For Quick Alerts
  ALLOW NOTIFICATIONS  
  For Daily Alerts

  ನಟ ಸೋನು ಸೂದ್ ವಿರುದ್ಧ ದೂರು ದಾಖಲಿಸಿದ ಮುಂಬೈ ಮಹಾನಗರ ಪಾಲಿಕೆ; ಕಾರಣವೇನು?

  |

  ನಟ ಸೋನು ಸೂದ್ ವಿರುದ್ಧ ಮುಂಬೈ ಮಹಾನಗರ ಮುನ್ಸಿಪಲ್ ಕಾರ್ಪೋರೇಷನ್ ಪೊಲೀಸ್ ದೂರು ದಾಖಲಿಸಿದೆ. ಸೋನು ಸೂದ್ ಒಡೆತನದ ಮುಂಬೈನ ಜುಹುದಲ್ಲಿರುವ 6 ಅಂತಸ್ತಿನ ಶಕ್ತಿ ಸಾಗರ್ ವಸತಿ ಕಟ್ಟಡವನ್ನು ಅನುಮತಿ ಇಲ್ಲದೆ ಹೋಟೆಲ್ ಆಗಿ ಪರಿವರ್ತಿಸಿದ್ದಾರೆ ಎನ್ನುವ ಆರೋಪ ಸೋನು ಸೂದ್ ವಿರುದ್ಧ ಕೇಳಿಬರುತ್ತಿದೆ.

  ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಸೋನು ಸೂದ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಸೋನು ಸೂದ್ ಅಗತ್ಯ ಅನುಮತಿಯನ್ನು ಹೊಂದಿದ್ದಾರೆ. ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ ಅನುಮತಿಗೆ ಕಾಯುತ್ತಿದ್ದಾರೆ ಎಂದು ಹೇಳಲಾಗಿದೆ.

  ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಸೋನು ಸೂದ್: ಈ ಬಗ್ಗೆ ನಟ ಹೇಳಿದ್ದೇನು?

  ಬಿಎಂಸಿ ತನ್ನ ದೂರಿನಲ್ಲಿ ಸೋನು ಸೂದ್ ಅವರು ಸ್ಥಾಪಿಸಿದ ವಸತಿಗೃಹವನ್ನು ಅನುಮತಿ ಇಲ್ಲದೆ ವಸತಿ ಹೋಟೆಲ್ ಆಗಿ ಅನಧಿಕೃತವಾಗಿ ಬದಲಾಯಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಈ ಬಗ್ಗೆ ನೋಟಿಸ್ ನೀಡಿದರು ಸೋನು ಸೂದ್ ಪಾಲಿಸುತ್ತಿಲ್ಲ ಎಂದಿದೆ. 'ಸೋನು ಸೂದ್ ಅವರಿಗೆ ನೋಟಿಸ್ ನೀಡಿದರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ' ಎಂದು ಬಿಎಂಸಿ ಆರೋಪಿಸಿದೆ.

  ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸೋನು ಸೂದ್, 'ನಾನು ಬದಲಾಯಿಸಲು ಬಿಎಂಸಿಯಿಂದ ಅನುಮೋದನೆ ಪಡೆದಿದ್ದೇನೆ. ಇದು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟಿದೆ. ಕೊರೊನಾ ಕಾರಣ ಇನ್ನು ಅನುಮತಿ ಸಿಕ್ಕಿಲ್ಲ. ಇದರಲ್ಲಿ ಯಾವುದೇ ಅಕ್ರಮವಿಲ್ಲ. ನಾನು ಸಾಂಕ್ರಾಮಿಕ ಸಮಯದಲ್ಲಿ ಕೊರೊನಾ ವಾರಿಯರ್ಸ್ ಗೆ ಈ ಹೋಟೆಲ್ ನೀಡಿದ್ದೆ. ಒಂದು ವೇಳೆ ಅನುಮತಿ ಬರದಿದ್ದರೆ ಅದನ್ನು ಮತ್ತೆ ಹೋಟಲ್ ನಿಂದ ವಸತಿ ಗೃಹಮಾಡುತ್ತೇನೆ. ಬಿಎಂಸಿಯ ವಿರುದ್ಧ ನಾನು ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ' ಎಂದು ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.

  ಬಹುಭಾಷಾ ನಟ ಸೋನು ಸೂದ್ ಈಗ ರಿಯಲ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸೋನು ಸೂದ್ ಮಾಡಿದ ಮಾನವೀಯ ಕೆಲಸಕ್ಕೆ ಇಡೀ ದೇಶ ಮೆಚ್ಚಿಕೊಂಡಿದೆ. ಸೋನು ಸೂದ್ ಅವರನ್ನು ದೇವರಂತೆ ಆಧರಿಸುತ್ತಿದ್ದಾರೆ.

  ಅನೇಕರ ಪಾಲಿನ ನಿಜವಾದ ದೇವರವಾಗಿರುವ ಸೋನು ಸೂದ್ ವಿರುದ್ಧ ಮುಂಬೈ ಮಹಾನಗರ ಪಾಲಿಗೆ ಮಾಡಿರುವ ಆರೋಪ ಅಭಿಮಾನಿಗಳಿಗೆ ಬೇಸರ ತರಿಸಿದೆ.

  English summary
  BMC files police complaint against Actor Sonu Sood for allegedly converting residential building into hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X