For Quick Alerts
  ALLOW NOTIFICATIONS  
  For Daily Alerts

  43ನೇ ವಯಸ್ಸಿಗೆ ಮೊದಲ ಮಗುವಿಗೆ ತಾಯಿಯಾಗ್ತಿರೋ ಬಿಪಾಶಾ ಬಸು

  |

  ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಬಗ್ಗೆ ಕಳೆದ ಹಲವು ದಿನಗಳಿಂದ ಗುಸು ಗುಸು ಸುದ್ದಿ ಹರಿದಾಡುತ್ತಲೇ ಇತ್ತು. ಬಿಪಾಶಾ ಹಾಗೂ ಕರಣ್ ಸಿಂಗ್ ಗ್ರೋವರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಮಾತು ಕೇಳಿಬರುತ್ತಿತ್ತು. ಆದರೂ ಬಿಪಾಶಾ ಬಸು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

  ಬಿಪಾಶಾ ಬಸು ಹಾಗೂ ಪತಿ ಕರಣ್ ಸಿಂಗ್ ಗ್ರೋವರ್ ಇಬ್ಬರು 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಂದಿನಿಂದ ಬಿಪಾಶಾ ಬಸು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಹೆಚ್ಚು ಕಡಿಮೆ ಆರು ವರ್ಷ ಬಾಲಿವುಡ್‌ನ ಪಾರ್ಟಿಗಳಲ್ಲೂ ಕಂಡಿರಲಿಲ್ಲ. ಕ್ಯಾಮರಾ ಕಣ್ಣಿಗೂ ಬಿದ್ದಿರಲಿಲ್ಲ. ಈಗ ಬಿಪಾಶಾ ಬಸು ಗರ್ಭಿಣಿ ಎನ್ನುವ ಸುದ್ದಿ ಹೊರಬಿದ್ದಿದೆ.

  ಸಿಹಿ ಸುದ್ದಿ ಕೊಟ್ಟ ಬಿಪಾಶಾ ಬಸು ಮತ್ತು ಕರಣ್ ಸಿಂಗ್!ಸಿಹಿ ಸುದ್ದಿ ಕೊಟ್ಟ ಬಿಪಾಶಾ ಬಸು ಮತ್ತು ಕರಣ್ ಸಿಂಗ್!

  ಕೆಲವು ದಿನಗಳಿಂದ ಬಾಲಿವುಡ್‌ನಲ್ಲಿ ಚರ್ಚೆಯಲ್ಲಿದ್ದ ಈ ಸುದ್ದಿಗೆ ಕೊನೆಗೂ ಬಿಪಾಶಾ ಬಸುನೇ ತೆರೆ ಎಳೆದಿದ್ದಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿ ಸುದ್ದಿಯನ್ನು ಸ್ವತ: ಬಿಪಾಶಾ ಬಸು ಹಾಗೂ ಪತಿ ಕರಣ್ ಸಿಂಗ್ ಗ್ರೋವರ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ಬಿಪಾಶಾ ಬಸು ಪ್ರೆಗ್ನೆಂಟ್

  ಬಿಪಾಶಾ ಬಸು ಪ್ರೆಗ್ನೆಂಟ್

  ಬಾಲಿವುಡ್ ನಟಿ ಬಿಪಾಶಾ ಬಸು ಇಂದು ( ಆಗಸ್ಟ್ 16) ತನ್ನ ಇನ್‌ಸ್ಟಾಗ್ರಾಂ ಕೆಲವು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ತನ್ನ ಬೇಬಿ ಬಂಪ್ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಈ ಫೋಟೊದಲ್ಲಿ ಪತಿ ಹಾಗೂ ಬಾಲಿವುಡ್ ನಟ ಕರಣ್ ಸಿಂಗ್ ಗ್ರೋವರ್ ಕೂಡ ಇದ್ದಾರೆ. ಎರಡು ಫೋಟೊಗಳನ್ನು ಶೇರ್ ಮಾಡಿದ್ದು, ಬೇಬಿ ಬಂಪ್ ಫೋಟೊ ಶೂಟ್‌ನಲ್ಲೂ ಬೋಲ್ಡ್ ಲುಕ್ ಕೊಟ್ಟ ಅಭಿಮಾನಿಗಳ ಮನಗೆದ್ದಿದ್ದಾರೆ. ಒಂದು ಫೋಟೊದಲ್ಲಿ ಬಿಷಾಶಾ ಬೇಬಿ ಬಂಪ್‌ಗೆ ಪತಿ ಕರಣ್ ಮುತ್ತಿರುವ ಫೋಟೊವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ.

  ಬಿಪಾಶಾ ಬಸು ಪತ್ರ

  ಬಿಪಾಶಾ ಬಸು ಪತ್ರ

  ಬಿಪಾಶಾ ಬಸು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಷ್ಟೇ ಅಲ್ಲದೆ. ಭಾವನಾತ್ಮಕವಾಗಿ ಪತ್ರವನ್ನು ಬರೆದುಕೊಂಡಿದ್ದಾರೆ. " ನಮ್ಮ ಜೀವನದಲ್ಲೀಗ ಹೊಸ ಸಮಯ, ಹೊಸ ಹಂತ, ಹೊಸ ಬೆಳಕು ಮತ್ತೊಂದು ವಿಶಿಷ್ಟ ಛಾಯೆ ತರುತ್ತಿದೆ. ನಾವು ಈ ಬದುಕನ್ನು ಪ್ರತ್ಯೇಕವಾಗಿ ಆರಂಭ ಮಾಡಿದ್ದೆವು. ಬಳಿಕ ನಾವು ಇಬ್ಬರಾದೆವು. ನಮ್ಮಿಬ್ಬರಿಗೆ ಇಷ್ಟು ಪ್ರೀತಿ ಸಿಕ್ಕಿರೋದು ನೋಡಲು ಕೊಂಚ ಅನ್ಯಾಯ ಅಂತ ಅನಿಸುತ್ತಿದೆ. ಆದಷ್ಟು ಬೇಗ ನಾವಿಬ್ಬರೂ ಮೂವರಾಗುತ್ತಿದ್ದೇವೆ. ನಮ್ಮ ಪ್ರೀತಿಯಿಂದಾದ ಸೃಷ್ಟಿ ನಮ್ಮ ಮಗು. ಶೀಘ್ರದಲ್ಲೇ ನಮ್ಮೊಂದಿಗೆ ಸೇರಲಿದೆ. ನಮ್ಮ ಸಂತೋಷವನ್ನು ಹೆಚ್ಚಿಸುತ್ತದೆ." ಎಂದು ಬಿಪಾಶಾ ಬಸು ಬರೆದುಕೊಂಡಿದ್ದಾರೆ.

  ಸಮಯ ತೆಗೆದುಕೊಂಡು ಪ್ರೆಗ್ನೆನ್ಸಿ ಅನೌನ್ಸ್

  ಸಮಯ ತೆಗೆದುಕೊಂಡು ಪ್ರೆಗ್ನೆನ್ಸಿ ಅನೌನ್ಸ್

  ಬಿಪಾಶಾ ಬಸು ಹಾಗೂ ಕರಣ್‌ ಸಿಂಗ್ ಗ್ರೋವರ್ ಮೊದಲ ಮಗುವಿನ ನಿರೀಕ್ಷೆಯಲ್ಲಿರೋ ಸುದ್ದಿ ಮಾರ್ಚ್ ತಿಂಗಳಲ್ಲಿಯೇ ಹೊರಬಿದ್ದಿತ್ತು. ಆದರೆ, ಇದ್ಯಾವುದರ ಬಗ್ಗೆನೂ ಬಿಪಾಶಾ ಬಸು ತಲೆಕೆಡಿಸಿಕೊಂಡಿರಲಿಲ್ಲ. ತಾವೇ ಒಂದಿಷ್ಟು ಸಮಯ ತೆಗೆದುಕೊಂಡು ಆಗಸ್ಟ್ 16ರಂದು ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

  ಬಿಪಾಶಾ-ಕರಣ್ ಲವ್ ಸ್ಟೋರಿ

  ಬಿಪಾಶಾ-ಕರಣ್ ಲವ್ ಸ್ಟೋರಿ

  ಬಿಪಾಶಾ ಬಸು ಹಾಗೂ ಕರಣ್ ಸಿಂಗ್ ಗ್ರೋವರ್ ಇಬ್ಬರೂ 2015ರಲ್ಲಿ 'ಅಲೋನ್' ಸಿನಿಮಾದ ಸೆಟ್‌ನಲ್ಲಿ ಭೇಟಿಯಾಗಿದ್ದರು. ಆ ವೇಳೆ ಇಬ್ಬರೂ ಇಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಂಡು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಎಪ್ರಿಲ್ 30, 2016ರಂದು ಆಪ್ತರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಬಳಿಕ ಸೆಲೆಬ್ರೆಟಿಗಳಿಗಾಗಿ ಅದ್ಧೂರಿ ಆರತಕ್ಷತೆಯನ್ನು ಅರೇಂಜ್ ಮಾಡಿದ್ದರು. ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ ಬಚ್ಚನ್ ಸೇರಿದಂತೆ ಬಾಲಿವುಡ್ ದಿಗ್ಗಜರೇ ಆಗಮಿಸಿ ಶುಭಕೋರಿದ್ದರು.

  English summary
  Bollywood Actress Bipasha Basu, Karan Singh Grover Announced First Pregnancy, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X