For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವು-ಬದುಕಿಗಾಗಿ ಹೋರಾಡುತ್ತಿರುವ ಬಾಲಿವುಡ್ ನಟ

  |

  ಬಾಲಿವುಡ್ ಹಿರಿಯ ನಟ ಫರಾಜ್ ಖಾನ್ ಅನಾರೋಗ್ಯಕ್ಕೆ ತುತ್ತಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಐಸಿಯುನಲ್ಲಿ ಬದುಕಿಗಾಗಿ ಸೆಣಸಾಡುತ್ತಿದ್ದಾರೆ.

  ಮೆದುಳಿಗೆ ಸಂಬಂಧಿಸಿದಂತೆ ಕಾಯಿಲೆಯಿಂದ ಬಳಲುತ್ತಿರುವ ಫರಾಜ್ ಖಾನ್ ಆರೋಗ್ಯ ಸ್ಥಿತಿ ಈಗ ಬಹಳ ಗಂಭೀರವಾಗಿದೆ. ಕಳೆದ ಐದು ದಿನಗಳಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದಯುತ್ತಿದ್ದು, ವೆಂಟಿಲೇಟರ್ ಸಹಾಯದಿಂದ ಇದ್ದಾರೆ ಎಂದು ಹೇಳಲಾಗಿದೆ. ಮುಂದೆ ಓದಿ...

  ಸಹೋದರ ಹೇಳಿದ್ದೇನು?

  ಸಹೋದರ ಹೇಳಿದ್ದೇನು?

  ಫರಾಜ್ ಖಾನ್ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ಸಹೋದರ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದು ''ಫರಾಜ್ ಸುಮಾರು ಒಂದು ವರ್ಷದಿಂದ ಕೆಮ್ಮು ಮತ್ತು ಅವನ ಎದೆಯಲ್ಲಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿದೆ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೆದುಳಿನಲ್ಲಿ ಹರ್ಪಿಸ್ ಸೋಂಕು ಪತ್ತೆಯಾದ ಬಳಿಕ ಮೂರು ಬಾರಿ ರೋಗಗ್ರಸ್ತವಾಗುವಿಕೆ ಆಯಿತು. ಅದಾದ ಬಳಿಕ ಅವನ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿತು' ಎಂದು ತಿಳಿಸಿದ್ದಾರೆ.

  ಚಿತ್ರೀಕರಣ ವೇಳೆ ಗಾಯಗೊಂಡ ನಟ ಟೋವಿನೋ ಥಾಮಸ್ ಆರೋಗ್ಯದಲ್ಲಿ ಸ್ಥಿರ: ICUನಲ್ಲಿ ಚಿಕಿತ್ಸೆಚಿತ್ರೀಕರಣ ವೇಳೆ ಗಾಯಗೊಂಡ ನಟ ಟೋವಿನೋ ಥಾಮಸ್ ಆರೋಗ್ಯದಲ್ಲಿ ಸ್ಥಿರ: ICUನಲ್ಲಿ ಚಿಕಿತ್ಸೆ

  ಶೇಕಡಾ 50ರಷ್ಟು ಬದುಕುಳಿಯುವ ಸಾಧ್ಯತೆ

  ಶೇಕಡಾ 50ರಷ್ಟು ಬದುಕುಳಿಯುವ ಸಾಧ್ಯತೆ

  "ಕಳೆದ ಐದು ದಿನಗಳಿಂದ ವೆಂಟಿಲೇಟರ್‌ನಲ್ಲಿದ್ದಾರೆ ಮತ್ತು ವೈದ್ಯರ ಪ್ರಕಾರ, ಅವರ ಬದುಕುಳಿಯುವ ಸಾಧ್ಯತೆಗಳು ಶೇಕಡಾ 50% ರಷ್ಟು ಮಾತ್ರ ಸಾಧ್ಯತೆ ಇದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೂ ಪ್ರಜ್ಞಾಹೀನರಾಗಿದ್ದಾರೆ" ಎಂದು ಸಹೋದರ ಫಹ್ಮಾನ್ ಮಾಹಿತಿ ನೀಡಿದ್ದಾರೆ.

  ಹಣಕಾಸಿನ ನೆರವು ಬೇಕಾಗಿದೆ

  ಹಣಕಾಸಿನ ನೆರವು ಬೇಕಾಗಿದೆ

  "ಹೆಚ್ಚಿನ ಚಿಕಿತ್ಸೆಗಾಗಿ ನಮಗೆ 25 ಲಕ್ಷ ರೂ ಹಣ ಬೇಕು. ನಮ್ಮ ಬಳಿಯಿದ್ದ ಹಣವನ್ನು ಈಗಾಗಲೇ ಚಿಕಿತ್ಸೆಗೆ ಖರ್ಚು ಮಾಡಲಾಗಿದೆ. ಮುಂದೆ ಏನಾಗಲಿದೆ ಅಥವಾ ಚಿಕಿತ್ಸೆಗಾಗಿ ನಾವು ಹೇಗೆ ಹಣಕಾಸು ವ್ಯವಸ್ಥೆ ಮಾಡಲಿದ್ದೇವೆ ಎಂದು ನನಗೆ ತಿಳಿದಿಲ್ಲ. ಕೊರೊನಾದಿಂದ ಪ್ರತಿಯೊಬ್ಬರೂ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದಾರೆ. ನಾವು ಭರವಸೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾವು ನಿಧಿಸಂಗ್ರಹದ ಮೂಲಕ ಸಹಾಯವನ್ನು ಕೇಳಲು ಬಯಸುತ್ತಿದ್ದೇವೆ"ಎಂದು ನಟನ ಸಹೋದರ ಟ್ಯಾಬ್ಲಾಯ್ಡ್‌ಗೆ ತಿಳಿಸಿದ್ದಾರೆ.

  ಬೆಂಗಾಲಿಯ ಖ್ಯಾತ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ: ICUನಲ್ಲಿ ಚಿಕಿತ್ಸೆಬೆಂಗಾಲಿಯ ಖ್ಯಾತ ನಟ ಸೌಮಿತ್ರಾ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ: ICUನಲ್ಲಿ ಚಿಕಿತ್ಸೆ

  ಸಹಾಯಕ್ಕಾಗಿ ಬೇಡಿದ ಪೂಜಾ ಭಟ್

  ಸಹಾಯಕ್ಕಾಗಿ ಬೇಡಿದ ಪೂಜಾ ಭಟ್

  ಫರಾಜ್ ಖಾನ್ ಅವರ ಅನಾರೋಗ್ಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟಿ ಪೂಜಾ ಭಟ್ ತಮ್ಮ ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಫರಾಜ್ ಅವರ ಜೀವ ಉಳಿಸಲು ಆರ್ಥಿಕ ನೆರವು ನೀಡುವಂತೆ ಅಭಿಮಾನಿಗಳನ್ನು ಕೋರಿದ್ದಾರೆ. ನಿಧಿಸಂಗ್ರಹಣೆ ಲಿಂಕ್ ಹಂಚಿಕೊಂಡಿರುವ ನಟಿ, "ಸಾಧ್ಯವಾದರೆ ನೆರವು ನೀಡಿ. ಇದನ್ನು ಹಂಚಿಕೊಳ್ಳಿ'' ಎಂದು ಮನವಿ ಮಾಡಿದ್ದಾರೆ.

  ಪ್ರಣಿತಾ ಹೆಸರು ಹೇಳಿ 13 ಲಕ್ಷ ಕೊಳ್ಳೆ ಹೊಡೆದ ಖದೀಮರು | Filmibeat Kannada
  ಫರೀಬ್ ಚಿತ್ರದ ಮೂಲಕ ಎಂಟ್ರಿ

  ಫರೀಬ್ ಚಿತ್ರದ ಮೂಲಕ ಎಂಟ್ರಿ

  ನಟ ಯೂಸೂಫ್ ಖಾನ್ ಅವರ ಪುತ್ರ ಫರಾಜ್ ಖಾನ್ 1989ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರಕ್ಕೆ ನಾಯಕರಾಗಿ ಆಯ್ಕೆಯಾಗಿದ್ದರು. ಚಿತ್ರೀಕರಣ ಸಹ ಆರಂಭವಾಗಿತ್ತು. ನಂತರ ಆ ಜಾಗಕ್ಕೆ ಸಲ್ಮಾನ್ ಖಾನ್ ಬಂದರು. 1996ರಲ್ಲಿ 'ಫರೀಬ್' ಚಿತ್ರದಲ್ಲಿ ನಟಿಸಿದರು. ರಾಣಿ ಮುಖರ್ಜಿ ಜೊತೆ 'ಮೆಹಂದಿ' ಸಿನಿಮಾ ಮಾಡಿದರು.

  English summary
  Rani Mukerji's Mehendi Movie Co-Star, Old Bollywood Actor Faraaz Khan Battles For Life In The ICU At Bengaluru Hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X