»   » ಬಿಪಾಶಾ ಬಸು ಮದುವೆ ಫಿಕ್ಸ್ ಆಯ್ತಂತೆ, ಜೋಡಿ ಹಕ್ಕಿ ನೋಡಿ

ಬಿಪಾಶಾ ಬಸು ಮದುವೆ ಫಿಕ್ಸ್ ಆಯ್ತಂತೆ, ಜೋಡಿ ಹಕ್ಕಿ ನೋಡಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮಾಡೆಲ್ ಕರಣ್ ಸಿಂಗ್ ಗ್ರೋವರ್ ಜೊತೆ ಪಾರ್ಟಿ ಮಾಡಿ ಅಮೆರಿಕನ್ ನಟಿ ಫರಾ ಫಾಸೆಟ್ ರಂತೆ ಕೇಶ ವಿನ್ಯಾಸ ಮಾಡಿಕೊಂಡು ಪಾರ್ಟಿಗಳಲ್ಲಿ ಓಡಾಡಿಕೊಂಡಿದ್ದ ಬಿಪಾಶಾ ಬಸು ಈಗ ಮದುವೆಯಾಗಲು ನಿರ್ಧಾರಿಸಿದ್ದಾರೆ. ತನ್ನ ಬಾಯ್ ಫ್ರೆಂಡ್ ಗಳ ಪಟ್ಟಿಯಲ್ಲಿ ಕರಣ್ ಜೊತೆಗೆ ಹೆಚ್ಚು ಕಾಲ ಕಳೆದಿರುವ ಬಿಪ್ಸ್ ಮದುವೆ ಮುಂದಿನ ತಿಂಗಳು ನಡೆಯುವ ಸಾಧ್ಯತೆಯಿದೆ.

ಬಿಪಾಶಾ ಅವರು ಸದ್ಯಕ್ಕೆ ಸಿನಿಮಾ ಬಿಟ್ಟು ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ. ಪಾರ್ಟಿ, ಔಟಿಂಗ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಇತರೆ ಸೆಲೆಬ್ರಿಟಿಗಳ ರೀತಿಯಲ್ಲಿ ಫೋಟೋ, ಸೆಲ್ಫಿ ಹಂಚಿಕೊಳ್ಳುತ್ತಿದ್ದಾರೆ.[ವಿಡಿಯೋ: ಹಾಟ್ ಹಾಗೂ ಫಿಟ್ ಬಿಪಾಶಾ ಸಕತ್ ಕಸರತ್ತು]

ಕಳೆದ ಕೆಲ ದಿನಗಳಿಂದ ಬಾಲಿವುಡ್ ನ ಗಲ್ಲಿಗಲ್ಲಿಗಳಲ್ಲಿ ಹಬ್ಬಿರುವ ಹೊಸ ಸುದ್ದಿ ಪ್ರಕಾರ, ಬಿಪಾಶಾ ಹಾಗೂ ಕರಣ್ ಗೆ ಮದುವೆಯಾಗುವ ಮನಸ್ಸು ಬಂದಿದೆಯಂತೆ. ಒಂದೆರಡು ಪ್ರವಾಸ, ವಿಹಾರ, ಔತಣಕೂಟಗಳ ನಂತರ ಇಬ್ಬರು ತಮ್ಮ ತಮ್ಮ ಕುಟುಂಬಗಳ ಜೊತೆ ಮದುವೆ ಪ್ರಸ್ತಾವನೆ ಮಾಡಿದ್ದಾರೆ.

Bipasha Basu To Marry Karan Singh Grover On April 30th? Wedding Details Revealed!

ಮದುವೆಗೆ ಮನೆಯಲ್ಲಿ ವಿರೋಧ?: ಕರಣ್ ಬಗ್ಗೆ ಬಿಪಾಶಾ ಅವರ ತಂದೆಗೆ ಅಷ್ಟೇನೂ ಒಳ್ಳೆ ಅಭಿಪ್ರಾಯವಿಲ್ಲ. ಇದೇ ರೀತಿ ಕರಣ್ ಅವರ ತಾಯಿಗೆ ಬಿಪಾಶಾ 'ಲವ್ ಬ್ರೇಕ್ ಅಪ್ ಇತಿಹಾಸ' ದ ಬಗ್ಗೆ ಚಿಂತೆ ಹೆಚ್ಚಾಗಿದೆ. ಆದರೆ, ಹೇಗೋ ಎರಡು ಕಡೆ ಮನೆಯವರು ಒಮ್ಮತಕ್ಕೆ ಬಂದು ಒಂದು ತಿಂಗಳು ಚರ್ಚೆ ನಡೆಸಿ ಏಪ್ರಿಲ್ 30ರಂದು ಸಾಂಪ್ರಾದಾಯಿಕ ಶೈಲಿಯಲ್ಲಿ ಮದುವೆ ನೆರವೇರಿಸಲು ನಿಶ್ಚಯಿಸಿದ್ದಾರೆ ಎಂದು ಸ್ಟಾರ್ ಡಸ್ಟ್ ವರದಿ ಮಾಡಿದೆ. ['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂಬೈನ ತಾಜ್ ಮಹಲ್ ಹೋಟೆಲ್ ನಲ್ಲಿ ಇಬ್ಬರ ಆರತಕ್ಷತೆ ನಡೆಯಲಿದೆ. ಇದಕ್ಕೂ ಮುನ್ನ ಬೆಂಗಾಲಿ ಸಂಪ್ರದಾಯದಂತೆ ಬಿಪಾಶಾ ಕಂಗೊಳಿಸಲಿದ್ದಾರೆ. ['ರಂಗಿತರಂಗ' ನಿರೂಪ್ ಭಂಡಾರಿ ಮದುವೆ ಸಂಭ್ರಮ]

ಕರಣ್ ಈಗಾಗಲೇ ಎರಡು ಮದುವೆ ಹಾಗೂ ವಿಚ್ಛೇದನ ಪಡೆದ ಅನುಭವಿ. ಬಿಪಾಶಾ ಹಲವು ಬಾರಿ ಪ್ರೇಮಪಾಶದಲ್ಲಿ ಸಿಲುಕಿದರೂ ಹೇಳಿ ಕೇಳಿ ಇದು ಮೊದಲನೇ ಮದುವೆ. ಹೀಗಾಗಿ ಬಿಪ್ಸ್ ಸಹಜವಾಗೇ ಥ್ರಿಲ್ ಆಗಿದ್ದಾರೆ.

-
-
-
-
-
-
-
-
-
-
-

ಈ ಬಾಲಿವುಡ್ ಸೆಲೆಬ್ರಿಟಿ ಜೋಡಿಯ ಮದುವೆ ವೈಭೋಗದಲ್ಲಿ ಪಾಲ್ಗೊಳ್ಳಲು ಹಿಂದಿ ಚಿತ್ರರಂಗ ತುದಿಕಾಲಲ್ಲಿ ನಿಂತಿದೆಯಂತೆ. ಸದ್ಯಕ್ಕೆ ಇಬ್ಬರ ರಸಮಯ ಸೆಲ್ಫಿ, ಫೋಟೋಗಳ ಸರಣಿ ನೋಡಿ, ಮದುವೆ ಬಗ್ಗೆ ಇನ್ನಷ್ಟು ಅಪ್ಡೇಟ್ ಸಿಕ್ಕರೆ ನಿಮ್ಮ ಮುಂದಿಡುತ್ತೇವೆ.

English summary
Bipasha Basu and Karan Singh Grover have finally decided to settle down and go from just dating to being married.Bipasha and Karan allegedly got engaged. According to Stardust, the couple will marry on April 30th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada