»   » ಬಾಲಿವುಡ್ ನಟಿ ಮೋದಿಗೆ ನೀಡಿದ ಪುಕ್ಸಟೆ ಸಲಹೆ

ಬಾಲಿವುಡ್ ನಟಿ ಮೋದಿಗೆ ನೀಡಿದ ಪುಕ್ಸಟೆ ಸಲಹೆ

Posted By:
Subscribe to Filmibeat Kannada

ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒಬ್ಬ ಚತುರ ಮತ್ತು ಪ್ರಗತಿಪರ ವ್ಯಕ್ತಿ. ಅವರು ಈ ದೇಶ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಮಲ್ಲಿಕಾ ಶೆರಾವತ್ ಈ ಹಿಂದೆ ಹೊಗಳಿದ್ದರು. (ಮೋದಿ ದೇಶದ ಅರ್ಹ ಬ್ರಹ್ಮಚಾರಿ)

ಈಗ ಪುರುಷರಿಗೆ ಗಡ್ಡ, ಮೀಸೆ ಇರಬಾರದು. ಅದನ್ನು ಕ್ಲೀನ್ ಶೇವ್ ಮಾಡಿಕೊಂಡರೆ ಸುಂದರವಾಗಿ ಕಾಣಿಸುತ್ತಾರೆ. ನರೇಂದ್ರ ಮೋದಿ ಕೂಡಾ ಗಡ್ಡ, ಮೀಸೆ ಬೋಳಿಸಿ ಕೊಂಡರೆ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆಂದು ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಮೋದಿಗೊಂದು ಪುಕ್ಸಟೆ ಸಲಹೆ ನೀಡಿದ್ದಾರೆ.

BJP PM candidate Modi looks better without beard, Chitrangada

ಜೆಲೆಟ್ ಸಂಸ್ಥೆ ಏರ್ಪಡಿಸಿದ್ದ 'Unshaven is Unbathed' ಆಂದೋಲನದಲ್ಲಿ ಮಾತನಾಡುತ್ತಿದ್ದ ಚಿತ್ರಾಂಗದಾ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮೋದಿಗೆ ಮೀಸೆ, ಗಡ್ಡ ಇರುವುದರಿಂದ ಅವರು ಸುಂದರವಾಗಿ ಕಾಣುತ್ತಿಲ್ಲ ಎಂದಿದ್ದಾರೆ.

ಐದೇ ನಿಮಿಷದಲ್ಲಿ ತಮ್ಮ ಮಾತು ಬದಲಾಯಿಸಿದ ಚಿತ್ರಾಂಗದಾ, ಸಿಖ್ಖರಿಗೆ ಧಾರ್ಮಿಕ ಕಟ್ಟುಪಾಡು ಇರುವುದರಿಂದ ಮೀಸೆ, ಗಡ್ಡ ಬೋಳಿಸಲು ಆಗುವುದಿಲ್ಲ. ಗಡ್ಡ, ಮೀಸೆ ಇದ್ದರೂ ಪ್ರಧಾನಿ ಸಿಂಗ್ ಚೆನ್ನಾಗಿ ಕಾಣಿಸುತ್ತಾರೆಂದಿದ್ದಾರೆ.

ಗಡ್ಡ ಮತ್ತು ಮೀಸೆ ಇರುವ ನಿಮ್ಮ ಫೇವರೇಟ್ ನಟ ಯಾರೆಂದು ಕೇಳಿದ ಪ್ರಶ್ನೆಗೆ, ಸೂಪರ್ ಸ್ಟಾರ್ ರಜನೀಕಾಂತ್. ಅವರು ಹೇಗಿದ್ದರೂ ಸೂಪರ್ ಎನ್ನುವುದು ಚಿತ್ರಾಂಗದಾ ಅಂಬೋಣ.

ದೇಶದ ಎಲ್ಲಾ ಪುರುಷರು ಪ್ರತಿ ದಿನ ಗಡ್ಡ ಮತ್ತು ಮೀಸೆ ಬೋಳಿಸುವುದನ್ನು ಪರಿಪಾಠ ಮಾಡಿಕೊಳ್ಳ ಬೇಕು ಎಂದು ಚಿತ್ರಾಂಗದಾ ಹೇಳಿದ್ದಾರೆ.

ಹೇಗಿದ್ದರೂ ಜಿಲೆಟ್ ಸಂಸ್ಥೆ ಆಯೋಜಿಸಿದ್ದ ಆಂದೋಲನದಲ್ಲಿ ತಾನೆ ಆಕೆ ಭಾಗವಹಿಸಿದ್ದು!

English summary
BJP Prime Minister candidate Narendra Modi looks better without beard, Bollywood actress Chitrangada Singh. 
Please Wait while comments are loading...