For Quick Alerts
  ALLOW NOTIFICATIONS  
  For Daily Alerts

  ಕಂಗನಾ ರಣಾವತ್ ಬಳಿಕ ಮತ್ತೊಬ್ಬ ಸೆಲೆಬ್ರಿಟಿಗೆ ನೋಟಿಸ್ ನೀಡಿದ ಬಿಎಂಸಿ

  |

  ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಕಚೇರಿ ನೆಲಸಮ ಮಾಡಲು ಮುಂದಾಗಿದ್ದ ಬಿಎಂಸಿ ವಿರುದ್ಧ ಹಲವರು ಕಿಡಿ ಕಾರಿದ್ದರು. ನಟಿ ಮೇಲಿನ ವೈಯಕ್ತಿಕ ದ್ವೇಷದ ಹಿನ್ನೆಲೆ ಕಷ್ಟಪಟ್ಟು ಕಟ್ಟಿದ ಕಟ್ಟಡವನ್ನು ನೆಲಕ್ಕೆ ಉರುಳಿಸಲು ಮುಂದಾಗಿದೆ ಎಂದು ಟೀಕಿಸಿದರು. ಮಧ್ಯಾಹ್ನದ ವೇಳೆಗೆ ಕಂಗನಾ ಪರ ವಕೀಲರು ಬಾಂಬೆ ಹೈ ಕೋರ್ಟ್‌ನಿಂದ ತಡೆಯಾಜ್ಞೆ ತಂದು ಕಚೇರಿ ನೆಲಸಮ ಮಾಡುವುದನ್ನು ತಡೆದರು.

  ಇದರ ಬೆನ್ನಲ್ಲೆ ಮತ್ತೊಬ್ಬ ಬಾಲಿವುಡ್ ಸೆಲೆಬ್ರಿಟಿಗೆ ಬಿಎಂಸಿ (ಮುಂಬೈ ಮಹಾನಗರ ಪಾಲಿಕೆ) ನೋಟಿಸ್ ನೀಡಿದೆ. ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ, ಏಳು ದಿನಗಳಲ್ಲಿ ಉತ್ತರ ನೀಡಬೇಕು ಎಂದು ಸೂಚಿಸಿದೆ. ಮುಂದೆ ಓದಿ.....

  'ಕಂಗನಾ ರಣಾವತ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ' ಎಂದ ನಿರ್ದೇಶಕ'ಕಂಗನಾ ರಣಾವತ್ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ' ಎಂದ ನಿರ್ದೇಶಕ

  ಮನೀಶ್ ಮಲ್ಹೋತ್ರಾ ಮೇಲೆ ಬಿಎಂಸಿ ಕಣ್ಣು!

  ಮನೀಶ್ ಮಲ್ಹೋತ್ರಾ ಮೇಲೆ ಬಿಎಂಸಿ ಕಣ್ಣು!

  ಬಾಲಿವುಡ್‌ನ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಕಟ್ಟಡ ನಟಿ ಕಂಗನಾ ರಣಾವತ್ ಕಚೇರಿಯ ಪಕ್ಕದಲ್ಲಿದೆ ಎಂದು ತಿಳಿದು ಬಂದಿದೆ. ಮನೀಶ್ ಬಂಗಲೆಯನ್ನು ಕಾನೂನುಬಾಹಿರವಾಗಿ ಮಾರ್ಪಡು ಮಾಡಲಾಗಿದೆ ಎಂದು ಆರೋಪಿಸಿದ ಬಿಎಂಸಿ ಸ್ಪಷ್ಟನೆ ಕೇಳಿದೆ.

  ವಾಣಿಜ್ಯಕ್ಕಾಗಿ ಮಾರ್ಪಡು ಮಾಡಿರುವ ಆರೋಪ

  ವಾಣಿಜ್ಯಕ್ಕಾಗಿ ಮಾರ್ಪಡು ಮಾಡಿರುವ ಆರೋಪ

  ಮುಂಬೈನ ಪಾಲಿ ಹಿಲ್‌ನ ನರ್ಗಿಸ್ ದತ್ ರಸ್ತೆಯಲ್ಲಿರುವ ಮನೀಶ್ ಮಲ್ಹೋತ್ರಾ ಅವರ ಕಚೇರಿ ನಿರ್ಮಾಣದಲ್ಲಿ ಉಲ್ಲಂಘನೆಯಾಗಿರುವ ಬಗ್ಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಖಾಸಗಿ ಮನೆಯನ್ನು ವಾಣಿಜ್ಯ ವ್ಯವಹಾರಕ್ಕಾಗಿ ಮಾರ್ಪಡು ಮಾಡಲಾಗಿದೆ ಎಂದು ಪ್ರಮುಖ ಆರೋಪ ಕೇಳಿ ಬಂದಿದೆ.

  ಏಳು ದಿನಗಳಲ್ಲಿ ಉತ್ತರ ಕೇಳಿದ ಪಾಲಿಕೆ

  ಏಳು ದಿನಗಳಲ್ಲಿ ಉತ್ತರ ಕೇಳಿದ ಪಾಲಿಕೆ

  ಮನೀಶ್ ಮಲ್ಹೋತ್ರಾ ಅವರ ಕಟ್ಟಡದಲ್ಲಿ ಅಕ್ರಮ ನಡೆದಿದೆ ಎನ್ನುವ ವಿಚಾರಕ್ಕೆ ಏಳು ದಿನಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಮುಂಬೈ ಮಹಾನಗರ ಪಾಲಿಕೆ ಆದೇಶಿಸಿದೆ. ಸದ್ಯಕ್ಕೆ ಕೊರೊನಾ ವೈರಸ್ ಪ್ರೋಟೋಕಾಲ್‌ನಲ್ಲಿ ಸೆಪ್ಟೆಂಬರ್ 30ರವರೆಗೂ ಯಾವುದೇ ಕಟ್ಟಡಗಳನ್ನು ತೆರವು ಕಾರ್ಯಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ.

  BiggBoss ಗೆದ್ಮೆಲೆ ಪ್ರಥಮ ಒಳ್ಳೆ ಕೆಲಸ | Olle Hudga Pratham | Filmibeat Kannada
  ಮಹಾ ಸರ್ಕಾರದ ವಿರುದ್ಧ ಕಂಗನಾ ಟೀಕೆ

  ಮಹಾ ಸರ್ಕಾರದ ವಿರುದ್ಧ ಕಂಗನಾ ಟೀಕೆ

  ಸುಶಾಂತ್ ಸಿಂಗ್ ರಜಪೂತ್ ತನಿಖೆಯಲ್ಲಿ ಮುಂಬೈ ಪೊಲೀಸರನ್ನು ಪ್ರಶ್ನಿಸಿದ್ದರು. ಡ್ರಗ್ಸ್ ವಿಚಾರದಲ್ಲಿ ಬಾಲಿವುಡ್‌ ಸ್ಟಾರ್‌ಗಳ ವಿರುದ್ಧ ಟೀಕೆ ಮಾಡಿದರು. ಮುಂಬೈ ನಗರವನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ದೂರಿದರು. ಇದೆಲ್ಲದರ ಪರಿಣಾಮ ಮುಂಬೈ ನಗರ ಪಾಲಿಕೆ ಉದ್ದೇಶಪೂರ್ವಕವಾಗಿ ಕಂಗನಾ ಕಚೇರಿಯನ್ನು ತೆರವುಗೊಳಿಸುವ ಕಾರ್ಯಕ್ಕೆ ಕೈ ಹಾಕಿತ್ತು ಎಂದು ಹೇಳಲಾಗಿದೆ. ಸರ್ಕಾರದ ಹಾಗೂ ಪಾಲಿಕೆಯ ನಡೆಯನ್ನು ಖಂಡಿಸಿರುವ ನಟಿ ''ಇದು ಶಿವಸೇನೆ ಅಲ್ಲ, ಸೋನಿಯಾ ಸೇನೆ'' ಎಂದಿದ್ದಾರೆ.

  English summary
  Brihanmumbai Municipal Corporation (BMC) notifies fashion designer Manish Malhotra over illegal alterations at his office building.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X