»   » ಡಸ್ಕಿ ಬ್ಯೂಟಿ ಬಿಪಾಶಾ ಹುಟ್ಟುಹಬ್ಬಕ್ಕೆ ಗರಮಾಗರಂ ಸಾಂಗ್ಸ್

ಡಸ್ಕಿ ಬ್ಯೂಟಿ ಬಿಪಾಶಾ ಹುಟ್ಟುಹಬ್ಬಕ್ಕೆ ಗರಮಾಗರಂ ಸಾಂಗ್ಸ್

Posted By:
Subscribe to Filmibeat Kannada

'ಸೆಕ್ಸ್ ಬಾಂಬ್' ಅಂತಲೇ ಇಡೀ ಬಾಲಿವುಡ್ ನಲ್ಲಿ ಖ್ಯಾತಿ ಪಡೆದಿರುವ ನಟಿ ಬಿಪಾಶಾ ಬಸು. ಮೈ ಚಳಿ ಬಿಟ್ಟು, ಮಡಿವಂತಿಕೆಯನ್ನೇ ಮರೆತು, ಪಡ್ಡೆ ಹೈಕ್ಳ ಕನಸಿನ ಕನ್ಯೆಯಾಗಿರುವ ನಟಿ ಬಿಪಾಶಾ ಬಸುಗಿಂದು 36ನೇ ಹುಟ್ಟುಹಬ್ಬದ ಸಂಭ್ರಮ.

ಚಿತ್ರರಂಗಕ್ಕೆ ಕಾಲಿಟ್ಟ ಹದಿನಾಲ್ಕು ವರ್ಷಗಳಲ್ಲಿ, ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಬಿಪಾಶಾ, ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದು ಗರಮಾಗರಂ ಐಟಂ ಸಾಂಗ್ ಗಳ ಮೂಲಕ.

ಪರಿಪೂರ್ಣ ನಾಯಕಿಯಾಗಿ ಕೇವಲ ಬೆರಳೆಣಿಕೆಯ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿರುವ ಬಿಪಾಶಾ, ಐಟಂ ಹಾಡಿಗೆ ಹೆಜ್ಜೆ ಹಾಕೋ ನಾಯಕಿಯರ ಲಿಸ್ಟ್ ನಲ್ಲಿ ನಂಬರ್ ಒನ್. ಹಾಗೆ, ಬಿಪ್ಸ್ ಸೊಂಟ ಕುಲುಕಿಸಿರುವ ಅನೇಕ ಹಾಡುಗಳು ಬಾಲಿವುಡ್ ನ ಹಿಟ್ ನಂಬರ್ಸ್ ಆಗಿರುವುದು ಇತಿಹಾಸ. [ಹಾಟ್ ಅಂಡ್ ಸೆಕ್ಸಿ ಅವತಾರದಲ್ಲಿ ತಾರೆ ಬಿಪಾಶಾ ಬಸು]

ಬಿಪಾಶಾ 36ನೇ ಬರ್ತಡೆ ಪ್ರಯುಕ್ತ ಅಂತಹ ಸೂಪರ್ ಡ್ಯೂಪರ್ ಟಾಪ್ ಹಾಡುಗಳ ಪಟ್ಟಿ ಇಲ್ಲಿದೆ...ನೋಡಿ ಎಂಜಾಯ್ ಮಾಡಿ.....

ಬೆಂಗಾಲಿ ಬೆಡಗಿ ಬಿಪಾಶಾಳ ಝಬರ್ದಸ್ತ್ ಎಂಟ್ರಿ.

ನವದೆಹಲಿಯಲ್ಲಿ ಹುಟ್ಟಿದ ಬಿಪಾಶಾ ಬಸು ಬೆಂಗಾಲಿ ಕುಟುಂಬಕ್ಕೆ ಸೇರಿದಾಕೆ. ಸ್ಕೂಲ್ ಮತ್ತು ಕಾಲೇಜಿನಲ್ಲಿ 'ಲೇಡಿ ಗೂಂಡಾ' ಅಂತಲೇ ಬಿರುದು ಗಳಿಸಿದ್ದ ಬಿಪಾಶಾ, 17ನೇ ವಯಸ್ಸಿಗೆ ಮಾಡೆಲಿಂಗ್ ಅನ್ನುವ ಮಾಯಾಲೋಕಕ್ಕೆ ಆಕರ್ಷಿತರಾದರು. 40ಕ್ಕೂ ಹೆಚ್ಚು ಮ್ಯಾಗಜೀನ್ ಕವರ್ ನಲ್ಲಿ ಮಿಂಚಿದ ಬಿಪಾಶಾ 'ಅಜ್ನಬೀ' ಚಿತ್ರದಿಂದ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ರು.

ಮಸ್ತ್ ಮಸ್ತ್ 'ಮೆಹಬೂಬ'

ಮೊದಲ ಚಿತ್ರ 'ಅಜ್ನಬೀ' ಯಲ್ಲಿ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ ಜೊತೆ 'ಮೆಹಬೂಬ' ಹಾಡಿಗೆ ಹೆಜ್ಜೆ ಹಾಕಿದ ಬಿಪಾಶಾ ಹರೆಯದ ಹುಡುಗರ ದಿಲ್ ಗೂ ಎಂಟ್ರಿಕೊಟ್ಟುಬಿಟ್ಟರು.

'ಜಾದೂ' ಮಾಡಿದ ಬಿಪಾಶಾ

'ಜಿಸ್ಮ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಬಿಪಾಶಾ, ಐಟಂ ಹಾಡಿಗೆ ಹೆಜ್ಜೆ ಹಾಕದೇ ಇದ್ದರೂ 'ಜಾದೂ ಹೇ ನಶಾ ಹೈ' ಹಾಡಲ್ಲಿ ಮಾಡಿದ ಜಾದೂವನ್ನ ಪಡ್ಡೆ ಹುಡುಗರು ಈಗಲೂ ಮರೆಯೋಕೆ ಸಾಧ್ಯ ಇಲ್ಲ.

'ನೋ ಎಂಟ್ರಿ'

ಸಲ್ಮಾನ್ ಖಾನ್ ಅಭಿನಯದ 'ನೋ ಎಂಟ್ರಿ' ಸಿನಿಮಾ ಗಲ್ಲಪೆಟಿಗೆಯನ್ನ ಕೊಳ್ಳೆ ಹೊಡೆದದ್ದು ಬಿಪಾಶಾ ಸೊಂಟ ಕುಲುಕಿದ ಈ ಒಂದು ಹಾಡಿನ ಮೂಲಕ!

'ಬಿಪಾಶಾ ಬಿಪಾಶಾ....'

ನಟೀಮಣಿಯರ ಹೆಸ್ರಲ್ಲಿ ಇದುವರೆಗೂ ಅದ್ಯಾರು ಹಾಡು ಬರೆದಿದ್ದಾರೋ ಇಲ್ಲವೋ, ಆದ್ರೆ ಬಿಪಾಶಾ ಹೆಸ್ರಲ್ಲಿ ಮಾತ್ರ ಗರಮಾಗರಂ ಐಟಂ ಸಾಂಗ್ ಕೊಟ್ಟ ಚಿತ್ರ 'ಜೋಡಿ ಬ್ರೇಕರ್ಸ್'

'ಬೀಡಿ...ಬಿಪಾಶಾ'

ಬಾಲಿವುಡ್ ನ ಟಾಪ್ ಹಾಡುಗಳ ಪಟ್ಟಿಯಲ್ಲಿ ಈಗಲೂ ಚಾಲ್ತಿಯಲ್ಲಿರುವುದು 'ಓಂಕಾರ' ಚಿತ್ರದ ಈ 'ಬೀಡಿ' ಹಾಡು.

'ಟಚ್ ಮೈ ಬಾಡಿ'

ಸದ್ಯ ಬಾಲಿವುಡ್ ನಲ್ಲಿ ಟ್ರೆಂಡಿಂಗ್ ಆಗಿರುವುದು ಇದೇ ಬಿಪಾಶಾ ನಟಿಸಿರುವ 'ಅಲೋನ್' ಚಿತ್ರದ ಈ 'ಟಚ್ ಮೈ ಬಾಡಿ' ಹಾಡು. ['ಟಚ್ ಮೈ ಬಾಡಿ' ಎಂದ ಹಾಟ್ ಬ್ಯೂಟಿ ಬಿಪಾಶಾ ಬಸು]

'ಲಕ್ಕಿ ಬಾಯ್ '

ರಣ್ಬೀರ್ ಕಪೂರ್ ಜೊತೆ ಬಿಪ್ಸ್ ಸ್ಪೆಪ್ ಹಾಕಿದ ಈ ಹಾಡನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ. 'ಬಚ್ನಾ ಏ ಹಸೀನೋ' ಚಿತ್ರದ 'ಲಕ್ಕಿ ಬಾಯ್' ಹಾಡು ಅಷ್ಟು ಜನಪ್ರಿಯ.

'ಕ್ಯಾ ರಾಝ್ ಹೈ'

ಹಾರರ್ ಚಿತ್ರಗಳಿಗೆ ಹೇಳಿಮಾಡಿಸಿದ ನಟಿ ಬಿಪಾಶಾ, 'ರಾಝ್ 3' ಚಿತ್ರದಲ್ಲಿ ಎದೆನಡುಗಿಸುವ ಜೊತೆಗೆ ಎಲ್ಲರ ಕಣ್ಣುತಂಪು ಮಾಡಿದ ಈ ಹಾಡನ್ನ ಒಮ್ಮೆ ನೋಡಿ....

'ಬಿಕಿನಿ' ಬೇಬ್ ಬಿಪಾಶಾ ಬಸು

'ಧೂಮ್ 2' ಚಿತ್ರದಲ್ಲಿ ಬಿಕಿನಿ ತೊಟ್ಟು ಬೀಚ್ ನಲ್ಲಿ ಜೂಟಾಟಾ ಆಡಿದ ಬಿಪಾಶಾಳನ್ನ ಒಮ್ಮೆ ನೆನಪಿಸಿಕೊಳ್ಳಿ.

'ಪ್ಲೇ'ಯರ್ಸ್ ಗರ್ಲ್ ಬಿಪಾಶಾ

ಚಿತ್ರದಲ್ಲಿ ನಾಯಕಿಯಾಗಿದ್ದರೂ ಸರಿ, ಬಿಪಾಶಾ ಇದ್ದ ಮೇಲೆ, ಆಕೆಗೊಂದು ಐಟಂ ಸಾಂಗ್ ಇರಲೇಬೇಕು. ಹಾಗೆ, ಸ್ಪೆಷಲ್ ಆಗಿ ರೆಡಿಮಾಡಿದ 'ಪ್ಲೇಯರ್ಸ್' ಚಿತ್ರದ ಈ ಐಟಂ ಹಾಡು ಒಂದ್ಕಾಲದಲ್ಲಿ ಹಿಟ್ ಆಗಿತ್ತು. [ಕೃಷ್ಣ ಸುಂದರಿ ಬಿಪಾಶಾಗೆ ಏಕಾಂತದ ಹುಟ್ಟುಹಬ್ಬ]

    English summary
    Bipasha Basu celebrates her 36th birthday today (January 07). On this Occasion, here is the list of Bip's Top 10 Hot Item songs list.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada