Don't Miss!
- News
Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆ ನಟನಿಗೆ ಕಿಸ್ ಮಾಡಬೇಕು ಎಂದಾಗ ಹೃದಯಾಘಾತ ಆದಂತೆ ಅನಿಸಿತಂತೆ!
ಹಸಿಬಿಸಿ ದೃಶ್ಯಗಳಲ್ಲಿ ನಟಿಸುವುದರಲ್ಲಿ ಕೆಲವು ನಟಿಯರು ಖ್ಯಾತಿ ಹೊಂದಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಬಿಪಾಶ ಬಶು ಸಹ ಒಬ್ಬರು. ಇಂತಹ ದೃಶ್ಯಗಳಲ್ಲಿ ನಟಿಸುವುದು ಬಿಪಾಶಗೆ ಬಹಳ ಸುಲಭದ ವಿಷಯ ಎಂದು ಊಹಿಸಬಹುದು. ಆದರೆ, ಹಾಟ್ ದೃಶ್ಯಗಳಲ್ಲಿ ನಟಿಸುವಾಗ ಬಿಪಾಶ ಬಹಳ ಗೊಂದಲಕ್ಕೆ ಒಳಗಾಗುತ್ತಿದ್ದರಂತೆ.
'ಜೋಡಿ ಬ್ರೇಕರ್ಸ್' ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟ ಆರ್ ಮಾಧವನ್ ಅವರನ್ನು ಚುಂಬಿಸಲು ನಿರ್ದೇಶಕರು ಹೇಳಿದಾಗ ಬಿಪಾಶ ಭಯಭೀತರಾಗಿದ್ದಳಂತೆ. ಈ ಘಟನೆ ಬಗ್ಗೆ ಸ್ವತಃ ಬಿಪಾಶ ಹೇಳಿಕೊಂಡಿದ್ದಾರೆ.
ಪ್ರೇಮಿಗಳ
ದಿನದ
ವಿಶೇಷ:
ಲವ್
ಲೆಟರ್
ಕೊಟ್ಟ
ಪತಿಗೆ
ಮುತ್ತು
ಕೊಟ್ಟ
ಬಿಪಾಶಾ
ಬಸು
'ಒಬ್ಬ ನಟಿಯಾಗಿ ಅಂತಹ ದೃಶ್ಯಗಳು ನನಗೆ ಭಯ ಹುಟ್ಟಿಸುತ್ತವೆ. ಜೋಡಿ ಬ್ರೇಕರ್ಸ್ ಚಿತ್ರದಲ್ಲಿ ನನ್ನ ಆತ್ಮೀಯ ಸ್ನೇಹಿತ ಆರ್ ಮಾಧವನ್ ಜೊತೆ ಕಿಸ್ ಮಾಡುವ ದೃಶ್ಯ ಇತ್ತು. ಆ ಸೀನ್ ಮಾಡುವ ಒಂದು ದಿನ ಮುಂಚೆ ನನಗೆ ಹೃದಯಾಘಾತ ಆದಂತೆ ಅನುಭವ ಆಗಿತ್ತು' ಎಂದು ಬಿಪಾಶ ಅನುಭವ ಹಂಚಿಕೊಂಡಿದ್ದಾರೆ.
'ಆ ಸಂದರ್ಭದಲ್ಲಿ ನಾನು ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ನನ್ನ ಸ್ನೇಹಿತರು ರಾಕಿ ಮತ್ತು ದಿಯಾ ನನ್ನೊಂದಿಗೆ ಪ್ರಯಾಣಿಸುತ್ತಿದ್ದರು' ಎಂದು ಬಿಪಾಶ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
'ಕಿಸ್ಸಿಂಗ್ ಮಾಡುವ ವೇಳೆ ನಿರ್ದೇಶಕರು 'ಮಾಧವನ್ ನಿಮ್ಮ ಸ್ನೇಹಿತ, ಆರಾಮಾಗಿರಿ ಎಂದರು. ಫ್ರೆಂಡ್ ಎನ್ನುವುದೇ ಸಮಸ್ಯೆ ಆಗಿತ್ತು. ಈ ದೃಶ್ಯ ಮಾಡುವುದಕ್ಕೂ ಮುಂಚೆ ಸೆಟ್‌ನಲ್ಲಿ ನಾನು ಓಡಾಡುತ್ತಿದ್ದ ಸನ್ನಿವೇಶಗಳು ಎಲ್ಲರಿಗೂ ಮನರಂಜನೆ ನೀಡುತ್ತಿತ್ತು. ಸೀನ್ ಮುಗಿದಮೇಲೆ ಮಾಧವನ್ ಸೇರಿ ಎಲ್ಲರೂ ನಗುತ್ತಿದ್ದರು' ಎಂದು ವಿವರಿಸಿದ್ದಾರೆ.

ಸದ್ಯ, ಬಿಪಾಶ ಬಸು ಅಭಿನಯದ 'ಡೇಂಜರಸ್' ಟ್ರೈಲರ್ ರಿಲೀಸ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಈ ಸಿನಿಮಾ ಬಿಪಾಶ ಬೋಲ್ಡ್ ಆಗಿ ನಟಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಬಿಪಾಶ ಅವರ ಪತಿ ಕರಣ್ ಗ್ರೋವರ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ.