For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ನನ್ನು ಹೊಗಳಿದ ನಟ ಆಮೀರ್ ಖಾನ್: ಅಕ್ಷಯ್ ಪ್ರತಿಕ್ರಿಯೆ ಹೀಗಿದೆ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಬೆಲ್ ಬಾಟಂ ಸಿನಿಮಾದ ಚಿತ್ರೀಕರಣ ಮುಗಿಸಿರುವ ಅಕ್ಷಯ್ ಇದೀಗ ಪೃಥ್ವಿರಾಜ್ ಚಿತ್ರದಲ್ಲಿ ನಿರತರಾಗಿದ್ದಾರೆ. ಈ ನಡುವೆ ಅಕ್ಷಯ್ ಲಕ್ಷ್ಮೀ ಬಾಂಬ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

  ಬಾಲಿವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಅಕ್ಷಯ್ ಕುಮಾರ್ ಬಗ್ಗೆ ಮತ್ತೋರ್ವ ಸ್ಟಾರ್ ನಟ ಆಮೀರ್ ಖಾನ್ ಹಾಡಿ ಹೊಗಳಿದ್ದಾರೆ. ಆಮೀರ್ ಖಾನ್ ಮನಸಾರೆ ಹೊಗಳಲು ಕಾರಣವಾಗಿದ್ದು, ಲಕ್ಷ್ಮೀ ಬಾಂಬ್ ಸಿನಿಮಾದ ಟ್ರೈಲರ್. ಇತ್ತೀಚಿಗೆ ಲಕ್ಷ್ಮೀ ಬಾಂಬ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲರ ಮೆಚ್ಚುಗೆ ಪಡೆದ ಲಕ್ಷೀ ಬಾಂಬ್ ಟ್ರೈಲರ್ ಆಮೀರ್ ಖಾನ್ ಮನಗೆದ್ದಿದೆ.

  ಅಕ್ಷಯ್ ಕುಮಾರ್ 'ಲಕ್ಷ್ಮಿ ಬಾಂಬ್' ಸಿನಿಮಾ ಬಹಿಷ್ಕರಿಸುವಂತೆ ನೆಟ್ಟಿಗರ ಅಭಿಯಾನ: ಕಾರಣವೇನು?

  ಟ್ರೈಲರ್ ನೋಡಿದ ಆಮೀರ್ ಖಾನ್, 'ಪ್ರೀತಿಯ ಅಕ್ಷಯ್ ಕುಮಾರ್, ಎಂಥ ಅದ್ಭುತ ಟ್ರೈಲರ್, ನನ್ನ ಗೆಳೆಯ. ಈ ಸಿನಿಮಾ ನೋಡಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ಕಾಯುತ್ತೇನೆ. ನಿಮ್ಮ ಅಭಿನಯ ಅಮೋಘ, ನನ್ನ ಕಡೆಯಿಂದ ಇಡೀ ತಂಡಕ್ಕೆ ಶುಭಾಶಯಗಳು' ಎಂದು ಟ್ವೀಟ್ ಮಾಡಿದ್ದಾರೆ.

  ಆಮೀರ್ ಖಾನ್ ಸಿನಿಮಾ ಮತ್ತು ಅಭಿನಯವನ್ನು ಹೊಗಳುತಿದ್ದಂತೆ ಅಕ್ಷಯ್ ಕುಮಾರ್ ಸಹ ಪ್ರತಿಕ್ರಿಯೆ ನೀಡಿದ್ದಾರೆ. 'ಪ್ರೀತಿಯ ಆಮೀರ್ ಖಾನ್ ನಿಮ್ಮ ಈ ಪ್ರೀತಿಯ ಮಾತುಗಳಿಗೆ ಮತ್ತು ಬೆಂಬಲ, ಪ್ರೋತ್ಸಾಹಕ್ಕಾಗಿ ಧನ್ಯವಾದಗಳು. ಈ ಸಮಯದಲ್ಲಿ ಇದು ಮಹತ್ವದಾಗಿದೆ. ಹೃದಯಸ್ಪರ್ಶಿಯಾಗಿದೆ.' ಎಂದು ಪ್ರತಿಕ್ರಿಯೆ ನೀಡಿ 'ಮೆನ್ ಸಪೋರ್ಟಿಂಗ್ ಮೆನ್' ಎಂದು ಬರೆದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸೂಪರ್ ಗಳ ಮಾತುಕತೆ ನೋಡಿ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಇಬ್ಬರಿಗೂ ಮೆಚ್ಚುಗೆಯ ಮಾತುಗಳು ಹರಿದುಬರುತ್ತಿರುವೆ.

  ಲಕ್ಷ್ಮೀ ಬಾಂಬ್ ಸಿನಿಮಾ ತಮಿಳಿನ ಸೂಪರ್ ಹಿಟ್ ಕಾಂಚನ ಸಿನಿಮಾದ ರಿಮೇಕ್ ಆಗಿದೆ. ಮೂಲ ನಿರ್ದೇಶಕ ರಾಘವ್ ಲಾರೆನ್ಸ್ ಈ ಸಿನಿಮಾಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಗೆ ಜೋಡಿಯಾಗಿ ಕಿಯಾರಾ ಅಡ್ವಾನಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

  English summary
  Bollywood Actor Aamir Khan praises to Actor Akshay Kumar. Aamir Khan says what a superb trailer, my friend. Can't wait to see it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X