶಸ್ಸು ಗಳಿಸಿದೆ. ಬಾಕ್ಸರ್ ಮೇರಿ ಕೋಮ್ ಜೀವನವನ್ನು ಪ್ರಿಯಾಂಕಾ ಛೋಪ್ರಾ ಅವರ ಪ್ರಮುಖ ಭೂಮಿಕೆಯಲ್ಲಿ ತೆರೆಗೆ ತರಲಾಗುತ್ತಿದೆ. ಈಗ ಈ ಪಟ್ಟಿಗೆ ಹೊಸದಾಗಿ ಟೀಂ ಇಂಡಿಯಾದ ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹಮ್ಮದ್ ಅಜರುದ್ದೀನ್ ಅವರ ಹೆಸರು ಸೇರಿಕೊಂಡಿದೆ.

ಈಗಾಗಲೇ ಸಿಲ್ಕ್ ಸ್ಮಿತಾ ಜೀವನ ಚರಿತ್ರೆಯ ಆಯ್ದ ಭಾಗಗಳನ್ನು ಒಟ್ಟುಗೂಡಿಸಿ ದಿ ಡರ್ಟಿ ಪಿಕ್ಚರ್ ಚಿತ್ರ ತೆರೆಗೆ ತಂದು ಹೊಸ ಟ್ರೆಂಡ್ ಹುಟ್ಟು ಹಾಕಿದ ಏಕ್ತಾ ಕಪೂರ್ ಅವರು ಅಜರುದ್ದೀನ್ ಅವರ ಬದುಕಿನ ಕಥೆಯನ್ನು ಚಿತ್ರ ಮಾಡಲು ಹೊರಟ್ಟಿದ್ದಾರಂತೆ. ಹೈದರಾಬಾದ್ ಮೂಲದ ಹಿಂದಿ ಚಿತ್ರರಂಗ 'ಜಂಪಿಂಗ್ ಜಾಕ್' ಜಿತೇಂದ್ರ ಅವರ ಪುತ್ರಿ ಏಕ್ತಾ ಕಪೂರ್ ಅವರು ಈ ಸಾಹಸಕ್ಕೆ ಕೈ ಹಾಕಿದ್ದಾರೆ.

50 ವರ್ಷ ವಯಸ್ಸಿನ ಮಾಜಿ ಕ್ರಿಕೆಟರ್ ಹಾಲಿ ರಾಜಕಾರಣಿ ಅಜರುದ್ದೀನ್ ಅವರ ಕ್ರಿಕೆಟ್ ವೃತ್ತಿ 2000ರಲ್ಲಿ ಹಠಾತ್ ಆಗಿ ಕೊನೆಗೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಮ್ಯಾಚ್ ಫಿಕ್ಸಿಂಗ್ ಭೂತವಾಗಿ ಕ್ರಿಕೆಟ್ ಅಂಗಳದಲ್ಲಿ ಪ್ರವೇಶಿಸಿದ್ದು ಕೂಡಾ ಇದೇ ಸಮಯದಲ್ಲಿ ಹಾಗೂ ಅಜರ್ ಕೆರಿಯರ್ ಗೆ ಮುಳುವಾಗಿದ್ದು ಇದೇ ಫಿಕ್ಸಿಂಗ್ ಭೂತ. ತೀರಾ ಇತ್ತೀಚಿನ ದಿನಗಳ ವರೆಗೂ ಕಳಂಕ ಹೊತ್ತು ಅಜರ್ ತಿರುಗಿದ್ದರು ಆದರೆ, ಅವರ ಮೇಲಿದ್ದ ಆರೋಪಗಳೆಲ್ಲ ಈಗ ಮುಕ್ತವಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರಾಗಿ ಬೆಳೆಯುತ್ತಿದ್ದಾರೆ.

99 ಟೆಸ್ಟ್ ಹಾಗೂ 300 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿದ ಮಹಮ್ಮದ್ ಅಜರುದ್ದೀನ್ ಅವರು ವಿಭಿನ್ನ ಶೈಲಿ ಹಾಗೂ ಫೀಲ್ಡಿಂಗ್ ಚಾಕಚಕ್ಯತೆಗೆ ಹೆಸರುವಾಸಿಯಾಗಿದ್ದರು. ಆದರೆ, ಮ್ಯಾಚ್ ಫಿಕ್ಸಿಂಗ್ ಆರೋಪ ಹೊತ್ತು ವೃತ್ತಿ ಬದುಕಿಗೆ ವಿದಾಯ ಹೇಳ ಬೇಕಾಯಿತು.

ಅಜರುದ್ದೀನ್ ಅವರ ಕುರಿತ ಚಿತ್ರ ತೆಗೆಯುವ ಬಗ್ಗೆ ಏಕ್ತಾ ಅವರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಬಾಲಿವುಡ್ ನಲ್ಲಿ ಈ ಬಗ್ಗೆ ಗಾಳಿಸುದ್ದಿಯಂತೂ ಹಬ್ಬಿದೆ.

ಇನ್ನೊಂದು ಮೂಲಗಳ ಪ್ರಕಾರ ಈಗಾಗಲೇ ನಿರ್ಮಾಪಕರು ಅಜರುದ್ದೀನ್ ಜೊತೆ ಮಾತನಾಡಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರಂತೆ. ಉತ್ತರ ಪ್ರದೇಶದಿಂದ ಕಾಂಗ್ರೆಸ್ ಟಿಕೆಟ್ ಪಡೆದು ಲೋಕಸಭೆಗೆ ಆಯ್ಕೆಯಾಗಿರುವ ಅಜರುದ್ದೀನ್ ಬದುಕಿನ ಬಗ್ಗೆ ಚಿತ್ರ ಬಂದರೆ ಜನ ಇಷ್ಟಪಡುತ್ತಾರೆ ಎಂಬ ಅಭಿಪ್ರಾಯವಿದೆ.

ಬಹುಶಃ ಸೈಫ್ ಅಲಿ ಖಾನ್, ರಣಬೀರ್ ಕಪೂರ್ ಅಥವಾ ರಣವೀರ್ ಸಿಂಗ್ ಅವರು ಅಜರುದ್ದೀನ್ ಪಾತ್ರ ವಹಿಸುವ ಸಾಧ್ಯತೆಯಿದೆ. ಈ ಚಿತ್ರ ಅಜರುದ್ದೀನ್ ಅವರ ಕ್ರಿಕೆಟ್ ಬದುಕಿಗೆ ಮಾತ್ರ ಸಂಬಂಧಿಸಿರುತ್ತದೆಯೋ ಅಥವಾ ಅವರ ವೈಯಕ್ತಿಕ ಬದುಕು, ಮೊದಲ ಪತ್ನಿ, ಇಬ್ಬರು ಪುತ್ರರು, ಅಪಘಾತದಲ್ಲಿ ಅಸುನೀಗಿದ ಬೆಳೆದ ಮಗ, ಎರಡನೇ ಸಂಗಾತಿಯಾದ ಸಂಗೀತಾ ಬಿಜಲಾನಿ ಕಥೆಯೂ ಇದರಲ್ಲಿ ಇರುತ್ತದೆಯೋ ಗೊತ್ತಿಲ್ಲ. ಚಿತ್ರ ಸೆಟ್ಟೇರಿದರೆ ಮುಂದಿನ ಮಾತು.

English summary
After legendary athlete Milkha Singh and ace boxer Mary Kom, its time for Mohammad Azharuddin's life to feature on celluloid.Ekta Kapoor has reportedly started working on a biopic on the cricketer-turned-politician says reports.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada